ಪೊಲೀಸ್ ಹತ್ಯೆ:ಕಾಶ್ಮೀರದಲ್ಲಾದರೆ ಉಗ್ರರು, ಮಥುರಾದಲ್ಲಿ ಸತ್ಯಾಗ್ರಹಿಗಳು!

Update: 2016-06-09 15:50 GMT

ನಗರದ ಮಧ್ಯಭಾಗದಲ್ಲೇ ತಲೆ ಎತ್ತಿ, ರಾಜ್ಯ ಪೊಲೀಸರ ವಿರುದ್ಧ ತಿರುಗಿಬಿದ್ದ ಈ ಜನಸೇನೆಯನ್ನು ಯಾವುದಕ್ಕೆ ಬಳಸಲಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಇತರೆಡೆಗಳಲ್ಲಿ ಅಂದರೆ ಛತ್ತೀಸ್‌ಗಢದ ಕಾಡುಗಳಲ್ಲಿ, ಕಾಶ್ಮೀರ ಕಣಿವೆಯಲ್ಲಿ ಅಥವಾ ಮಣಿಪುರದ ಬೆಟ್ಟಗಳಲ್ಲಿ ಇವರು ಉಗ್ರರು, ಭಯೋತ್ಪಾದಕರು, ಎಡಪಂಥೀಯ ಪ್ರತ್ಯೇಕತಾವಾದಿಗಳಾಗುತ್ತಾರೆ. ಆದರೆ ಮಥುರಾದ ಹೃದಯ ಭಾಗದ ಜವಾಹರ್‌ಬಾಗ್‌ನಲ್ಲಿ ಬಲಿಷ್ಠವಾಗಿ ಬೆಳೆದ ‘ಸ್ವಾೀನ್ ಭಾರತ ವಿಧೇಯಕ ಸತ್ಯಾಗ್ರಹಿ ಸಂಘಟನೆ’ಯ ಬಗೆಗಿನ ಮುಖ್ಯವಾಹಿನಿ ಮಾಧ್ಯಮಗಳ ಪರಿಭಾಷೆ ಮಾತ್ರ ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ.
ಸತ್ಯಾಗ್ರಹಿಗಳು ಮರದ ತುದಿಯಿಂದ ಪೊಲೀಸರತ್ತ ಗುಂಡುಹಾರಿಸಿದರು, ಕೈಬಾಂಬ್‌ಗಳನ್ನು ಎಸೆದರು ಹಾಗೂ ಸಿಲಿಂಡರ್ ಸೊಓಂೀಟಿಸಿ, ಶಸಸಜ್ಜಿತ ಸಂಘರ್ಷಕ್ಕೆ ಇಳಿದರು ಎಂದು ಹಲವು ವರದಿಗಳಲ್ಲಿ ಬಣ್ಣಿಸಲಾಗಿದೆ.

ಗುರುವಾರ ಸಂಜೆ ಆರಂಭವಾದ ಮುಖಾಮುಖಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ 29 ಮಂದಿಯನ್ನು ಹತ್ಯೆ ಮಾಡಲಾಗಿದೆ. ಇವರು ಪಠ್ಯಪುಸ್ತಕಗಳಲ್ಲಿ ವಿವರಿಸಿರುವ ಸತ್ಯಕ್ಕಾಗಿ ಆಗ್ರಹಿಸುವ ಸತ್ಯಾಗ್ರಹಿಗಳಲ್ಲ; ಅಥವಾ ಯಾವುದೇ ರಾಜಕೀಯ ಬೇಡಿಕೆ ಅಥವಾ ಇನ್ಯಾವುದೇ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಲು ದೇಹದಂಡನೆ ಅಥವಾ ಸ್ವಯಂ ತ್ಯಾಗ ಮಾರ್ಗದಿಂದ ನಡೆಯುತ್ತಿದ್ದ ಪ್ರತಿಭಟನೆ ಇದಲ್ಲ.

ಇತರ ಕೆಲ ವರದಿಗಳಲ್ಲಿ, ಹೇಗೆ ಉದ್ರಿಕ್ತ ಪ್ರತಿಭಟನಾಕಾರರು, ಪೊಲೀಸರನ್ನು ಅಪಹರಿಸಿ ಹತ್ಯೆ ಮಾಡಿದರು ಎಂದು ವಿವರಿಸಲಾಗಿದೆ. ಅತಿಕ್ರಮಣಗಾರರು ಉದ್ಯಾನವನವನ್ನು ವಶಪಡಿಸಿಕೊಂಡು, ಮನೆಗಳನ್ನು ನಿರ್ಮಿಸಿದ್ದಲ್ಲದೇ, ಪರ್ಯಾಯ ಸರಕಾರವನ್ನೂ ನಡೆಸುತ್ತಿದ್ದರು. ಇದರ ಜತೆಗೆ ತರಕಾರಿ, ಅಕ್ಕಿ ಸಕ್ಕರೆಯಂಥ ಅಗತ್ಯ ವಸ್ತುಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಅತಿಕ್ರಮಣಕಾರರ ವಿರುದ್ಧದ ಕಾರ್ಯಾಚರಣೆ ವೇಳೆ ದೊಡ್ಡ ಪ್ರಮಾಣದ ಶಸಾಸಗಳನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಇವರು ಸುತ್ತಮುತ್ತಲ ಇತರ ಅತಿಕ್ರಮಣಕಾರರಂತೆ ಟರ್ಪಲ್ ಹಾಸಿದ ಡೇರೆಗಳಲ್ಲಿ, ಹೊಗೆಯುಗುಳುವ ಉರುವಲು ಒಲೆಗಳಲ್ಲಿ ಅಡುಗೆ ಮಾಡಿಕೊಂಡು ಜೀವನ ತಳ್ಳುವವರಲ್ಲ.
ಜವಾಹರ್‌ಬಾಗ್ ಉದ್ಯಾನವನವನ್ನು 2014ರಲ್ಲಿ ಅತಿಕ್ರಮಿಸಿಕೊಂಡ ಬೋಸ್ ಪಂಥದ 3,000 ಮಂದಿ, ಮಕ್ಕಳಿಗೆ ಶಸಾಸಗಳ ತರಬೇತಿ ನೀಡಿದ್ದರು ಹಾಗೂ ಕಾರ್ಯಾಚರಣೆಗಾಗಿ ಹಲವು ಬೆಟಾಲಿಯನ್‌ಗಳನ್ನು ಸಜ್ಜುಗೊಳಿಸಿದ್ದರು. ಈ ಪಂಥದ ನೇತಾರನಾಗಿದ್ದ ರಾಮ್ ವೃಕ್ಷ ಯಾದವ್‌ರನ್ನು ಬಂಡುಕೋರ ನಾಯಕ ಎಂದು ಕರೆಯಲಾಯಿತು. ಆ ವ್ಯಕ್ತಿಯ ಅರ್ಹತೆಗಿಂತ ಹೆಚ್ಚಾಗಿ, ಸೈದ್ಧಾಂತಿಕ ಸುಸಂಬದ್ಧತೆ ಕಲ್ಪಿಸಲಾಯಿತು. ಸುತ್ತಮುತ್ತಲ ಜನರು ಅವರನ್ನು ನಕ್ಸಲೀಯರು ಎಂದು ಕರೆಯುತ್ತಿದ್ದುದಾಗಿ ಒಂದು ವರದಿ ಹೇಳಿದೆ. ಆದರೆ ಈ ಬಣ್ಣನೆಗೆ ಕೂಡಾ ಇವರು ಅರ್ಹರಲ್ಲ.

ಕಲ್ಪನಾತೀತ
ಬಹುಶಃ ಇಂಥ ಸಂದೇಹಾಸ್ಪದ ಪರಿಭಾಷೆಗೆ ಕಾರಣವೆಂದರೆ ಜನ ಆ ಕ್ಷಣಕ್ಕೆ ದಿಕ್ಕು ತೋಚದಾಗಿದ್ದರು. ಗುರುವಾರ ಮೊದಲು ಪೊಲೀಸರು ಇವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದಾಗ, ಮಥುರಾದ ಹೊರಗಿನವರಿಗೆ ಸ್ವಾೀನ ಭಾರತ್ ವಿಧೇಯಕ ಸತ್ಯಾಗ್ರಹ ಬಗ್ಗೆ ಅಥವಾ ಅವರ ಸಶಸ ಪಡೆ ಸಾೀನ ಭಾರತ ಸುಭಾಸ್ ಸೇನೆಯ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ. ಆದರೆ ಜವಾಹರ್‌ಬಾಗ್ ಸಂಘರ್ಷದ ಹಿನ್ನೆಲೆಯಲ್ಲಿ ಈ ಕಲ್ಪನಾತೀತ ಸಂಘಟನೆಯ ಕರಾಳ ಮುಖ ನಿಧಾನವಾಗಿ ಬೆಳಕಿಗೆ ಬರುತ್ತಿದೆ.
ಈ ಪಂಥದ ಸಂಸ್ಥಾಪಕ, ದೇವಮಾನವ, ತನ್ನನ್ನು ಸುಭಾಸ್‌ಚಂದ್ರ ಬೋಸ್ ಎಂದು ಕರೆದುಕೊಂಡಿದ್ದರು. ಹೊಸದಾಗಿ ಆಝಾದ್ ಹಿಂದ್ ಪೌಝ್ ಕರೆನ್ಸಿ ಆರಂಭಿಸುವ ಕಲ್ಪನೆ ಹೊಂದಿದ್ದ ಈ ಮುಖ್ಯಸ್ಥ, ಭಾರತೀಯ ರೂಪಾಯಿಯ ವೌಲ್ಯವನ್ನು ಸಿನಿಕ ವಿದೇಶಿ ಹಿತಾಸಕ್ತಿಗಳು ಅಡಗಿಸಿವೆ ಎಂದು ಅಭಿಪ್ರಾಯಪಟ್ಟಿದ್ದರು.

ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್ ಅಥವಾ 12 ತೊಲೆ ಚಿನ್ನ ಖರೀದಿಸುವ ವಾಸ್ತವ ವೌಲ್ಯ ಇದೆ ಎನ್ನುವುದು ಈತನ ಪ್ರತಿಪಾದನೆಯಾಗಿತ್ತು. ಈ ಆರ್ಥಿಕ ಸ್ವಾತಂತ್ರ್ಯದ ಚಳವಳಿ, ಪ್ರಧಾನಿ ಹಾಗೂ ರಾಷ್ಟ್ರಪತಿ ಹುದ್ದೆಯನ್ನು ರದ್ದುಪಡಿಸಲೂ ಆಗ್ರಹಿಸಿತ್ತು. ಇಲ್ಲಿ ಮಕ್ಕಳು ತಮ್ಮ ಬೆಳಗ್ಗಿನ ಪ್ರಾರ್ಥನೆಗೆ ಕ್ರಾಂತಿಕಾರಿ ಮಂತ್ರಗಳನ್ನು ಪಠಿಸುತ್ತಿದ್ದರು. ಈ ಭಾರತೀಯ ದೇಶಭಕ್ತರು, ಭಾರತದಿಂದ ಪ್ರತ್ಯೇಕವಾಗುವ ಕನಸು ಕಂಡಿದ್ದರು. ಭಾಗಶಃ ಕತ್ತುಹಿಸುಕುವ ಆಧ್ಯಾತ್ಮ ಒಡೆದ ಮಡಿಕೆಯ ಆರ್ಥಿಕತೆಗೆ ಪೂರಕವಾಗಿತ್ತು. ಇಂಥ ಗುಂಪನ್ನು ನೀವು ಹೇಗೆ ರಾಜಕೀಯ ಅಭಿಪ್ರಾಯ ಹಾಗೂ ಉದ್ದೇಶದ ಗುಂಪುಗಳ ಜತೆ ಗುರುತಿಸಲು ಸಾಧ್ಯ?
ಕೆಲ ವರದಿಗಳು ಸಂಶಯದ ದೃಷ್ಟಿಯಿಂದ ಈ ಜವಾಹಾರ್‌ಬಾಗ್ ಸೆಟ್ಲ್‌ಮೆಂಟನ್ನು ‘ಫ್ರೀ ನೇಷನ್ಸ್ ಕ್ಯಾಂಪ್’ ಎಂದು ಕರೆದವು. ಈ ತಲೆಕೆಳಗಾದ ದೇಶದೊಳಗಿನ ದೇಶವನ್ನು ನೀವು ಹೇಗೆ ವ್ಯಾಖ್ಯಾನಿಸಲು ಸಾಧ್ಯ?

ಪರಕೀಯ
ಆದರೆ ಜವಾಹಾರ್‌ಬಾಗ್‌ನ ಭೂಗೋಳವನ್ನು ಗಮನಿಸಿದರೆ, ಈ ನಿವಾಸಿಗಳನ್ನು ಉಗ್ರವಾದಿಗಳು ಅಥವಾ ದಂಗೆಕೋರರೆಂದು ಕರೆಯದಿರಲು ಕಾರಣವಿದೆ. ಈ ಉದ್ಯಾನವನ ಮಥುರಾ ನಗರದ ಒಳಗೆಯೇ, ಸರಕಾರಿ ನೌಕಕರರೇ ಅಕವಾಗಿರುವ ಪ್ರದೇಶ. ತಮ್ಮ ಮನೆಗಳ ಮಹಡಿಗಳಿಂದಲೇ ಇವರು, ಚಳವಳಿಗಾರರು ಇಲ್ಲಿನ ನಿವಾಸಿಗಳಾದದ್ದು, ಅವರ ಮಕ್ಕಳು ಮುಂಜಾನೆ ಲಾಠಿ ಅಭ್ಯಾಸ ಮಾಡುತ್ತಿದ್ದುದನ್ನು ನೋಡುತ್ತಾ ಬಂದಿದ್ದಾರೆ.
ಈ ಹಿಂದಿ ಹೃದಯ ಪ್ರದೇಶ ಹಾಗೂ ಜನಪ್ರಿಯ ಯಾತ್ರಾಕ್ಷೇತ್ರದಲ್ಲಿ ಸ್ಥಳೀಯ ಅಕಾರಶಾಹಿಯ ಹೃದಯದಲ್ಲೂ ನಿರ್ದಿಷ್ಟ ಬ್ರಾಂಡ್‌ನ ರಾಜಕೀಯ ಹಿಂಸೆ ಕುದಿಯುತ್ತಲೇ ಇತ್ತು. ಭಾರತದ ಇತರ ಪ್ರದೇಶಗಳಲ್ಲಿ ಸುದ್ದಿ ಸಿದ್ಧಪಡಿಸುವ ಹಾಗೂ ಸುದ್ದಿ ಓದುವವರಿಗೆ, ಇದು ಭಯೋತ್ಪಾದನೆ ಅಥವಾ ಉಗ್ರಗಾಮಿ ಚಟುವಟಿಕೆಯ ಚೌಕಟ್ಟಿನಲ್ಲಿ ಬರುತ್ತದೆ ಎಂಬ ಕಲ್ಪನೆಯಲ್ಲಿ ಇರಲಿಲ್ಲ. ಭಯೋತ್ಪಾದನೆ ಬೆಳೆಯುವುದೇ ಬೇರೆ ಕಡೆ ಹಾಗೂ ಕಾರ್ಯಾಚರಿಸುವುದೇ ಇನ್ನೊಂದೆಡೆ ಎಂಬ ಕಲ್ಪನೆ ಇತ್ತು.
ದಶಕಗಳಿಂದ ಹಿಂಸಾಕೃತ್ಯಗಳ ನಡುವೆಯೇ ಬೆಳೆದು ಬಂದ ಪ್ರಕ್ಷುಬ್ಧ ಕಾಶ್ಮೀರ, ತುಂಡುಭೂಮಿಯಿಂದ ಭಾರತದ ಜತೆ ಸಂಪರ್ಕ ಹೊಂದಿರುವ ಈಶಾನ್ಯ ಭಾರತದ ಕಣಿವೆಗಳು, ಛತ್ತೀಸ್‌ಗಢದ ಬುಡಕಟ್ಟು ಗ್ರಾಮಗಳು ಮಾತ್ರ ಸೌಲಭ್ಯವಂಚಿತ ಪಟ್ಟಿಯಲ್ಲಿ ಬಿಂಬಿತವಾಗುತ್ತಿದ್ದವು. ರಾಷ್ಟ್ರೀಯ ಕಲ್ಪನೆಯಲ್ಲಿ ಇವು ಅಕ್ಷರಶಃ ಪರದೇಶಗಳು. ಮುಖ್ಯಭೂಮಿಕೆಯಿಂದ ಪ್ರತ್ಯೇಕಿಸಲ್ಪಟ್ಟ ಪ್ರದೇಶ. ಇಂಥ ಪರದೇಶಿ ಚಳವಳಿಗಳು, ಸಿದ್ಧಾಂತಗಳು ಇಂಥ ಪ್ರದೇಶದಲ್ಲಿ ಬೆಳೆಯುತ್ತವೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಕಳೆದ ವಾರ ಕಾಶ್ಮೀರದಲ್ಲಿ ಇಬ್ಬರು ಪೊಲೀಸರ ಹತ್ಯೆಯಾದಾಗ, ಪೊಲೀಸರನ್ನು ಹತ್ಯೆ ಮಾಡಿದ್ದು, ಉಗ್ರರು ಎಂದು ವರದಿ ಮಾಡಲು ಪತ್ರಕರ್ತರು ಹಿಂಜರಿಯಲಿಲ್ಲ. ಛತ್ತೀಸ್‌ಗಢದ ಬಂಡುಕೋರರನ್ನು ಭಯೋತ್ಪಾದಕ ವಿರೋ ಕಾರ್ಯಾಚರಣೆ ೀರ್ಘಕಾಲದಿಂದಲೂ ಗುರಿ ಮಾಡಿಕೊಂಡು ಬಂದಿದೆ. ನಾಗಾಲ್ಯಾಂಡಿನ ಕೆಲ ಪ್ರತ್ಯೇಕತಾವಾದಿ ಗುಂಪುಗಳು ಶಾಂತಿ ಒಪ್ಪಂದ ಮಾಡಿಕೊಂಡಿದ್ದರೂ, ಇತರ ಕೆಲ ಸಂಘಟನೆಗಳು ಬಂಡುಕೋರ ಸರಕಾರವನ್ನು ನಡೆಸುತ್ತಲೇ ಬಂದಿವೆ. ಇಂದಿಗೂ ಇವನ್ನು ಉಗ್ರಗಾಮಿ ಗುಂಪುಗಳೆಂದೇ ಗುರುತಿಸಲಾಗುತ್ತಿದೆ. ಹಿಂಸೆಯ ಹೆಸರುಗಳು ಭೌಗೋಳಿಕ ಹಿನ್ನೆಲೆಯಲ್ಲಿ ಬದಲಾಗುತ್ತವೆ. ದೊಡ್ಡ ಹಾಗೂ ಜನನಿಬಿಡ ನಗರಗಳಲ್ಲಿ, ಶೂಟೌಟ್ ಹಾಗೂ ಎನ್‌ಕೌಂಟರ್‌ಗಳು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗುತ್ತವೆ; ಗೂಂಡಾಗಿರಿ ಅಥವಾ ಗ್ಯಾಂಗ್‌ವಾರ್‌ಗಳಾಗುತ್ತವೆ.

ಇವೆಲ್ಲದರ ನಡುವೆಯೇ, ಜವಾಹಾರ್‌ಬಾಗ್ ಅತಿಕ್ರಮಣಕಾರರು, ತಮ್ಮ ಸುತ್ತಲಿನ ಜನರ ಜತೆ ಉತ್ತಮ ಸಂಪರ್ಕವನ್ನು ಹೊಂದಿಕೊಂಡೇ ಸಂಘಟನೆ ಬಲಪಡಿಸಿಕೊಂಡಿದ್ದಾರೆ. ಮುಲಾಯಂ ಸಿಂಗ್ ಯಾದವ್ ಸರಕಾರ ಈ ಹೋರಾಟಗಾರರ ಗುಂಪಿಗೆ ಪ್ರತಿಭಟನೆ ನಡೆಸಲು ಎರಡು ವರ್ಷ ಹಿಂದೆಯೇ ಅನುಮತಿ ಕೊಟ್ಟಿದೆ. ರಾಮ್ ವೃಕ್ಷ ಯಾದವ್ ನಗರದ ಸುತ್ತೆಲ್ಲ ಬಂದೂಕು ಹಿಡಿದುಕೊಂಡೇ ಓಡಾಡಿಕೊಂಡಿದ್ದರು. ಜತೆಗೆ ಸಮಾಜವಾದಿ ಪಕ್ಷದ ಒಂದು ಬಣದ ಜತೆ ನಿಕಟ ನಂಟನ್ನೂ ಹೊಂದಿದ್ದರು. ರಾಜಕಾರಣಿಗಳಿಂದ ಹಿಡಿದು ಉನ್ನತ ಅಕಾರಿಗಳವರೆಗೆ ಪ್ರಭಾವ ಇವರ ಪರವಾಗಿ ಕೆಲಸ ಮಾಡಿತ್ತು. ಸ್ಥಳೀಯ ಆಡಳಿತ ಕೂಡಾ ಅಕ್ರಮ ಒತ್ತುವರಿ ಬಗ್ಗೆ ಜಾಣಕುರುಡು ಪ್ರದರ್ಶಿಸಿ, ಇವರಿಗೆ ಪರೋಕ್ಷವಾಗಿ ನೆರವಾಗಿತ್ತು.
ಸ್ವಾೀನ ಭಾರತ ವಿಧೇಯಕ ಸತ್ಯಾಗ್ರಹದ ಮೇಲೆ ಭಯೋತ್ಪಾದನೆ ಅಥವಾ ದಂಗೆ ಆರೋಪ ಹೊರಿಸುವುದಾದರೆ, ಮಥುರಾದ ರಾಜಕೀಯ ಹಾಗೂ ಅಕಾರಿ ವರ್ಗವನ್ನು ಕೂಡಾ ಅದರಲ್ಲಿ ಸೇರಿಸಬೇಕು. ಅದು ಪ್ರಕರಣದ ಆಳವನ್ನು ತಿಳಿಯಲು ಇನ್ನಷ್ಟು ಸಹಾಯ ಮಾಡೀತು.
ಕೃಪೆ: scroll.in

Writer - ಇಪ್ಸಿತಾ ಚಕ್ರವರ್ತಿ

contributor

Editor - ಇಪ್ಸಿತಾ ಚಕ್ರವರ್ತಿ

contributor

Similar News