ಅಭಿವ್ಯಕ್ತಿ ಸ್ವಾತಂತ್ರ ಹರಣಕ್ಕೆ ಕೊನೆಯಿಲ್ಲವೇ?

Update: 2016-06-27 17:55 GMT

ವೈರುಧ್ಯಗಳಿರಬೇಕು ನಿಜ. ಆದರೆ ಜೀವ ನೆಲೆಯನ್ನೇ ಹತ್ತಿಕ್ಕುವ ವೈರತ್ವವಿರಬಾರದು. ಏಕ ಸಂಸ್ಕೃತಿಯನ್ನು ಒಪ್ಪಿ, ಬಹುತ್ವ ಸಂಸ್ಕೃತಿಯನ್ನು ಅಸಹ್ಯ ಎಂದು ಹೇಳುವ, ಬೇಕಾದ ಸಿದ್ಧಾಂತಗಳನ್ನು ಒಪ್ಪಿಕೊಂಡು, ಬೇಡವಾದ ಸಿದ್ಧ್ದಾಂತಗಳನ್ನು ಧಕ್ಕೆ ಎಂದು ಕರೆಯುವ ವಾಡಿಕೆ ಇನ್ನೆಷ್ಟು ದಿನ ನಾವು ಸಹಿಸಿಕೊಳ್ಳಬೇಕಾಗಿದೆ?

ಭಿವ್ಯಕ್ತಿ ಎನ್ನುವುದು ಮಾನವನ ಅವಿಭಾಜ್ಯ ಅಂಗವೇ ಆಗಿದೆ. ಮನುಷ್ಯನೊಬ್ಬ ಘನತೆಯಿಂದ ಬದುಕಲು ಅಭಿವ್ಯಕ್ತಿ ಸ್ವಾತಂತ್ರ್ಯ ಬಹುಮುಖ್ಯ ಕಾರಣವಾಗಿರುತ್ತದೆ. ಆದರೆ ಇತ್ತೀಚಿನ ಕಾಲಘಟ್ಟದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಎಲ್ಲೆಡೆ ಧಕ್ಕೆ ಬರುತ್ತಿವೆ. ಇಂತಹದ್ದನ್ನೆ ತಿನ್ನು, ಇಂತಹದ್ದನ್ನೆ ಉಡು, ಇಂತಹದ್ದನ್ನೆ ಓದು, ಇಂತಹದ್ದನ್ನೆ ಬರೆ, ಇಂತಹದ್ದನ್ನೆ ಅನುಸರಿಸು ಎನ್ನುವ ಮೂಲಕ ಮಾನವನ ಬದುಕು, ಆತನ ಸ್ವಾಭಿಮಾನ, ಸ್ವಾವಲಂಬನೆ, ಆತನ ಸಂಸ್ಕೃತಿ, ಸಾಹಿತ್ಯದ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳನ್ನು ಗಮನಿಸಿದರೆ, ಈ ದೇಶದಲ್ಲಿ ಪ್ರತ್ಯೇಕವಾದಿಗಳ ಗುಂಪೊಂದು ಪ್ರಜಾಪ್ರಭುತ್ವದ ನೆಲವನ್ನೆ ಬುಡಮೇಲು ಮಾಡುವ ಎಲ್ಲಾ ತೆರನಾದ ಸಂಚನ್ನು ನಡೆಸುತ್ತಿವೆಯೇನೋ ಎಂಬ ಗುಮಾನಿ ಹುಟ್ಟುತ್ತಿದೆ. ಈ ಪರಿಸ್ಥ್ಥಿತಿಯೇನೋ ಬೆಳೆದು ನಿಂತರೆ ಬಹುಶಃ ಅಂತಹ ದಿನಗಳಲ್ಲಿ ಈ ದೇಶವನ್ನು ನಾವು ಪ್ರಜಾಪ್ರಭುತ್ವದ ನೆಲೆಯಲ್ಲಿ ಉಳಿಸಿಕೊಳ್ಳುವುದೇ ಅಸಾಧ್ಯವಾಗಬಹುದು. ಜೀವ ಧೋರಣೆಗಳಿಗಿಂತ, ಜೀವ ವಿರೋ ಧೋರಣೆಗಳೆ ಮಹತ್ವದ ಪರಿಣಾಮ ಬೀರುತ್ತಿವೆ. ಸತ್ಯದ ಅನಾವರಣವಾಗುವ ಸಂಸ್ಕೃತಿಗಳನ್ನು ಮುಚ್ಚಿಟ್ಟು ಸುಳ್ಳನ್ನು ಬಿಂಬಿಸುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕೆಲಸಗಳು ಅನಾದಿಕಾಲದಿಂದಲೂ ನಡೆಯುತ್ತಲೇ ಇವೆ. ಈ ದೆಸೆಯಲ್ಲಿ 2015ರಲ್ಲಿ ಪೆರುಮಾಳ್ ಮುರುಗನ್ ಅವರ ಮೇಲಾದ ದಾಳಿ ಇಂದಿಗೂ ಬುಸುಗುಡುತ್ತಲೇ ಇದೆ. ಸತ್ಯವನ್ನು ಬಿಂಬಿಸುವ ಹಾಗೂ ಹಲವಾರು ವರ್ಷಗಳಿಂದ ಹೂತಿಟ್ಟಿದ್ದ ತಮಿಳುನಾಡಿನಲ್ಲಿ ನಡೆಯುವ ಆಚರಣೆಯನ್ನು ಆಧರಿಸಿ ಕಾದಂಬರಿ ಬರೆದರು ಎಂಬ ಕಾರಣಕ್ಕೆ ಪೆರುಮಾಳ್ ಮುರುಗನ್ ಅವರನ್ನು ಥಳಿಸಲಾಗಿತ್ತು. ಊರಿನಿಂದ ಬಹಿಷ್ಕಾರ ಹಾಕಲಾಗಿತ್ತು.

 ಪೆರಿಯಾರ್ ಅವರು ಜನಿಸಿದ ತಮಿಳುನಾಡಿನಲ್ಲಿ ಪೆರುಮಾಳ್ ಮುರುಗನ್ ಅವರ ನಂತರ ಮತ್ತೊಮ್ಮೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆದಿದೆ. ಈ ದೇಶದ ಜನರಿಗೆ ವೈಚಾರಿಕತೆಯ ಬೀಜ ಮೊಳಕೆಯೊಡೆದಿದ್ದೆ ಅಲ್ಲಿಂದ, ನೆಲದ ಮೇಲಿನ ಸ್ವಾಭಿಮಾನ, ಭಾಷಾಪ್ರಜ್ಞೆ ಸ್ವಬಣ್ಣ, ಸ್ವಸಂಸ್ಕೃತಿಗಳ ಮೇಲೆ ಮತ್ತೆ ವಿಶ್ವಾಸ ಮೂಡಿಸುವ ಮೂಲಕ ನೆಲಮೂಲರ ನೆಲದನಿಗೆ ಕಾರಣವಾದ ಪೆರಿಯಾರ್ ಅವರು ಬದುಕಿದ್ದ ಜಾಗದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ ಎಂದರೆ ಇದು ನಿಜಕ್ಕೂ ನಾಚಿಕೆಗೇಡು. ತಮಿಳುನಾಡಿನ ಪುದುಕೊಟ್ಟೆ ಜಿಲ್ಲೆಯ ಕುಲಂದರಂಪಟ್ಟು ಎಂಬ ಗ್ರಾಮದಲ್ಲಿ ನೆಲೆಸಿರುವ ದುರೈ ಗುಣ ಎಂಬವರನ್ನು ಬಂಸಿರುವುದು ಸಾಹಿತ್ಯ ಪರಂಪರೆಯನ್ನೆ ನಾಚಿಸುತ್ತಿದೆ. ಇವೆಲ್ಲವೂ ಸಾಂಸ್ಕೃತಿಕ ಲೋಕದ ಅಧಃಪತನಗಳು. ಜೀವಪರ ನೆಲೆಯಲ್ಲಿ ಮಾತನಾಡುವವರಿಗೆ ದೈಹಿಕ ದಾಳಿ ನಡೆಯುವುದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಇಂದು ಕಾನೂನನ್ನು ದುರುಪಯೋಗ ಪಡಿಸಿಕೊಂಡು ಕಾನೂನಾತ್ಮಕ ದಾಳಿಗಳನ್ನು ಕೂಡ ಮಾಡಲು ಪ್ರಾರಂಭಿಸಿದ್ದಾರೆ. ಇದೇ ಜೂನ್ 10ರಂದು ಏಕಾಏಕಿ ದುರೈ ಗುಣ ಅವರ ಮನೆಗೆ ನುಗ್ಗಿ ಪೊಲೀಸರು ಕೊಲೆ ಆರೋಪದ ಮೇಲೆ ಬಂಸಿದ್ದಾರೆ. ಯಾವುದೇ ತಪ್ಪುಮಾಡದ ವ್ಯಕ್ತಿಯನ್ನು, ಯಾವುದೇ ವಾರೆಂಟ್ ಇಲ್ಲದೆ ನಿರಾಧಾರವಾಗಿ ಬಂಸಿ ಕೊಲೆ ಆರೋಪ ಹೊರಿಸುವ ಮೂಲಕ ಅವರನ್ನು ಜೈಲಲ್ಲೆ ಕೊಳೆಯುವ ತಂತ್ರವನ್ನು ಕಾನೂನಾತ್ಮಕವಾಗಿ ಬಳಸಿಕೊಳ್ಳುತ್ತಿರುವುದು ದುರಂತ.

ನಿರಂತರವಾಗಿ ದಲಿತ ಚಳವಳಿಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕೃಷಿ ಮಾಡುತ್ತಿದ್ದ ಒಬ್ಬ ದಲಿತ ಚಿಂತಕನಿಗೆ ತಮಿಳುನಾಡಿನಲ್ಲಿ ಇಂತಹ ಸ್ಥಿತಿ ಬಂದೊದಗಿದೆ ಎಂದರೆ ಇದು ಪ್ರಜಾಪ್ರಭುತ್ವದ ಬುಡಮೇಲಿನ ಷಡ್ಯಂತ್ರ. ಇಂತಹ ಹಿಂಚಲನೆಯ ಕ್ರೂರಿಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ದಾಳಿಯ ಘಾತುಕರನ್ನು ಸೆದೆಬಡಿಯಬೇಕಿದೆ. ಇಲ್ಲವಾದರೆ ಇಂದು ದುರೈ ಗುಣ ಅವರ ಮೇಲೊಂದು ಆರೋಪ, ನಾಳೆ ಬೇರೊಬ್ಬರ ಮೇಲೊಂದು ಆರೋಪ, ಒಟ್ಟಾರೆ ಅವರನ್ನು ವಿರೋಸುವ ಎಲ್ಲರ ಮೇಲೂ ಸಾಲಾಗಿ ಆರೋಪ ಸೃಷ್ಟಿಸಿ ಇಡೀ ರಾಷ್ಟ್ರವನ್ನು ಏಕಚಕ್ರಾಪತ್ಯಕ್ಕೆ ಒಳಪಡಿಸಿಕೊಳ್ಳುವ ಹವಣಿಕೆಗೆ ತುತ್ತಾಗಬೇಕಾಗುತ್ತದೆ. ಒಂದು ಕಡೆ ಪೆರುಮಾಳ್ ಮುರುಗನ್, ಮತ್ತೊಂದು ಕಡೆ ದಿನೇಶ್ ಅಮೀನ್ ಮಟ್ಟು ಅವರಂತಹ ಎಡಪಂಥೀಯ ಚಿಂತನೆಗಳಿಗೆ ಕೊಡಲಿ ಪೆಟ್ಟು, ಇನ್ನೊಂದು ಕಡೆ ವಿದ್ಯಾರ್ಥಿ ಚಳವಳಿಗಳನ್ನು ಹತ್ತಿಕ್ಕಲು ರಾಷ್ಟ್ರದ್ರೋಹದ ಆರೋಪ. ಅದಕ್ಕೂ ಮುಂದುವರಿದು ದುರೈ ಗುಣ ಅಂತಹ ದಲಿತ ಸಾಹಿತಿಯನ್ನು ಕೊಲೆ ಆರೋಪದ ಮೇಲೆ ಬಂಧನ. ಇದರಿಂದ ಸಮಾಜ ಅರಿತುಕೊಳ್ಳಬೇಕಿರುವುದಾದರೂ ಏನು? ಇಡೀ ಸಾಮಾಜಿಕ ವ್ಯವಸ್ಥೆ ಪ್ರಜಾಪ್ರಭುತ್ವವನ್ನು ಮತ್ತು ಜೀವಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೂಳೇಳಿಸುವ ಕಾಯಕ ವ್ಯಾಪಕವಾಗಿ ಹರಡಿಕೊಳ್ಳುತ್ತಲೇ ಇದೆ.
ವೈರುಧ್ಯಗಳಿರಬೇಕು ನಿಜ. ಆದರೆ ಜೀವ ನೆಲೆಯನ್ನೇ ಹತ್ತಿಕ್ಕುವ ವೈರತ್ವವಿರಬಾರದು. ಏಕ ಸಂಸ್ಕೃತಿಯನ್ನು ಒಪ್ಪಿ ಬಹುತ್ವ ಸಂಸ್ಕೃತಿಯನ್ನು ಅಸಹ್ಯ ಎಂದು ಹೇಳುವ, ಬೇಕಾದ ಸಿದ್ಧಾಂತಗಳನ್ನು ಒಪ್ಪಿಕೊಂಡು, ಬೇಡವಾದ ಸಿದ್ಧಾಂತಗಳನ್ನು ಧಕ್ಕೆ ಎಂದು ಕರೆಯುವ ವಾಡಿಕೆ ಇನ್ನೆಷ್ಟು ದಿನ ನಾವು ಸಹಿಸಿಕೊಳ್ಳಬೇಕಾಗಿದೆ?

ಕೆಲವರು ಸಹಿಷ್ಣುತೆ ಮತ್ತು ಅಸಹಿಷ್ಣುತೆಯ ಬಗ್ಗೆ ಮಾತನಾಡುತ್ತಾರೆ. ಬಹುಸಂಖ್ಯಾತರ ಮೇಲೆ ಬಲಪ್ರಯೋಗ ಮಾಡುವುದೇ ಇಲ್ಲಿ ಸಹಿಷ್ಣುತೆಯಾಗುತ್ತಿದೆ. ಜೀವಪರವಾಗಿ ಮಾತನಾಡುವ ಬಹುಸಂಸ್ಕೃತಿಯನ್ನು ಒಳಗೊಳ್ಳುವಿಕೆಯ ಬಗ್ಗೆ ಮಾತನಾಡುವುದೇ ಅಸಹಿಷ್ಣುತೆಯಾಗಿದೆ. ಅದರ ಜೊತೆಗೆ ದಲಿತನೊಬ್ಬ ಏನೇ ಮಾತನಾಡಿದರೂ ಇಲ್ಲಿ ಅಸಹಿಷ್ಣುತೆ ಎಂಬಂತೆ ಬಿಂಬಿಸಲಾಗುತ್ತಿದೆ. ಸಾಂಸ್ಕೃತಿಕವಾಗಿ ಹಾಗೂ ಸೈದ್ಧಾಂತಿಕವಾಗಿ ವೈರುಧ್ಯಗಳಿರಲಿ. ಆದರೆ ಅದು ಮಾನವ ಹಕ್ಕನ್ನು ಉಲ್ಲಂಸುವಷ್ಟು ಮಾರಕ ಬೇಡ. ಯಾಕೆಂದರೆ ಅವು ಸಮಾಜವನ್ನು ವಿಭಜಿಸುತ್ತವೆ. ಈ ದೇಶದ ಸಮಾಜ ಪ್ರಜಾಪ್ರಭುತ್ವವನ್ನು ಒಪ್ಪಿತ ಸಮಾಜವಾದ್ದರಿಂದ, ಅದನ್ನು ಒಪ್ಪಿ, ಅದರ ಆಶಯಗಳಿಗೆ ಧಕ್ಕೆಯಾಗದೆ, ಅದನ್ನು ಅನುಸರಿಸುತ್ತಲೇ, ಸರ್ವರೂ ಸ್ವತಂತ್ರರು ಎಂಬ ಆಶಯದೊಂದಿಗೆ ಸಾಂಸ್ಕೃತಿಕ ಪ್ರತ್ಯೇಕತೆಯ ನಡುವೆಯೂ ಒಳಗೊಳ್ಳುತ್ತ, ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಸಾಗಬೇಕಿದೆ.

Writer - ಹಾರೋಹಳ್ಳಿ ರವೀಂದ್ರ

contributor

Editor - ಹಾರೋಹಳ್ಳಿ ರವೀಂದ್ರ

contributor

Similar News