‘ಹಿಂದುತ್ವ’ಕ್ಕೆ ಸುಪ್ರೀಂ ಕೋರ್ಟಿನ ವ್ಯಾಖ್ಯೆ

Update: 2016-10-27 17:43 GMT

ಯಾವುದೇ ಒಂದು ಗುರುತಿಸಲಾಗಿರುವ ಧರ್ಮ ಅಥವಾ ಧಾರ್ಮಿಕ ಜನಾಂಗಕ್ಕೆ ಅನ್ವಯಿಸಬಹುದಾದ ಯಾವತ್ತೂ ತಪಾಸಣಾ ಪರಿಕರಗಳನ್ನು ಹಿಂದೂ ಧರ್ಮದ ಸಮಸ್ಯೆಗಳಿಗೆ ಅಳವಡಿಸಿನೋಡುವುದು ಪರ್ಯಾಪ್ತವೆನ್ನಿಸುವುದಿಲ್ಲ. ಸಾಮಾನ್ಯವಾಗಿ ಗುರುತಿಸಲಾಗುವ ಯಾವುದೇ ಧರ್ಮ ಅಥವಾ ಧಾರ್ಮಿಕ ಜನಾಂಗ ಒಂದಿಷ್ಟು ತಾತ್ವಿಕ ನೆಲೆಗಟ್ಟುಗಳು ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿರುತ್ತದೆ. ಈ ರೀತಿಯ ತಪಾಸಣೆ ಹಿಂದೂ ಧರ್ಮಕ್ಕೆ ಅನ್ವಯವಾಗುತ್ತದೆಯೇ? ಈ ಪ್ರಶ್ನೆಗೆ ಉತ್ತರಿಸುವಾಗ ನಾವು ಭಾರತೀಯ ತತ್ವಶಾಸ್ತ್ರದ ಬಗ್ಗೆ ಡಾ. ರಾಧಾಕೃಷ್ಣನ್ ಅವರು ಕಂಡುಕೊಂಡಿರುವ ವಿಚಾರಗಳನ್ನು ಆಧರಿಸಬೇಕಾಗುತ್ತದೆ. 

ಭಾಗ-1

ತೀರ್ಪಿನ ಭಾಷಾಂತರಿತ ಭಾಗ:

 ‘‘...ಮುಂದಿನ ವಾದಾಂಶ ‘ಹಿಂದುತ್ವ’ ಮತ್ತು ‘ಹಿಂದೂಯಿಸಂ’ನ ಅರ್ಥಕ್ಕೆ ಸಂಬಂಧಿಸಿ ಮತ್ತು ಈ ಶಬ್ದಗಳನ್ನು ಚುನಾವಣೆ ಭಾಷಣಗಳ ಸಂದರ್ಭದಲ್ಲಿ ಬಳಸುವ ಕುರಿತಾದದ್ದಾಗಿದೆ. ನಾವು ಈಗಾಗಲೇ ಜನಪ್ರಾತಿಧ್ಯ ಕಾಯ್ದೆಯ 123ನೆ ಸೆಕ್ಷನ್ನಿನ ಉಪವಿಧಿ (3)ರ ಅರ್ಥವನ್ನು ಮತ್ತು ಅದರ ಕಾರ್ಯವ್ಯಾಪ್ತಿಯ ಮಿತಿಗಳನ್ನು ಹೇಳಿದ್ದೇವೆ. ಈ (ಆಕ್ಷೇಪವಿರುವ) ಶಬ್ದಗಳನ್ನು ಬಳಸಲಾಗಿರುವ ಯಾವುದೇ ಭಾಷಣವನ್ನು, ಅವುಗಳ ಅರ್ಥ ಏನೇ ಇರಲಿ, ಆ ಭಾಷಣದಲ್ಲಿ ಒಬ್ಬ ಅಭ್ಯರ್ಥಿ ಹಿಂದೂ ಆಗಿರುವನೆಂಬ ನೆಲೆಯಲ್ಲಿ ಅಥವಾ ಆತನ ಧರ್ಮದ ಕಾರಣದಿಂದಾಗಿ ಆತನಿಗೆ ಮತ ನೀಡದಂತೆ ಅಂದರೆ, ಆತ ಹಿಂದೂ ಅಲ್ಲ ಎಂದು, ಮನವಿ ಮಾಡಲಾಗಿದೆ ಎಂದು ಅರ್ಥೈಸಿಕೊಳ್ಳುವಂತಿದ್ದರೆ ಮಾತ್ರ ಆ ಭಾಷಣವು 123ನೆ ವಿಧಿಯ ಉಪವಿಧಿ (3)ರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ನೇರವಾಗಿ ಹೇಳಬಹುದು. ಒಂದು ಚುನಾವಣಾ ಭಾಷಣದಲ್ಲಿ ಯಾವುದೇ ಧರ್ಮದ ಹೆಸರನ್ನು ಹೇಳಿದ ಮಾತ್ರಕ್ಕೆ ಅದು 123ನೆ ವಿಧಿಯ ಉಪವಿಧಿ (3) ಮತ್ತು /ಅಥವಾ (3A) ಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ನಾವು ಸೂಚಿಸಿದ್ದೇವೆ, ಯಾಕೆಂದರೆ ಸೆಕ್ಯುಲರಿಸಂ ಬಗ್ಗೆ ಹೇಳುವಾಗ ಅಥವಾ ಯಾವುದೇ ರಾಜಕೀಯ ಪಕ್ಷ ಇನ್ನೊಂದು ಧಾರ್ಮಿಕ ಗುಂಪಿನ ಬಗ್ಗೆ ತಾರತಮ್ಯ ಮಾಡುತ್ತಿದೆ ಎಂದು ಟೀಕಿಸುವಾಗ ಅಥವಾ ಭಾರತೀಯ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ ಮಾತನಾಡುವಾಗ ಧರ್ಮದ ಪ್ರಸ್ತಾಪ ಬರಬಹುದು. ಸಾರರೂಪದಲ್ಲಿ ಹೇಳಬೇಕೆಂದರೆ, ‘ಹಿಂದುತ್ವ’ ಅಥವಾ ‘ಹಿಂದೂಯಿಸಂ’ ಅಥವಾ ಯಾವುದೇ ಧರ್ಮದ ಹೆಸರನ್ನು ಚುನಾವಣಾ ಭಾಷಣವೊಂದರಲ್ಲಿ ಬಳಸಿದ ಮಾತ್ರಕ್ಕೆ ಅದು 123ನೆ ವಿಧಿಯ ಉಪವಿಧಿ (3) ಮತ್ತು /ಅಥವಾ (3A )ಗಳ ವ್ಯಾಪ್ತಿಗೆ ಬರುವುದಿಲ್ಲ. ಬರಬೇಕೆಂದಿದ್ದರೆ, ಮೇಲೆ ಸೂಚಿಸಿದ ಬೇರೆ ಅಂಶಗಳೂ ಆ ಭಾಷಣದಲ್ಲಿ ಇರಬೇಕು. ಆ ಭಾಷಣವನ್ನು ಯಾರನ್ನುದ್ದೇಶಿಸಿ ಮಾಡಲಾಗಿದೆ, ಅದರ ಅರ್ಥವೇನು, ಆ ಅರ್ಥವನ್ನು ಹೇಗೆ ಪರಿಭಾವಿಸಬಹುದು ಮತ್ತು ಅದನ್ನು ಕೇಳುಗರು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದನ್ನೂ ನೋಡುವುದು ಅಗತ್ಯವಿದೆ. ಈ ಶಬ್ದಗಳನ್ನು ಚುನಾವಣಾ ಭಾಷಣಗಳಲ್ಲಿ ಬಳಸಿದಾಗ, ಅವು ಅಸಂಗತವೆಂದು ಪರಿಗಣಿಸಬಾರದು.
    
 Sastri Yagnapurushadji  and Others vs. Muldas Bhudardas  Vaishya and  Another, 1966 (3) SCR 242 ಎರಡೂ ಪಕ್ಷಗಳು ವಾದದ ವೇಳೆ ‘ಹಿಂದುತ್ವ’ ಮತ್ತು ‘ಹಿಂದೂಯಿಸಂ’ನ್ನು ಹಲವಾರು ಬರವಣಿಗೆಗಳನ್ನು ಉದಾಹರಿಸುವ ಮೂಲಕ ಒಂದೇರೀತಿಯಾಗಿ ಉದ್ಧರಿಸಿವೆ. ವಕೀಲ ಜೇಠ್ಮಲಾನಿ ಅವರು ಈ ಶಬ್ದಗಳು ಹೊಂದಿರುವ ಹಲವು ಅರ್ಥಗಳನ್ನು ಸೂಚಿಸಿದರು ಮತ್ತು ‘ಹಿಂದುತ್ವ’ ಎಂಬ ಶಬ್ದ ಹಿಂದೂಸ್ಥಾನ ಅಂದರೆ, ಇಂಡಿಯಾ ಎಂಬ ಭೌಗೋಳಿಕ ವಿಭಾಗವನ್ನಾಧರಿಸಿದ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದೆ ಎಂದು ಹೇಳಿದರು. ಇನ್ನೊಂದೆಡೆ ವಕೀಲ ಅಶೋಕ್ ದೇಸಾಯಿ ಅವರು ಚುನಾವಣಾ ಭಾಷಣಗಳಲ್ಲಿ ಬಳಸಲಾದ ‘ಹಿಂದುತ್ವ’ ಎಂಬ ಶಬ್ದವು ಹಿಂದೂ ಧರ್ಮದ ಮೇಲೆ ಒತ್ತು ನೀಡುತ್ತದೆಯೇ ಹೊರತು ಭಾರತವು ಹಿಂದೂಸ್ಥಾನವೂ ಹೌದು ಎಂಬ ಬಗ್ಗೆಯಾಗಲೀ ಮತ್ತು ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ್ದೆಂಬ ಬಗ್ಗೆಯಾಗಲೀ ಯಾವುದೇ ಸಂಬಂಧ ಹೊಂದಿಲ್ಲ ಎಂದು ವಾದಿಸಿದರು. ಸಂವಿಧಾನ ಪೀಠವು ಪ್ರಕರಣದಲ್ಲಿ ಹೀಗೆ ಹೇಳಿದೆ : ‘‘ಹಿಂದೂಗಳು ಯಾರು ಮತ್ತು ಹಿಂದೂ ಧರ್ಮದ ಸ್ಥೂಲ ಸ್ವರೂಪ ಏನು ಎಂಬುದನ್ನು ವಿಚಾರಿಸುವುದು ಎರಡು ಪಕ್ಷಗಳ ನಡುವಿನ ಈ ದಾವೆಯಲ್ಲಿ ನಾವು ಮಾಡಬೇಕಾದ ಮೊದಲ ಕೆಲಸವಾಗಿದೆ. ‘ಹಿಂದೂ’ ಶಬ್ದದ ಚರಿತ್ರೆ ಮತ್ತು ಹುಟ್ಟಿನ ಶೋಧ (etymology p.)ದ ಕುರಿತು ಭಾರತತಜ್ಞರಲ್ಲಿ ಏಕಾಭಿಪ್ರಾಯ ಇಲ್ಲ; ಆದರೆ, ವಿದ್ವಾಂಸರು ಸಾಮಾನ್ಯವಾಗಿ ಒಪ್ಪಿರುವಂತೆ, ‘ಹಿಂದೂ’ ಪದವು ಪಂಜಾಬದಿಂದ ಹರಿಯುವ, ಇಂಡಸ್ ಎಂದೂ ಕರೆಯಲಾಗುವ ಸಿಂಧೂ ನದಿಯಿಂದ ವ್ಯತ್ಪತ್ತಿಯಾಗಿದೆ. ‘ಆರ್ಯನ್ ಜನಾಂಗದ ಆ ಸಮುದಾಯ’ ಎಂದು ಉಲ್ಲೇಖಿಸುವ ಮೊನಿಯರ್ ವಿಲಿಯಮ್ಸ್ ‘‘ಮಧ್ಯ ಏಷ್ಯಾದಿಂದ ಬೆಟ್ಟಗಳನ್ನು ದಾಟಿ, ಭಾರತಕ್ಕೆ ವಲಸೆ ಬಂದು, ಮೊದಲಿಗೆ ಸಿಂಧೂ ನದಿಯ (ಈಗ ಇಂಡಸ್ ಎಂದು ಕರೆಯಲಾಗುತ್ತದೆ) ತಟದ ಆಸುಪಾಸಿನ ಜಿಲ್ಲೆಗಳಲ್ಲಿ ನೆಲೆಯಾಯಿತು. ಪರ್ಷಿಯನ್ನರು ಈ ಶಬ್ದವನ್ನು ‘ಹಿಂದೂ’ ಎಂದು ಉಚ್ಚರಿಸುತ್ತಿದ್ದರು ಮತ್ತು ತಮ್ಮ ಆರ್ಯನ್ ಸಹೋದರರನ್ನು ಹಿಂದೂಗಳೆಂದು ಕರೆದರು. ಹೆಚ್ಚಿನಂಶ ಇಂಡಿಯಾದ ಬಗ್ಗೆ ಮೊದಲ ಬಾರಿಗೆ ಪರ್ಷಿಯನ್ನರಿಂದ ಕೇಳಿ ತಿಳಿದ ಗ್ರೀಕರು, ಉಸಿರಿನ ಜೊತೆ ಉಚ್ಛರಿಸಲು ಸುಲಭವಾಗುವಂತೆ ಹಿಂದೂಗಳನ್ನು ‘ಇಂದೋಯಿ’ ಎಂದು ಕರೆದರು’’ (‘ಹಿಂದೂಯಿಸಂ’ ಮೋನಿಯರ್ ವಿಲಿಯಮ್ಸ್ 1). The Encyclopedia of  Religion and Ethics, Vol.VI, ‘ಹಿಂದೂಯಿಸಂ’ನ್ನು ಭಾರತೀಯ ಚಕ್ರಾಧಿಪತ್ಯದ (p.  ("The HinduViewof Life" Dr.Radhakrishnan, p.12).        
         
(Ibid p686) ಹಾಲೀ ಇರುವ ಬಹುಸಂಖ್ಯಾತ ಜನಸಮುದಾಯ ಅನುಸರಿಸುವ ಧರ್ಮದ ಹೆಸರು ಎಂದಿದೆ. ಡಾ. ರಾಧಾಕೃಷ್ಣನ್ ಅವರು ಕಂಡಂತೆ; ‘‘ಹಿಂದೂ ನಾಗರಿಕತೆಯನ್ನು ಹಾಗೇಕೆ ಕರೆಯಲಾಗುತ್ತದೆ ಎಂದರೆ, ಅದರ ಆದಿಪುರುಷರು ಅಥವಾ ಅದರ ಮೂಲ ಆಚರಣಕಾರರು ಸಿಂಧೂ (ಇಂಡಸ್) ನದಿಯ ತಟವಿದ್ದ ಉತ್ತರಪಶ್ಚಿಮದ ಗಡಿನಾಡು ಮತ್ತು ಪಂಜಾಬ್ ಪ್ರಾಂತಗಳಲ್ಲಿ ನೆಲೆಸಿದ್ದರು. ಇದನ್ನು ಹಿಂದೂ ಪುರಾತನ ಬರಹಗಳಲ್ಲಿ ಭಾರತದ ಚರಿತ್ರೆಯ ವೇದಕಾಲ ಎಂದು ಗುರುತಿಸಲಾಗುವ ಸಮಯದಲ್ಲಿ ಚಾಲ್ತಿ ಇದ್ದ ವೇದಗಳಲ್ಲಿ ಹಳೆಯದಾದ ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. ಸಿಂಧೂ ನದಿಯ ಭಾರತದ ದಂಡೆಯ ಮೇಲೆ ವಾಸವಿದ್ದವರನ್ನು ಪರ್ಷಿಯನ್ನರು ಮತ್ತು ಆ ಬಳಿಕ ಪಾಶ್ಚಾತ್ಯ ಆಕ್ರಮಣಕಾರರು ಹಿಂದೂ ಎಂದು ಕರೆದರು.’’ ‘ಹಿಂದೂ‘ ಶಬ್ದದ ಹುಟ್ಟು ಇದು. ಹಿಂದೂ ಧರ್ಮದ ಬಗ್ಗೆ ಯೋಚಿಸುವಾಗ, ಹಿಂದೂ ಧರ್ಮವನ್ನು ವ್ಯಾಖ್ಯಾನಿಸುವುದು ಅಥವಾ ಸಮರ್ಪಕವಾಗಿ ವಿವರಿಸುವುದು ಅಸಾಧ್ಯವಲ್ಲವಾದರೂ ಕಷ್ಟ. ಬೇರೆ ಧರ್ಮಗಳಲ್ಲಿರುವಂತೆ ಹಿಂದೂ ಧರ್ಮದಲ್ಲಿ ಒಬ್ಬ ಪ್ರವಾದಿ ಇಲ್ಲ; ಒಂದು ದೇವರ ಆರಾಧನೆ ಇಲ್ಲ; ಯಾವುದೇ ಒಂದು ನೀತಿ ಸಂಹಿತೆ ಇಲ್ಲ; ಅದು ಒಂದು ನಿರ್ದಿಷ್ಟ ತತ್ವಸಿದ್ಧಾಂತವನ್ನು ನಂಬುವುದಿಲ್ಲ; ಯಾವುದೋ ಒಂದು ಧಾರ್ಮಿಕ ವಿಧಿ ವಿಧಾನವನ್ನು ಅನುಸರಿಸುವುದಿಲ್ಲ; ವಾಸ್ತವದಲ್ಲಿ ಅದು ಯಾವುದೇ ಒಂದು ಧರ್ಮದ ಅಥವಾ ಜನಾಂಗದ ನಿರ್ದಿಷ್ಟ ಸಾಂಪ್ರದಾಯಿಕ ಲಕ್ಷಣಗಳನ್ನು ಹೊಂದಿಯೇ ಇಲ್ಲ. ಅದನ್ನು ಸ್ಥೂಲವಾಗಿ ಒಂದು ಜೀವನಪದ್ಧತಿ ಎನ್ನಬಹುದೇ ಹೊರತು ಅದಕ್ಕಿಂತ ಹೆಚ್ಚೇನನ್ನೂ ಹೇಳಲಾಗದು. ಡಾ. ರಾಧಾಕೃಷ್ಣನ್ ಅವರ ಪ್ರಕಾರ ‘ಹಿಂದೂ’ ಎಂಬುದು ಮೂಲತಃ ಒಂದು ಭೌಗೋಳಿಕ ವ್ಯಾಪ್ತಿಯೇ ಹೊರತು ಜನಾಂಗ ವಿಶಿಷ್ಟ ಪದವಲ್ಲ. ಅದು ಒಂದು ಸುವ್ಯಾಖ್ಯಾನಿತ ಭೌಗೋಳಿಕ ಪರಿಸರದಲ್ಲಿ ವಾಸವನ್ನಷ್ಟೇ ಸೂಚಿಸುತ್ತದೆ. ಬುಡಕಟ್ಟುಗಳವರು, ಮೂಲನಿವಾಸಿಗಳು ಮತ್ತು ಅರೆನಾಗರಿಕ ಜನರು, ಸುಸಂಸ್ಕೃತ ದ್ರಾವಿಡರು ಮತ್ತು ವೇದಿಕ್ ಆರ್ಯನ್ನರು ಎಲ್ಲರೂ ಹಿಂದೂಗಳಾಗಿದ್ದರು ಮತ್ತು ಒಂದೇ ತಾಯಿಯ ಮಕ್ಕಳಾಗಿದ್ದರು. ಭಾರತದಲ್ಲಿ ಬದುಕುತ್ತಿರುವ ಎಲ್ಲ ಸ್ತ್ರೀ ಪುರುಷರು ವಿಭಿನ್ನ ಸಮುದಾಯಗಳಿಗೆ ಸೇರಿದವರು, ವಿಭಿನ್ನ ದೇವರುಗಳನ್ನು ಆರಾಧಿಸುತ್ತಿದ್ದರು, ಮತ್ತು ವಿಭಿನ್ನ ಸಂಪ್ರದಾಯಗಳನ್ನು ಆಚರಿಸುತ್ತಿದ್ದರು ಎಂಬುದನ್ನು ಹಿಂದೂ ಬುದ್ಧಿಜೀವಿಗಳು ಗುರುತಿಸಿದ್ದರು (ಕೂರ್ಮಪುರಾಣ) . 12)        
     ("Religious Thought & Life  in India" by Monier Williams, p. 57).  . ಮೊನಿಯರ್ ವಿಲಿಯಮ್ಸ್ ಕಂಡುಕೊಂಡಂತೆ ‘‘ಹಿಂದೂಯಿಸಂ ಎಂಬುದು ಬರಿಯ ಬ್ರಾಹ್ಮಣಿಕೆಯನ್ನು ಆಧರಿಸಿದ ದೈವನಂಬಿಕೆ ಅಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಜನಾಂಗಗಳ ಸಂಕೀರ್ಣವಾದ ಜಿಗುಟನ್ನೂ ಮತ್ತು ಕ್ರಮೇಣ ಅದು ಸಂಗ್ರಹಿಸಿಕೊಂಡು ಬಂದ ನಂಬಿಕೆಗಳನ್ನು ಅದು ಶೋಧಕ್ಕಾಗಿ ನಮ್ಮೆದುರು ಪ್ರಸ್ತುತಪಡಿಸುತ್ತದೆ, ಇದನ್ನು ನಾವು ಗಂಗಾನದಿಯ ವೈಶಾಲ್ಯಕ್ಕೆ ಹೋಲಿಸಬಹುದೇನೋ, ಯಾಕೆಂದರೆ ಅದು ಹಲವು ಉಪನದಿಗಳು, ತೊರೆಗಳ ಸವಿಸ್ತಾರ ಸಂಗಮವಾಗಿದೆ... ಹಿಂದೂ ಧರ್ಮವು ಹಿಂದೂಗಳ ಸಮಗ್ರತೆಯ ಗುಣಲಕ್ಷಣದ ಪ್ರತಿಬಿಂಬವಾಗಿದೆ, ಅದು ಏಕವ್ಯಕ್ತಿ ಅಲ್ಲ. ಅದು ಅನೇಕ. ವಿಶ್ವವ್ಯಾಪಿ ಗ್ರಾಹ್ಯತೆ ಅದಕ್ಕೆ ಆಧಾರ. ಅದು ಸತತವಾಗಿ ಸನ್ನಿವೇಶಗಳಿಗೆ ತನ್ನನ್ನು ಹೊಂದಿಸಿಕೊಳ್ಳುವ ಗುರಿಯನ್ನು ಸಾಧಿಸುತ್ತಾ ಬಂದಿದೆ, ಮತ್ತು ಮೂರು ಸಾವಿರ ವರ್ಷಗಳಿಗೂ ಮಿಕ್ಕಿ ಕಾಲ ಈ ಹೊಂದಿಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಬಂದಿದೆ. ಅದು ಮೊದಲು ಹುಟ್ಟಿದ ಬಳಿಕ ಪ್ರತಿಯೊಂದು ಜನಾಂಗದಿಂದಲೂ ಸ್ವಲ್ಪವನ್ನಾದರೂ ಸ್ವೀಕರಿಸಿ, ನುಂಗಿ, ಜೀರ್ಣಿಸಿಕೊಂಡು, ಅರ್ಥೈಸಿಕೊಳ್ಳುತ್ತಾ ಬಂದಿದೆ’’ ಯಾವುದೇ ಒಂದು ಗುರುತಿಸಲಾಗಿರುವ ಧರ್ಮ ಅಥವಾ ಧಾರ್ಮಿಕ ಜನಾಂಗಕ್ಕೆ ಅನ್ವಯಿಸಬಹುದಾದ ಯಾವತ್ತೂ ತಪಾಸಣಾ ಪರಿಕರಗಳನ್ನು ಹಿಂದೂ ಧರ್ಮದ ಸಮಸ್ಯೆಗಳಿಗೆ ಅಳವಡಿಸಿನೋಡುವುದು ಪರ್ಯಾಪ್ತವೆನ್ನಿಸುವುದಿಲ್ಲ. ಸಾಮಾನ್ಯವಾಗಿ ಗುರುತಿಸಲಾಗುವ ಯಾವುದೇ ಧರ್ಮ ಅಥವಾ ಧಾರ್ಮಿಕ ಜನಾಂಗ ಒಂದಿಷ್ಟು ತಾತ್ವಿಕ ನೆಲೆಗಟ್ಟುಗಳು ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿರುತ್ತದೆ. ಈ ರೀತಿಯ ತಪಾಸಣೆ ಹಿಂದೂ ಧರ್ಮಕ್ಕೆ ಅನ್ವಯವಾಗುತ್ತದೆಯೆ? ಈ ಪ್ರಶ್ನೆಗೆ ಉತ್ತರಿಸುವಾಗ ನಾವು ಭಾರತೀಯ ತತ್ವಶಾಸ್ತ್ರದ ಬಗ್ಗೆ ಡಾ ರಾಧಾಕೃಷ್ಣನ್ ಅವರು ಕಂಡುಕೊಂಡಿರುವ ವಿಚಾರಗಳನ್ನು ಆಧರಿಸಬೇಕಾಗುತ್ತದೆ. (‘Indian Philosophy" by Dr. Radhakrishnan, Vol. I, pp. 2223). ಪ್ರಾಚೀನ ಭಾರತದಲ್ಲಿ ಬೇರೆ ದೇಶಗಳಲ್ಲಿರುವಂತೆ ತತ್ವಶಾಸ್ತ್ರವು ಬೇರಾವುದೋ ವಿಜ್ಞಾನಕ್ಕೆ ಅಥವ ಕಲೆಗೆ ಹೆಚ್ಚುವರಿ ಭಾಗವಾಗಿರಲಿಲ್ಲ, ಬದಲಾಗಿ ಸ್ವತಂತ್ರವಾದ ಮತ್ತು ಪ್ರಮುಖವಾದ ಭಾಗವಾಗಿತ್ತು

‘‘ ..... ಶತ ಶತಮಾನಗಳ ಚರಿತ್ರೆಯಲ್ಲಿ, ಡಾ. ರಾಧಾಕೃಷ್ಣನ್ ಅವರ ಪ್ರಕಾರ, ‘‘ಭಾರತ ಹಾದುಬಂದಿರುವ ಎಲ್ಲ ಸನ್ನಿವೇಶಗಳಲ್ಲಿ, ಒಂದು ಗಮನಾರ್ಹ ಗುರುತು ಎದ್ದುಕಾಣುತ್ತದೆ. ಕಡುನಂಬಿಕೆ ಇಟ್ಟಿರುವ ಕೆಲವು ಮಾನಸಿಕ ವೈಶಿಷ್ಟ್ಯಗಳೇ ಅದರ ವಿಶೇಷ ಸಂಸ್ಕೃತಿ, ಮತ್ತು ಭವಿಷ್ಯದಲ್ಲೂ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡಿರುವ ತನಕ ಅದು ಭಾರತೀಯರ ಗುಣಲಕ್ಷಣದ ವಿಶಿಷ್ಟ ಗುರುತಾಗಿ ಉಳಿಯಲಿದೆ’’. ಭಾರತೀಯ ಜ್ಞಾನದ ಚರಿತ್ರೆಯನ್ನು ಕಂಡಾಗ ಸ್ಪಷ್ಟವಾಗಿ ಹೊರಹೊಮ್ಮುವ ಒಂದು ವಿಚಾರವೆಂದರೆ, ಹಿಂದೂ ಧರ್ಮದ ಅಭಿವೃದ್ಧಿ ಯಾವತ್ತಿಗೂ ಸತ್ಯಕ್ಕೆ ಹಲವು ಮುಖಗಳು ಎಂಬ ಎಚ್ಚರಿಕೆಯನ್ನು ಆಧರಿಸಿದ ಅವಿರತ ಸತ್ಯಶೋಧದಿಂದ ಪ್ರೇರಿತವಾಗಿತ್ತು. ಸತ್ಯ ಒಂದೇ, ಆದರೆ ವಿದ್ವಾಂಸರು ಅದನ್ನು ವಿಭಿನ್ನವಾಗಿ ವಿವರಿಸಬಲ್ಲರು. (..)

(ಮುಂದುವರಿಯುವುದು...)

ಅಕ್ಟೋಬರ್ 25ರಂದು ಏಳು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ‘ಹಿಂದುತ್ವ’ಕ್ಕೆ ತನ್ನದೇ ಪೀಠವೊಂದು 20 ವರ್ಷಗಳ ಹಿಂದೆ ಕೊಟ್ಟಿದ್ದ ವ್ಯಾಖ್ಯೆಯನ್ನು ಮರುಪರಿಶೀಲಿಸಲು ನಿರಾಕರಿಸಿದೆ.
  1987-89ರ ಸುಮಾರಿಗೆ ದೇಶದ ರಾಜಕಾರಣದೊಳಗೆ ಧರ್ಮದ ಹೆಸರಲ್ಲಿ ಪಾಲ್ಗೊಳ್ಳುವಿಕೆ ಬಿರುಸಾಗಿ ಆರಂಭಗೊಂಡಿದ್ದ ಕಾಲದಲ್ಲಿ, ಚುನಾವಣಾ ಭಾಷಣಗಳಲ್ಲಿ ಧರ್ಮದ ಹೆಸರಿನಲ್ಲಿ ಮತ ಯಾಚಿಸಿದ ಕುರಿತಾದ ಸುಮಾರು 11 ಪ್ರಕರಣಗಳಲ್ಲಿ ಅಪೀಲು ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟಿನ ಅಂದಿನ ನ್ಯಾಯಮೂರ್ತಿ ಜಗದೀಶ್ ಶರನ್ ವರ್ಮಾ ಅವರು ನೀಡಿದ ತೀರ್ಪುಗಳಲ್ಲಿ ಒಂದು ಪ್ರಕರಣದ ತೀರ್ಪಿನಲ್ಲಿ ‘ಹಿಂದುತ್ವ’ದ ವ್ಯಾಖ್ಯೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ್ದಾರೆ.
ಅದಾದ ಬಳಿಕ ಮುಂದೆ ಅಯೋಧ್ಯಾ ವಿವಾದ ತಾರಕಕ್ಕೇರಿದಲ್ಲಿಂದ ಇಲ್ಲಿಯ ತನಕ ದೇಶದ ರಾಜಕಾರಣಧರ್ಮದ ವ್ಯಾಖ್ಯೆಗಳಲ್ಲಿ ಬಹಳ ಬದಲಾವಣೆಗಳಾಗಿವೆ ಎಂಬುದು ಎಲ್ಲರ ಗಮನಕ್ಕೂ ಬಂದಿದೆ. ಆ ಹಿನ್ನೆಲೆಯಲ್ಲಿ ನ್ಯಾ. ಜೆ. ಎಸ್. ವರ್ಮಾ ಅವರ 11.12.1995ರ ತೀರ್ಪಿನಲ್ಲಿ ಹಿಂದುತ್ವದ ಬಗ್ಗೆ ನೀಡಿರುವ ವ್ಯಾಖ್ಯಾನ ಬಹಳ ಮಹತ್ವದ್ದೆನಿಸುತ್ತದೆ. ಅದು ಇಂದಿಗೂ ಊರ್ಜಿತ ಎಂಬ ಸುಪ್ರೀಂ ಕೋರ್ಟಿನ ಅಭಿಪ್ರಾಯದ ಹಿನ್ನೆಲೆಯಲ್ಲಿ ದೇಶದ ರಾಜಕಾರಣ ನಡೆದುಬಂದ ಹಾದಿಯನ್ನು ಪುನರವಲೋಕಿಸುವುದೂ ಅಗತ್ಯವಿದೆ.
v/s v/s ಡಾ. ರಮೇಶ್ ಯಶವಂತ್ ಪ್ರಭು ಪ್ರಭಾಕರ್ ಕಾಶೀನಾಥ್ ಕುಂಟೆ ಮತ್ತು ಇತರರು ಹಾಗೂ ಬಾಳಾ ಠಾಕ್ರೆ ಪ್ರಭಾಕರ್ ಕಾಶೀನಾಥ್ ಕುಂಟೆ ಮತ್ತು ಇತರರು ಪ್ರಕರಣದ ಸಿವಿಲ್ ಅಪೀಲು ಸಂಖ್ಯೆ of 2835 1989ಗಳಿಗೆ ಒಟ್ಟಾಗಿ ಸುಪ್ರೀಂ ಕೋರ್ಟು ನೀಡಿರುವ ತೀರ್ಪು ಇದು.
ಮಹಾರಾಷ್ಟ್ರ ವಿಧಾನಸಭೆಗೆ 1987 ಡಿಸೆಂಬರ್ 13ರಂದು ಚುನಾವಣೆ ನಡೆದಿತ್ತು. ಆ ಚುನಾವಣೆಗೆ ವಿಲೇಪಾರ್ಲೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಾ. ರಮೇಶ್ ಯಶವಂತ್ ಪ್ರಭು ಅವರ ಪರವಾಗಿ ಬಾಳಾ ಠಾಕ್ರೆ ಅವರು 29.11.1987ರಂದು ಪಾರ್ಲೆಯಲ್ಲಿ, 9.12.1987ರಂದು ಖಾರ್ ದಂಡಾ ಶಂಕರ ದೇವಸ್ಥಾನದ ಬಳಿ ಮತ್ತು 10.12.1987ರಂದು ಪಶ್ಚಿಮ ವಿಲೇ ಪಾರ್ಲೆಯ ಜಲ್ತಾರಣ್ ಮೈದಾನದಲ್ಲಿ ಮಾಡಿದ ಚುನವಣಾ ಭಾಷಣಗಳಲ್ಲಿ ಧರ್ಮಾಧಾರಿತವಾಗಿ ಮತ ಯಾಚಿಸಿದ್ದರು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.
ಆ ದಾವೆಗೆ ನ್ಯಾ. ವರ್ಮಾ ಅವರು ನೀಡಿದ 34 ಪುಟಗಳ ತೀರ್ಪಿನಲ್ಲಿ ಹಿಂದುತ್ವದ ಬಗ್ಗೆ ವಿವರವಾಗಿ ಚರ್ಚಿಸಿ, ಹಿಂದುತ್ವ ಒಂದು ಜೀವನಕ್ರಮ ಎಂದು ತೀರ್ಮಾನ ನೀಡಿದ್ದರು. ತೀರ್ಪಿನಲ್ಲಿ, ಹಿಂದುತ್ವದ ಚರ್ಚೆಗೆ ಸಂಬಂಧಿಸಿದ ಭಾಗವನ್ನು ಇಲ್ಲಿ ಭಾಷಾಂತರಿಸಿ ನೀಡಲಾಗಿದೆ.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News