ಪಿಣರಾಯಿ ತಲೆಗೆ 1 ಕೋ. ರೂ. ಘೋಷಿಸಿದ ಕುಂದನ್ ಚಂದ್ರಾವತ್ ಬಂಧನ
Update: 2017-03-28 07:08 GMT
ಭೋಪಾಲ್, ಮಾ. 28: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಅರೆಸ್ಸೆಸ್ ನಾಯಕ ಕುಂದನ್ ಚಂದ್ರಾವತ್‌ರನ್ನು ಬಂಧಿಸಲಾಗಿದೆ. ಇಂದು ಉಜ್ಜೈನಿಯಲ್ಲಿ ಪೊಲೀಸರು ಆವರನ್ನು ಬಂಧಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮಾರ್ಚ್ ಮೂರರಂದು ಉಜ್ಜೈನಿಯ ಶಹೀದ್ ಪಾರ್ಕಿನಲ್ಲಿನಡೆದಿದ್ದ ಒಂದು ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿಪಿಣರಾಯಿ ವಿಜಯನ್‌ರನ್ನು ಕೊಂದವರಿಗೆ ತನ್ನ ಆಸ್ತಿ ಮಾರಿಯಾದರೂ ಒಂದು ಕೋಟಿ ರೂಪಾಯಿ ಬುಹುಮಾನ ಕೊಡುವುದಾಗಿ ಇವರು ಘೋಷಿಸಿದ್ದರು. ಹೇಳಿಕೆ ವಿವಾದವಾಗುವುದರೊಂದಿಗೆ ಬಿಜೆಪಿ ಮತ್ತುಆರೆಸ್ಸೆಸ್ ಇವರನ್ನು ಖಂಡಿಸಿ ಮಾತಾಡಿದ್ದವು. ಆರೆಸ್ಸೆಸ್ ತನ್ನೆಲ್ಲ ಸಂಘಟನಾ ಹೊಣೆಗಾರಿಕೆಗಳಿಂದ ಕುಂದನ್ ಮಿಶ್ರಾರನ್ನು ವಜಾಗೊಳಿಸಿತ್ತು.