ಜಿಎಸ್‌ಟಿ: ಗೋಳು, ಗೋಳು, ಗೋಳು

Update: 2017-09-25 04:05 GMT

ಜಿಎಸ್‌ಟಿಯ ಟ್ವಿಟರ್ ಹ್ಯಾಂಡ್ಲ್ ಪ್ರತಿನಿತ್ಯ ನೂರಾರು ದೂರುಗಳನ್ನು ಸ್ವೀಕರಿಸಿ, ಆ ದೂರುಗಳನ್ನು ಪಡೆದಿರುವುದಾಗಿ ಒಪ್ಪಿಕೊಳ್ಳುತ್ತಾದರೂ, (ಅಕ್‌ನಾಲೆಜ್‌ಮಾಡುತ್ತದೆಯಾದರೂ), ಇಷ್ಟರವರೆಗೆ, ಕನಿಷ್ಠಪಕ್ಷ ಅಧಿಕೃತವಾಗಿ, ಯಾವುದೇ ಪರಿಹಾರ ಕಂಡುಬಂದಿಲ್ಲ; ಯಾವುದೇ ಪರಿಹಾರ ದೊರಕಿಲ್ಲ.


ಭಾಗ-1

ಭಾರತದ ಅತ್ಯಂತ ಬೃಹತ್ತಾದ ತೆರಿಗೆ ಸುಧಾರಣೆಯಾಗಿರುವ ದಿ ಗೂಡ್ಸ್ ಆ್ಯಂಡ್ ಸರ್ವಿಸಸ್ ಟ್ಯಾಕ್ಸ್ (ಜಿಎಸ್‌ಟಿ) ಅಥವಾ ಸರಕು ಹಾಗೂ ಸೇವಾತೆರಿಗೆಯನ್ನು ಜುಲೈ1ರಂದು ಜಾರಿಗೊಳಿಸಲಾಯಿತು. ಆದರೆ ಅಸಮರ್ಪಕವಾದ ತಾಂತ್ರಿಕ ಅನುಷ್ಠಾನಗಳಿಂದಾಗಿ ಅದಿನ್ನೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ; ತೆರಿಗೆಗೆ ಸಂಬಂಧಿಸಿದ ವ್ಯವ್ಥೆಗಳು ಸಮಸ್ಯೆಗಳ ಸರಮಾಲೆಯಲ್ಲಿ ಸಿಕ್ಕಿಹಾಕಿಕೊಂಡಿವೆ. ಪರಿಣಾಮವಾಗಿ ಜಿಎಸ್‌ಟಿ ರಿಟರ್ನ್ಸ್‌ಗಳನ್ನು ಸಲ್ಲಿಸುವ ಅಂತಿಮ ದಿನಾಂಕಗಳನ್ನು ಅಕ್ಟೋಬರ್ ಮತ್ತು ಅದಕ್ಕೂ ಮುಂದಕ್ಕೆ ತಳ್ಳಲಾಗುತ್ತಿದೆ. ಕೆಲವು ದಿನಗಳ ಹಿಂದೆ, ಬಿಜೆಪಿ ನಾಯಕ ಬಿಹಾರದ ಉಪಮುಖ್ಯಮಂತ್ರಿ, ಸುಶೀಲ್‌ಕುಮಾರ್ ಮೋದಿಯ ಅಧ್ಯಕ್ಷತೆಯಲ್ಲಿ ಐವರು ಸಚಿವರ ಒಂದು ಸಮಿತಿಯು, ವ್ಯಾಪಾರಿಗಳು ತಮ್ಮ ಜಿಎಸ್‌ಟಿ ರಿಟರ್ನ್ಸ್‌ಗಳನ್ನು ಭರ್ತಿಮಾಡುವ ನಿಟ್ಟಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಸಭೆ ಸೇರಿತು.

 ಈ ಮೊದಲು ವ್ಯಾಪಾರ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯಗಳಿಗೆ ಪ್ರತ್ಯೇಕವಾಗಿ ನೀಡುತ್ತಿದ್ದ ಎಲ್ಲ ಪರೋಕ್ಷ ತೆರಿಗೆಗಳನ್ನು ಜಿಎಸ್‌ಟಿ ತೆಕ್ಕೆಗೆ ತೆಗೆದುಕೊಂಡು ಒಂದು ಸಾಮಾನ್ಯ, ಸಮಾನ ಮಾರುಕಟ್ಟೆಯನ್ನು ಸೃಷ್ಟಿಸುವ ಗುರಿಹೊಂದಿದೆ. ಅದು ತೆರಿಗೆ ಅರ್ಜಿಗಳನ್ನು ತುಂಬುವ ವ್ಯವಸ್ಥೆಯು ಕೂಡಾ ಆಮೂಲಾಗ್ರವಾಗಿ ಬದಲಾಯಿಸುತ್ತದೆ, ಆ ಮೂಲಕ ವ್ಯಾಪಾರಿಗಳು ಒಂದು ಹೊಸ ಫಿಲ್ಲಿಂಗ್ ತಂತ್ರಾಂಶವನ್ನು ಬಳಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ. ಆದರೆ ಈ ತಂತ್ರಾಂಶ(ಸಾಫ್ಟ್‌ವೇರ್) ಮಾಡಬೇಕಾದ ಕೆಲಸಮಾಡುವಲ್ಲಿ ವಿಫಲವಾಗಿದೆ. ಹೊಸ ಜಿಎಸ್‌ಟಿ ಪೋರ್ಟಲ್‌ಗಳನ್ನು, ಫಾರ್ಮ್‌ಗಳನ್ನು ತುಂಬುವುದೆಂದರೆ, ಹಡಗೊಂದರಲ್ಲಿ ಪ್ರಯಾಣಮಾಡುತ್ತಲೇ ಅದನ್ನು ನಿರ್ಮಿಸುವ ಹಾಗೆ, ಆದ್ದರಿಂದ ವ್ಯಾಪಾರಸ್ಥರು ತಮ್ಮ ರಿಟರ್ನ್ಸ್‌ಗಳನ್ನು ಸಲ್ಲಿಸಲು ಕೊನೆಯ ಕ್ಷಣದವರೆಗೆ ಕಾಯಬಾರದೆಂದು ಮೋದಿ ಹೇಳಿರುವುದಾಗಿ ವರದಿಯಾಗಿದೆ.

ಜಿಎಸ್‌ಟಿ ನೆಟ್‌ವರ್ಕ್ ನಡೆಸುವ ವೆಬ್‌ಸೈಟ್‌ಗಳನ್ನು ಹಾಗೂ ಮೊಬೈಲ್ ಆ್ಯಪ್‌ಗಳನ್ನು ಬಳಸಿ ವಾಣಿಜ್ಯೋದ್ಯಮಗಳು ತಮ್ಮ ಜಿಎಸ್‌ಟಿ ರಿಟರ್ನ್ಸ್ ಗಳನ್ನು ಸಲ್ಲಿಸಬೇಕು. ಐವರು ಸಚಿವ - ಸದಸ್ಯರ ಸಮಿತಿಯ ಈ ನೆಟ್‌ವರ್ಕ್‌ನ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಪ್ರತೀ 15 ದಿನಗಳಿಗೊಮ್ಮೆ ಸಭೆ ಸೇರುವ ಯೋಜನೆ ಹಾಕಿಕೊಂಡಿದೆ ಮತ್ತು ಅಕ್ಟೋಬರ್ 30ರ ವೇಳೆಗೆ ಸಿಸ್ಟಮ್‌ನಲ್ಲಿರುವ ಶೇ.80ದಷ್ಟು ಸಮಸ್ಯೆಗಳು ಪರಿಹಾರವಾಗಬೇಕೆಂದು ತಾನು ನಿರೀಕ್ಷಿಸುತ್ತಿರುವುದಾಗಿ ಮೋದಿ ಹೇಳಿದ್ದಾರೆ. ಆದರೆ ಜಿಎಸ್‌ಟಿ ಪೋರ್ಟಲ್‌ನಲ್ಲಿ ಸತತವಾಗಿ ಕಾಣಿಸುತ್ತಿರುವ ಸಮಸ್ಯೆಗಳ ಬಗ್ಗೆ ವ್ಯಾಪಾರಿಗಳು ಆತಂಕಿತರಾಗಿಯೇ ಉಳಿದಿದ್ದಾರೆ.

ಲಾಗ್ ಇನ್ ಆಗಲು ಆಗುತ್ತಿಲ್ಲ :
ಪೋರ್ಟಲ್‌ಗೆ ಲಾಗ್ ಇನ್ ಆಗುವಲ್ಲಿ ಮತ್ತು ಲಾಗ್ ಇನ್ ಆಗಿ ತಮ್ಮ ರಿಟರ್ನ್ಸ್ ಗಳನ್ನು ಸಲ್ಲಿಸುವಲ್ಲಿ ವಿಪರೀತ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹಲವರು ವರದಿ ಮಾಡಿದ್ದಾರೆ ಎಂದು ಭಾರತದ ಜವಳಿ ತಯಾರಕರ ಸಂಘದ ಅಧ್ಯಕ್ಷ ರಾಹುಲ್ ಮೆಹ್ತಾ ಹೇಳಿದ್ದಾರೆ: ‘‘ ಲಾಗಿಂಗ್ - ಇನ್ ಸಮಸ್ಯೆಯಂತಹ ಹಲವಾರು ತಾಂತ್ರಿಕ ಸಮಸ್ಯೆಗಳು ನೆಟ್‌ವರ್ಕ್‌ನಲ್ಲ್ಲಿವೆ. ಜಿಎಸ್‌ಟಿಗೆ ಬದಲಾವಣೆ ಮಾಡಿಕೊಂಡಿರುವ ಮತ್ತು ಲಾಗ್ ಇನ್ ಆಗಲು ಬೇಕಾದ ತಮ್ಮ ತಾತ್ಕಾಲಿಕ ಬಿಜಿಯಾಗಿರುವುದರಿಂದ ಲಾಗ್ ಇನ್ ಆಗಲು ಅಸಮರ್ಥರಾಗಿದ್ದಾರೆ.’’

ಹೆಚ್ಚಿನ ವ್ಯಾಪಾರಿಗಳು ಕೆಲವು ಪ್ರಯತ್ನಗಳ ಬಳಿಕ ಪೋರ್ಟಲ್‌ಗೆ ಆಕ್ಸೆಸ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರಾದರೂ, ನೆಟ್‌ವರ್ಕ್ ಓವರ್‌ಲೋಡ್ ಆಗಿರುವುದರಿಂದ ಇಡೀ ಪ್ರಕ್ರಿಯೆ ಒಮ್ಮಿಮ್ಮೆ ಮೂರರಿಂದ ನಾಲ್ಕುಗಂಟೆಗಳಷ್ಟು ವಿಳಂಬವಾಗುವ ಸಾಧ್ಯತೆಯೂ ಇರುತ್ತದೆ.

ರಿಟರ್ನ್ಸ್‌ಗಳ ನಿರಾಕರಣೆ ಜಿಎಸ್‌ಟಿ ನಿಯಮಗಳಲ್ಲಿ ಹೇಳಲಾಗಿರುವ ನಿರ್ದಿಷ್ಟ ಅಂಶಗಳನ್ನು, ಮಾಹಿತಿ ಯನ್ನು ಪೂರೈಸಿದಾಗಲೂ ತಮ್ಮ ತೆರಿಗೆ ರಿಟರ್ನ್ಸ್‌ಗಳನ್ನು ಸ್ವೀಕರಿಸಲು, ಎಕ್ಸೆಪ್ಟ್ ಮಾಡಲು ಕಂಪ್ಯೂಟರ್ ನಿರಾಕರಿಸುವುದು, ಆನ್‌ಲೈನ್ ಸಿಸ್ಟಮ್ ಸ್ವೀಕರಿಸದಿರುವುದು ಇನ್ನೊಂದು ಸಮಸ್ಯೆ ಎಂದು ವ್ಯಾಪಾರಿಗಳು ವರದಿಮಾಡಿದ್ದಾರೆ. ಪೋರ್ಟಲ್, ಆನ್‌ಲೈನ್ ವ್ಯವಸ್ಥೆಯು ‘‘ಇನ್‌ವ್ಯಾಲಿಡ್ ರಿಟರ್ನ್ ಟೈಪ್’’ ಎಂದು ಒಂದು ತಪ್ಪನ್ನು ತೋರಿಸಿದ್ದರಿಂದ, ತಾವು ತಮ್ಮ 3ಬಿ ರಿಟರ್ನ್‌ಗಳನ್ನು ಫೈಲ್‌ಮಾಡಲು, ಸಲ್ಲಿಸಲು ಸಾಧ್ಯವಾಗಲಿಲ್ಲವೆಂದು ದೂರು ನೀಡಲು ಜನರು ಈ ತಿಂಗಳಿನಲ್ಲಿ ಟ್ವಿಟರ್‌ಗೆ ಮೊರೆಹೋಗಬೇಕಾಗಿ ಬಂತು.

ಬಳಕೆದಾರರು ತಮ್ಮ ನಿಜವಾದ ರಿಟರ್ನ್ ಅರ್ಜಿಗಳನ್ನು ಅಪ್‌ಲೋಡ್ ಮಾಡುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಾಗ, ಜುಲೈ ಮತ್ತು ಆಗಸ್ಟ್ ತಿಂಗಳ ಮಟ್ಟಿಗೆ ಪರಿಚಯಿಸಲಾದ ಒಂದು ಸರಳೀಕೃತ ರಿಟರ್ನ್ ಫಾರ್ಮೋ 3 ಬಿ ರಿಟರ್ನ್. ಈ ರಿಟರ್ನ್ ವ್ಯಾಪಾರಿಗಳಿಗೆ ತಮ್ಮ ಮಾರಾಟ ಮತ್ತು ಕೊಂಡುಕೊಳ್ಳುವಿಕೆ ಇನ್‌ವ್ಯಾಸ್‌ಗಳನ್ನು, ಒಂದು ‘ಇನ್‌ವ್ಯಾಸ್-ಲೆವೆಲ್ ರಿಟರ್ನ್’ ಆಗಿ ಪ್ರತಿಯೊಂದು ಇನ್‌ವ್ಯಾಸ್‌ನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಅಪ್‌ಲೋಡ್ ಮಾಡದೇ, ತಮ್ಮ ಸೇಲ್ ಮತ್ತು ಪರ್ಚೇಸ್‌ಗಳ ಒಟ್ಟು ಸಾರಾಂಶವನ್ನು ಫೈಲ್‌ಮಾಡಲು ಅವಕಾಶ ಮಾಡಿಕೊಡುತ್ತದೆ. ಹೊಸ ಮಾರ್ಗದರ್ಶಿ ಸೂತ್ರಗಳ ಪ್ರತ್ಯೇಕವಾಗಿ ಅಪ್‌ಲೋಡ್ ಮಾಡುವ ಇನ್‌ವ್ಯಾಸ್ ಲೆವೆಲ್ ರಿಟರ್ನ್‌ನ್ನು ‘ಜಿಎಸ್‌ಟಿ ಆರ್1’ ಎಂದು ಕರೆಯಲಾಗಿದೆ.

ಜಿಎಸ್‌ಟಿಯ ಟ್ವಿಟರ್ ಹ್ಯಾಂಡ್ಲ್ ಪ್ರತಿನಿತ್ಯ ನೂರಾರು ದೂರುಗಳನ್ನು ಸ್ವೀಕರಿಸಿ, ಆ ದೂರುಗಳನ್ನು ಪಡೆದಿರುವುದಾಗಿ ಒಪ್ಪಿಕೊಳ್ಳುತ್ತಾದರೂ, (ಅಕ್‌ನಾಲೆಜ್‌ಮಾಡುತ್ತದೆಯಾದರೂ), ಇಷ್ಟರವರೆಗೆ, ಕನಿಷ್ಠಪಕ್ಷ ಅಧಿಕೃತವಾಗಿ, ಯಾವುದೇ ಪರಿಹಾರ ಕಂಡುಬಂದಿಲ್ಲ; ಯಾವುದೇ ಪರಿಹಾರ ದೊರಕಿಲ್ಲ. 

(ಮುಂದುವರಿಯುವುದು)

Writer - ಮಾಯಾಂಕ್ ಜೈನ್

contributor

Editor - ಮಾಯಾಂಕ್ ಜೈನ್

contributor

Similar News