ಐರೋಪ್ಯ ಒಕ್ಕೂಟದಿಂದ ಇಂಗ್ಲಿಷ್ ಕೂಡ ಹೊರಗೆ?
Update: 2016-06-28 14:49 GMT
ಲಂಡನ್, ಜೂ. 28: ಐರೋಪ್ಯ ಒಕ್ಕೂಟದಿಂದ ಹೊರಬರುವ ನಿರ್ಧಾರವನ್ನು ಬ್ರಿಟನ್ ತೆಗೆದುಕೊಂಡಿರುವುದರ ಪರಿಣಾಮ ಇಂಗ್ಲಿಷ್ ಭಾಷೆಯ ಮೇಲಾಗುವ ಸಾಧ್ಯತೆಯಿದೆ. ಐರೋಪ್ಯ ಒಕ್ಕೂಟದಲ್ಲಿರುವ 28 ರಾಷ್ಟ್ರಗಳ ಪೈಕಿ ಬ್ರಿಟನನ್ನು ಹೊರತುಪಡಿಸಿ ಇತರ ಯಾವುದೇ ದೇಶವು ತನ್ನ ಪ್ರಾಥಮಿಕ ಭಾಷೆಯನ್ನಾಗಿ ಇಂಗ್ಲಿಷನ್ನು ನೋಂದಾಯಿಸದ ಹಿನ್ನೆಲೆಯಲ್ಲಿ, ಒಕ್ಕೂಟದಿಂದ ಬ್ರಿಟನ್ ಜೊತೆಗೆ ಇಂಗ್ಲಿಷ್ ಕೂಡ ಹೊರಬೀಳುವ ಅಪಾಯವನ್ನು ಎದುರಿಸುತ್ತಿದೆ.
ಐರೋಪ್ಯ ಒಕ್ಕೂಟ ಸಂಸ್ಥೆಗಳ ಪ್ರಥಮ ಆಯ್ಕೆ ಇಂಗ್ಲಿಷ್ ಆಗಿದೆ. ಆದರೆ, ಒಕ್ಕೂಟದಿಂದ ಹೊರಬರಲು ಕಳೆದ ವಾರ ಬ್ರಿಟನ್ ತೆಗೆದುಕೊಂಡಿರುವ ತೀರ್ಮಾನದ ಹಿನ್ನೆಲೆಯಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯ ಮೇಲೆ ನಿಷೇಧ ಬೀಳುವ ಸಾಧ್ಯತೆ ಇದೆ ಎಂದು ಯುರೋಪಿಯನ್ ಪಾರ್ಲಿಮೆಂಟ್‌ನ ಪೋಲೆಂಡ್ ಸದಸ್ಯ ಹಾಗೂ ಯುರೋಪಿಯನ್ ಪಾರ್ಲಿಮೆಂಟ್‌ನ ಸಾಂವಿಧಾನಿಕ ವ್ಯವಹಾರಗಳ ಸಮಿತಿಯ ಮುಖ್ಯಸ್ಥ ಡ್ಯಾನುಟ ಹಬ್ನರ್ ಸೋಮವಾರ ಬ್ರಸೆಲ್ಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.