ಅತ್ಯಾಚಾರದಲ್ಲೇ ’ಪರಮಾನಂದ’ ಕಾಣುತ್ತಿದ್ದ ಬಾಬಾ ಸೆರೆ

Update: 2016-05-24 08:20 GMT

ಹೊಸದಿಲ್ಲಿ, ಮೇ 24: ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿದ್ದ ಬಾಬಾ ಪರಮಾನಂದನನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬಾಬಾನ  ಬಳಿಯಿದ್ದ 8 ಅಶ್ಲೀಲ ಸಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನನ್ನು ಉತ್ತರ ಪ್ರದೇಶಕ್ಕೆ ಕರೆ ತರಲಾಗುವುದು ಎಂದು ಬರಾಬಂಕಿ ಪೊಲೀಸ್‌ ಅಧೀಕ್ಷಕರಾದ ಅಬ್ದುಲ್‌ ಹಮೀದ್‌ ತಿಳಿಸಿದ್ದಾರೆ.
ವಶಪಡಿಸಿಕೊಂಡ ಸಿಡಿಗಳನ್ನು ಟೆಸ್ಟ್ ಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು  ಎಂದು ಮಾಹಿತಿ ನೀಡಿರುವ ಪೊಲೀಸ್ ಅಧೀಕ್ಷಕ ಅಬ್ದುಲ್ ಹಮೀದ್‌  ಅವರು ಪರಮಾನಂದ ವಿರುದ್ಧ 12  ಪ್ರಕರಣಗಳು ದಾಖಲಾಗಿವೆ.
ಉತ್ತರ ಪ್ರದೇಶದಲ್ಲಿನ ಬಾರಾಬಂಕಿ ಆಶ್ರಮದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ತನ್ನ ಬೇಟೆಯ ಮೃಗವನ್ನು ಗುರುತಿಸುತ್ತಿದ್ದ  ಎಂದು ಹೇಳಲಾಗಿದೆ. ಬಾಬಾ ಮಕ್ಕಳು ಇಲ್ಲದ ವಿವಾಹಿತ ಮಹಿಳೆಯರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಬಾಬಾನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News