ಅಸ್ಪಶ್ಯತೆ ಆಚರಣೆಗೆ ಹೊರಟವರ ವಿರುದ್ಧ ಉಪವಾಸ ಕೆಗೊಳ್ಳಲಿ
Update: 2016-10-23 18:23 GMT
ಮಾನ್ಯರೆ
ದಿನೇಶ್ ಅಮೀನ್ ಮಟ್ಟು ಮತ್ತು ಪೇಜಾವರ ಸ್ವಾಮಿ ಮಧ್ಯೆ ನಡೆದ ಫೋನ್ ಸಂಭಾಷಣೆಯನ್ನು ಓದಿದ ಬಳಿಕ ನನ್ನ ಪ್ರತಿಕ್ರಿಯೆಯನ್ನು ದಾಖಲಿಸಲು ಬಯಸುತ್ತಿರುವೆ. ಸ್ವಚ್ಛ ಉಡುಪಿ, ಕನಕ ನಡಿಗೆ ಇತ್ಯಾದಿ ಹೆಸರಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಕೈಬಿಡಲು ನಿಮ್ಮವರಿಗೆ ಹೇಳಿಬಿಡಿ ಎಂದು ಮಟ್ಟು ಕೋರಿಕೊಂಡಾಗ ಸ್ವಾಮಿ ಎಲ್ಲ ಸಿದ್ಧತೆಯಾಗಿಬಿಟ್ಟಿದೆಯಂತೆ, ಅವರು ನಮ್ಮ ಮಾತು ಎಲ್ಲಿ ಕೇಳುತ್ತಾರೆ? ಎಂದು ಉತ್ತರಿಸಿದರಂತೆ. ಮಠದಲ್ಲಿ ಆಚರಿಸಲಾಗುತ್ತಿರುವ ಪಂಕ್ತಿಭೇದ ಕೊನೆಗೊಳಿಸಬೇಕೆಂದು ದಲಿತ-ದಮನಿತ ಸ್ವಾಭಿಮಾನಿ ಹೋರಾಟಗಾರರು ಎಚ್ಚರಿಕೆ ನೀಡಿದಾಗ ತಾನು ಆಮರಣಾಂತ ಉಪವಾಸ ಕೂರುವೆನೆಂದು ಬೆದರಿಕೆ ಒಡ್ಡಿದಂಥಾ ಪೇಜಾವರರು ಅಸ್ಪಶ್ಯತೆ ಆಚರಿಸಹೊರಟ ತಮ್ಮವರ ವಿರುದ್ಧವೂ ಅದೇ ಅಸ್ತ್ರವನ್ನು ಬಳಸಿ ಅದನ್ನು ನಿಲ್ಲಿಸಬಹುದಿತ್ತಲ್ಲ? ಪೇಜಾವರರದು ಹಾರಿಕೆ ಮತ್ತು ಜಾರಿಕೆಯ ಮಾತುಗಳೆಂದು ಸ್ಪಷ್ಟಪಡಿಸಲು ಇಷ್ಟು ಸಾಕಲ್ಲವೇ?