ಲಿಮ್ಕಾ ಬುಕ್‌ಗೆ ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ !

Update: 2016-06-04 12:18 GMT

ಮುಂಬೈ ಜೂನ್ 4:ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ ವೀಕ್ಷಕರ ಪ್ರೀತಿಯಿಂದ ಮತ್ತೊಂದು ಯಶಸ್ಸನ್ನು ಸಂಪಾದಿಸಿಕೊಂಡಿದೆ. ತಮ್ಮ ಧಾರಾವಾಹಿಗಳ ಮೂಲಕ ಯಾವಾಗಲು ವೀಕ್ಷಕರಿಗೆ ಸಮಾಜಕ್ಕೆ ಸಂಬಂಧಿಸಿದ ವಿಷಯಗಳನ್ನು ತುಂಬ ಸುಲಭವಾಗಿ ನವಿರು ಹಾಸ್ಯ ಮೂಲಕ ತಲಪಿಸುತ್ತಾ ಬಂದಿದೆ. ಅದರ ಪ್ರತಿಯೊಂದು ಧಾರಾವಾಹಿ ಮನೆಗಳಲ್ಲಿ ನಗು ತರಿಸುತ್ತದೆ. ಈ ಶೋವನ್ನು ದೇಶದ ಪ್ರಧಾನಿ ಸ್ಚಚ್ಛತಾ ಅಭಿಯಾನಕ್ಕೆ ಸೇರಿಸಿಕೊಂಡಿದ್ದಾರೆ. ಇದು ವೀಕ್ಷಕರ ನೆಚ್ಚಿನ ಶೋ ಆಗಿದೆ. ಇದುಈವರೆಗೆ 1900ಕ್ಕೂ ಅಧಿಕ ಪ್ರದರ್ಶನವನ್ನು ನೀಡಿದೆ. ಮತ್ತು ಅದಕ್ಕೆ ಉತ್ತಮ ಟಿಆರ್‌ಪಿ ಸಿಕ್ಕಿದೆ. ಇದು ದಿನಾಲೂ ಪ್ರಸಾರವಾಗುತ್ತಿರುವ ಎಲ್ಲರೂ ನೋಡಬಹುದಾದಂತಹ ಹಾಸ್ಯಧಾರಾವಾಹಿಯಾಗಿದೆ.

ಈಗ ಈ ಧಾರವಾಹಿ ಇನ್ನೊಂದು ಸಾಧನೆಯ ಗರಿಯನ್ನು ತನ್ನ ತಲೆಗೆ ಮುಡಿದು ಕೊಂಡಿದೆ. ದಿನಾಲೂ ಪ್ರಸಾರವಾಗುವ ಅತಿಹೆಚ್ಚು ಧಾರಾವಾಹಿಗಳನ್ನು ಪ್ರಸಾರಿಸಿದೆ ಎಂದು ಲಿಮ್ಕಾ ಬುಕ್‌ನಲ್ಲಿ ಅದು ತನ್ನ ಹೆಸರನ್ನು ಸೇರಿಸಿದೆ. ಇದರ ನಿರ್ಮಾಪಕ ಅಸಿತ್ ಕುಮಾರ್‌ಮೋದ ನಮ್ಮ ಎಪಿಸೋಡ್ ಪ್ರಸಾರ 2008ಜುಲೈ 28ಕ್ಕೆ ಆರಂಭವಾಯಿತು. ಆಗ ಬಹಳ ಜನರು ಇದರ ಕಾನ್ಸೆಪ್ಟ್‌ನ ವಿರುದ್ಧ ನಿಲುವು ಇಟ್ಟುಕೊಂಡಿದ್ದರು. ಆದರೆ ನನ್ನ ತಂಡಕ್ಕೆ ಈ ಪ್ರದರ್ಶನದಲ್ಲಿ ತುಂಬು ಭರವಸೆ ಇತ್ತು. ನಾವು ಒಂದು ದಿನ ಯಶಸ್ಸು ಹೊಂದುವೆವು ಎಂದು ನಾವು ವಿಶ್ವಾಸದಲ್ಲಿದ್ದೆವು" ಎಂದು ಅವರು ಹೇಳಿದ್ದಾರೆ. ಇಂದು ತಾರಕ್ ಮಹ್ತಾ ಕಾ ಉಲ್ಟಾ ಚಷ್ಮಾ ಮನೆಮನೆ ಮಾತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News