ಟೈಮ್ಸ್ ಮ್ಯಾಗಝಿನ್ ನ “ಅಂತರ್ಜಾಲದ ಪ್ರಭಾವಶಾಲಿ ವ್ಯಕ್ತಿ”ಗಳ ಪಟ್ಟಿಯಲ್ಲಿ ಸಿರಿಯಾದ 8ರ ಹರೆಯದ ಬಾಲಕಿ
ಹೊಸದಿಲ್ಲಿ, ಜೂ.26: ಅಲೆಪ್ಪೋದ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಟ್ಟಿಟ್ಟರ್ ನಲ್ಲಿ ವರದಿ ಮಾಡಿ ಜಗತ್ತಿನ ಗಮನಸೆಳೆದ 8 ವರ್ಷದ ಬಾಲಕಿಗೆ ಟೈಮ್ಸ್ ಮ್ಯಾಗಝಿನ್ “ಅಂತರ್ಜಾಲದಲ್ಲಿ ಪ್ರಭಾವಶಾಲಿ ವ್ಯಕ್ತಿ”ಗಳ ಪಟ್ಟಿಯಲ್ಲಿ ಸ್ಥಾನ ನೀಡಿದೆ.
ಬ್ರಿಟಿಷ್ ಲೇಖಕ ಜೆ.ಕೆ.ರೋಲಿಂಗ್, ಪಾಪ್ ಗಾಯಕಿ ರಿಹಾನ, ಕಿಮ್ ಕರ್ದಾಶಿಯನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪಟ್ಟಿಯಲ್ಲಿದ್ದಾರೆ.
ಸಾಮಾಜಿಕ ಜಾಲತಾಣಗಳು ಹಾಗೂ ಇಂಟರ್ನೆಟ್ ನಲ್ಲಿ ಅತ್ಯಂತ ಪ್ರಭಾವಶಾಲಿಗಳನ್ನು ವರ್ಷಂಪ್ರತಿ ಟೈಮ್ಸ್ ಮ್ಯಾಗಝಿನ್ ಪ್ರಕಟಿಸುತ್ತದೆ. ತನ್ನ ತಾಯಿಯ ನೆರವಿನೊಂದಿಗೆ @AlabedBana ಎಂಬ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸುತ್ತಿರುವ ಬನಾ ಅಲಾಬೆದ್ ಸಿರಿಯಾದ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಜನರು ಅನುಭವಿಸುತ್ತಿರುವ ಸಂಕಷ್ಟಗಳ ಫೋಟೊ ಹಾಗೂ ವಿಡಿಯೋಗಳನ್ನು ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿ ಜಗತ್ತಿನ ಗಮನ ಸೆಳೆದಿದ್ದಳು. ಈ ಬಾಲಕಿಗೆ ಟ್ವಿಟ್ಟರ್ ನಲ್ಲಿ 3,65,000 ಫಾಲೋವರ್ಸ್ ಇದ್ದಾರೆ.
2016ರ ಸೆಪ್ಟೆಂಬರ್ 24ರಂದು ಟ್ವಿಟ್ಟರ್ ಖಾತೆ ತೆರೆದಿದ್ದ ಬನಾ “ಬಾಂಬ್ ದಾಳಿಯಿಂದ ನಮಗೆ ಹೊರ ಹೋಗಲಾಗುತ್ತಿಲ್ಲ. ದಯವಿಟ್ಟು ನಮ್ಮ ಮೇಲೆ ಬಾಂಬಿ ದಾಳಿ ನಡೆಸಬೇಡಿ” ಎಂದು ಟ್ವೀಟ್ ಮಾಡಿದ್ದರು. “ಅಲೆಪ್ಪೋ ಒಳ್ಳೆಯ ನಗರ, ನಮಗೆ ಶಾಂತಿ ಬೇಕು. ನಾನು ಮಗುವಿನ ಹಾಗೂ ಜೀವಿಸಲು ಇಚ್ಛಿಸುತ್ತೇನೆ ಆದರೆ ನಾನು ಸಂಕಷ್ಟದಲ್ಲಿದ್ದೇನೆ” ಎಂದು ಬನಾ ಟ್ವೀಟ್ ಮಾಡಿದ್ದರು.
ಬನಾ ಏಳು ವರ್ಷದವರಾಗಿದ್ದಾಗ ಡಿಸೆಂಬರ್ ನಲ್ಲಿ ಆಕೆಯ ಕುಟುಂಬ ಅಲೆಪ್ಪೋದಿಂದ ಸುರಕ್ಷಿತವಾಗಿ ಟರ್ಕಿಗೆ ಸ್ಥಳಾಂತರಗೊಂಡಿತ್ತು, ಟರ್ಕಿ ಅಧ್ಯಕ್ಷ ಎರ್ದೊಗಾನ್ ಬನಾ ಹಾಗೂ ಆಕೆಯ ಕುಟುಂಬಸ್ಥರನ್ನು ಸ್ವಾಗತಿಸಿದ್ದರು.