ದಿಲ್ಲಿ ದರ್ಬಾರ್

Update: 2018-03-03 18:50 GMT

ಅಮಿತಾಭ್ ಲೆಕ್ಕಾಚಾರ
ರಾಹುಲ್‌ಗಾಂಧಿ ಇದೀಗ ಟ್ವಿಟರ್‌ನಲ್ಲಿ ಬಿಗ್-ಬಿ ಅವರಂಥ ಅನುಯಾಯಿಗಳನ್ನು ಹೊಂದಿದ್ದಾರೆ. ಅಮಿತಾಭ್ ಬಚ್ಚನ್ ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ, ಮನೀಶ್ ತಿವಾರಿ, ಪ್ರಿಯಾಂಕಾ ಚತುರ್ವೇದಿ ಹೀಗೆ ಕಾಂಗ್ರೆಸ್ ಮುಖಂಡರನ್ನು ಫಾಲೊ ಮಾಡುತ್ತಿದ್ದಾರೆ. ಇದು ಬಿಗ್-ಬಿ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನುಸರಿಸಲು ಫೆಬ್ರವರಿಯಲ್ಲಿ ಆರಂಭಿಸಿದ ಬಳಿಕದ ಬೆಳವಣಿಗೆ. ಈ ಬೆಳವಣಿಗೆ ಸೂಪರ್‌ಸ್ಟಾರ್‌ನ ಸ್ನೇಹಿತರು ಹಾಗೂ ವಿರೋಧಿಗಳ ಗಮನವನ್ನೂ ಸೆಳೆದಿದೆ. ರಾಜಕೀಯದ ವಿಚಾರಕ್ಕೆ ಬಂದರೆ ವಿವೇಚನೆಯನ್ನು ಶೌರ್ಯದ ಹಿನ್ನೆಲೆಯಲ್ಲಿ ಅಳೆಯುವ ಇತಿಹಾಸವನ್ನು ಬಚ್ಚನ್ ಹೊಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಗಾಂಧಿಗಳ ಪತನದೊಂದಿಗೆ ಆ ಪಕ್ಷದ ಬಗೆಗಿನ ಬಚ್ಚನ್ ಒಲವೂ ಅಷ್ಟಕ್ಕಷ್ಟೇ ಇತ್ತು. ಆದರೆ ಬಚ್ಚನ್ ನಿಲುವಿನಲ್ಲಿ ಇತ್ತೀಚಿನ ಈ ಬದಲಾವಣೆಗೆ ಅವರ ಪತ್ನಿಯ ರಾಜಕೀಯ ಭವಿಷ್ಯವೂ ಕಾರಣ ಎನ್ನಲಾಗುತ್ತಿದೆ. ತಕ್ಷಣಕ್ಕೆ ಜಯಾ ಬಚ್ಚನ್ ತಣ್ಣಗಿದ್ದಾರೆ. ಬಹುಶಃ ಶಕ್ತಿಕೇಂದ್ರದ ಕಾರಿಡಾರ್‌ನಿಂದ ಬಚ್ಚನ್ ಕುಟುಂಬ ಹೊರಗಿರುವುದು ಬಹುಶಃ ಇದೇ ಮೊದಲು. ಸಮಾಜವಾದಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಜಯಾ ಬಚ್ಚನ್ ಅಧಿಕಾರಾವಧಿ ಮುಕ್ತಾಯದ ಹಂತಕ್ಕೆ ಬಂದಿದೆ. ಉತ್ತರ ಪ್ರದೇಶದಲ್ಲಿ ಎಸ್ಪಿಬಲದ ಹಿನ್ನೆಲೆಯಲ್ಲಿ ಜಯಾ ಮರುನಾಮಕರಣದ ಸಾಧ್ಯತೆ ಕ್ಷೀಣ. ಆದರೆ ಕಾಂಗ್ರೆಸ್ ಮುಖಂಡರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನುಸರಿಸುವುದು ಹೇಗೆ ಲಾಭವಾಗುತ್ತದೆ ಎನ್ನುವುದು ನಿಗೂಢ.


ಅಮಿತ್ ಶಾ ಬಿಗಿಹಿಡಿತ
ಇತ್ತೀಚೆಗೆ ಉದ್ಘಾಟನೆಯಾದ ಬಿಜೆಪಿಯ ನೂತನ ಕಚೇರಿ ಇದೀಗ ಎಲ್ಲರ ಮನೆಮಾತು. ಆದರೆ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ, ಪಕ್ಷ ಹಾಗೂ ಕೇಂದ್ರ ಕಚೇರಿ ರಹಸ್ಯ ತಾಣವಾಗಿಯೇ ಉಳಿದಿದೆ. ಬಿಜೆಪಿಯ ಕೆಲವರಲ್ಲಿರುವ ಆತಂಕವೆಂದರೆ, ಪ್ರಜಾಸತ್ತಾತ್ಮಕ ಪಕ್ಷ ಎನಿಸಿದ್ದ ಬಿಜೆಪಿ ಇದೀಗ ಬದಲಾಗುತ್ತಿದೆ ಅಥವಾ ಬದಲಾಗಿದೆ. ಬದಲಾವಣೆಗೆ ತಕ್ಕಂತೆ ಪಕ್ಷದ ಕೇಂದ್ರ ಕಚೇರಿ, ಮುಖಂಡರು ಮತ್ತು ಕಾರ್ಯಕರ್ತರ ನಡುವಿನ ಮುಕ್ತ ಸಂವಾದಕ್ಕೆ ಪೂರಕವಾಗಿಲ್ಲ. ಅಮಿತ್ ಶಾ ಐದನೇ ಮಹಡಿಯಲ್ಲಿರುತ್ತಾರೆ. ಇಡೀ ಕಟ್ಟಡದ ಪಕ್ಷಿನೋಟ ಅವರಿಗೆ ಕುಳಿತಲ್ಲಿಂದಲೇ ಸಿಗುತ್ತದೆ ಎನ್ನಲಾಗಿದೆ. ಇದರಿಂದ ಸಹಜವಾಗಿಯೇ ಎಲ್ಲ ಬೆಳವಣಿಗೆಗಳು ಶಾ ಗಮನಕ್ಕೆ ಬರುತ್ತದೆ ಎಂಬ ನಂಬಿಕೆ. ಇದೇ ಕಾರಣದಿಂದಲೇ ಬಹುಶಃ ಪಕ್ಷದ ಉತ್ಸಾಹಿ ಮುಖಂಡರ ತಂಡ ಪತ್ರಕರ್ತರನ್ನು ಹೊಸ ಕಚೇರಿಯ ವೀಕ್ಷಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಪತ್ರಕರ್ತರು ಕಾನ್ಫರೆನ್ಸ್ ಹಾಲ್ ಮತ್ತು ಇತರ ಕೊಠಡಿಗಳಲ್ಲಿನ ವಿಲಾಸಿ ಸೌಲಭ್ಯಗಳನ್ನು ಚಿತ್ರೀಕರಿಸಿಕೊಂಡಾಗ ಅದನ್ನು ಪ್ರಸಾರ ಮಾಡದಂತೆ ಫರ್ಮಾನು ಹೊರಬಿದ್ದಿದೆ ಎನ್ನಲಾಗಿದೆ. ಇಂಥ ಐಷಾರಾಮಿ ಸೌಕರ್ಯಗಳು ಪಕ್ಷದ ಕಚೇರಿಯಲ್ಲಿದೆ ಎನ್ನುವ ಅಂಶ ಬಹಿರಂಗವಾಗುವುದು ಅಧ್ಯಕ್ಷರಿಗೆ ಬೇಕಿರಲಿಲ್ಲ. ತನಗಾಗಿಯೇ ಇಷ್ಟು ದೊಡ್ಡ ಕಚೇರಿ ನಿರ್ಮಿಸಿಕೊಂಡ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಬಹುತೇಕ ಮಾಧ್ಯಮಗಳು ಈ ಫರ್ಮಾನಿಗೆ ಬದ್ಧವಾದವು.


ಸತ್ಯಪಾಲ್ ಸಂಕಷ್ಟಗಳು
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರು ಡಾರ್ವಿನ್ ಸಿದ್ಧಾಂತದ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಹೊಂದಿಕೊಳ್ಳಲು ಸಚಿವರ ಕಚೇರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಸಚಿವರು ಇದನ್ನು ವೈಜ್ಞಾನಿಕವಾಗಿ ತಪ್ಪು ಎಂದು ಬಣ್ಣಿಸಿದ್ದರು ಹಾಗೂ ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದ ಬಳಿಕ ಕಚೇರಿಯಿಂದ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ, ವಿಜ್ಞಾನದ ಬಗೆಗಿನ ಸಿಂಗ್ ಅವರ ದೃಷ್ಟಿಕೋನವನ್ನು ಮತ್ತು ಅವರಿಂದಾದ ತಪ್ಪನ್ನು ಸರಿಪಡಿಸಲಾಗಿತ್ತು. ಆದರೆ ಈ ಹೇಳಿಕೆ ಆ ದಿನ ವಿಶೇಷ ಮಹತ್ವ ಪಡೆಯಲಿಲ್ಲ. ಇದರಲ್ಲಿ ಇವರ ಹಿರಿಯರಾದ ಪ್ರಕಾಶ್ ಜಾವಡೇಕರ್ ಅವರ ಮಾತು ನಡೆದಿದೆಯೇ ಎಂಬ ಅನುಮಾನವಿದೆ. ಕಠಿಣ ಸ್ಥಿತಿಯಲ್ಲಿ ಸಚಿವಾಲಯವನ್ನು ಮುನ್ನಡೆಸುತ್ತಿರುವ ಜಾವಡೇಕರ್ ಅವರಿಗೆ ಸತ್ಯಪಾಲ್ ಹೇಳಿಕೆ ಬಗ್ಗೆ ಮಾಧ್ಯಮದಲ್ಲಿ ಚರ್ಚೆಯಾಗುವುದು ಬೇಕಿರಲಿಲ್ಲ. ಅವರಿಗೆ ಸುಮ್ಮನಿರುವಂತೆ ಪಕ್ಷವೂ ಸೂಚಿಸಿದಂತಿತ್ತು.


ಹಳೆಮುಖಗಳ ಬಗ್ಗೆ ಸೋನಿಯಾ ಜಿಗುಪ್ಸೆ!
ಹಳೆಯ ಕಾಂಗ್ರೆಸ್ ಪಕ್ಷದಲ್ಲಿ ಹಳೆಯ ರಕ್ಷಕರ ವ್ಯವಸ್ಥೆಗೆ ತೆರೆ ಬಿದ್ದಿದೆಯೇ? ಪಕ್ಷದ ಚಾಲನಾ ಸಮಿತಿಯ (ಹಿಂದಿನ ಕಾರ್ಯಕಾರಿ ಸಮಿತಿ) ಇತ್ತೀಚಿನ ಸಭೆಯಲ್ಲಿ ತಮ್ಮ ಕೊಠಡಿಯಲ್ಲಿ ಹಳೆ ಮುಖಗಳನ್ನೇ ನೋಡಿ ನಿರಾಸೆಯಾಗಿದೆ ಎಂದು ಹೇಳುವ ಮೂಲಕ ಸೋನಿಯಾಗಾಂಧಿ ತಮ್ಮ ಸಹೋದ್ಯೋಗಿಗಳನ್ನು ದಂಗುಬಡಿಸಿದ್ದರು. ರಾಹುಲ್‌ಗಾಂಧಿ ನೇತೃತ್ವದ ಪಕ್ಷದಲ್ಲಿ ಹಲವು ಯುವ ಮುಖಗಳನ್ನು ತಾವು ನಿರೀಕ್ಷಿಸಿದ್ದಾಗಿ ಸೋನಿಯಾ ಹೇಳಿದರು. ಅವರ ಮಗ, ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ, ಹಳೆ ಮತ್ತು ಹೊಸ ಮುಖಗಳನ್ನು ಹೊಂದುವಲ್ಲಿ ತಾನು ಉತ್ಸುಕ ಎಂದು ಹೇಳುವ ಮೂಲಕ ಚರ್ಚೆ ಮೊಟಕುಗೊಳಿಸಿದರು. ರಾಹುಲ್ ಹೇಳಿಕೆಯಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಬಂತು. ಕೆಲ ಮುಖಗಳಲ್ಲಿ ಮಿಂಚು ಕಾಣಿಸಿಕೊಂಡಿತು ಎಂಬ ವದಂತಿಯೂ ಇದೆ. ಆದರೆ ಅವರ ಕಿವಿಗಳಲ್ಲಿ ಸೋನಿಯಾ ಶಬ್ದಗಳು ಅನುರಣಿಸುತ್ತಿರಬೇಕು.


ಸಿಂಧಿಯಾ ಎಂಬ ಉದಯತಾರೆ
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ ಇದೀಗ ಪಕ್ಷದಲ್ಲಿ ಉದಯಿಸುತ್ತಿರುವ ಹೊಸ ತಾರೆ. ಇತ್ತೀಚಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದುಕೊಂಡಿರುವ ಸ್ಥಾನಗಳು ಈ ಹಿಂದೆ ತಾನು ಹೊಂದಿದ್ದ ಸ್ಥಾನಗಳು ಹಾಗೂ ವಿಜಯದ ಅಂತರ ಕುಗ್ಗಿದೆ ಎಂದು ಅವರ ವಿರೋಧಿಗಳು ಗೊಣಗುತ್ತಿದ್ದರೂ, ಈ ಫಲಿತಾಂಶ ಸಿಂಧಿಯಾ ಅವರನ್ನು ಮತ್ತಷ್ಟು ದಿಟ್ಟಗೊಳಿಸಿವೆ. ಮುಖ್ಯಮಂತ್ರಿಯಾದಿಯಾಗಿ ಇಡೀ ಸಂಪುಟವೇ ಬಿಜೆಪಿ ಪರ ಪ್ರಚಾರಕ್ಕೆ ಇಳಿದರೂ, ಕಾಂಗ್ರೆಸ್ ಗೆಲುವು ಸಾಧ್ಯವಾಗಿರುವುದು ದೊಡ್ಡ ಸಾಧನೆ ಎನ್ನುವುದು ಸಿಂಧಿಯಾ ಆಪ್ತರ ಸಮರ್ಥನೆ. ಆದರೆ ಈ ಗೆಲುವಿಗಾಗಿ ಸಿಂಧಿಯಾ ತಳಹಂತದಿಂದಲೇ ಕಠಿಣ ಶ್ರಮ ಹಾಕಿದ್ದಾರೆ ಎನ್ನುವುದನ್ನು ಪಕ್ಷದ ಒಳಗಿನವರು ಒಪ್ಪಿಕೊಳ್ಳುತ್ತಾರೆ. ಜತೆಗೆ ಪಕ್ಷ ಕೂಡಾ ಸಂಘಟಿತವಾಗಿ ಹೋರಾಟ ನಡೆಸಿತು ಎನ್ನುವುದು ಅವರ ಅಭಿಮತ. ಆದ್ದರಿಂದ ಸಿಂಧಿಯಾ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನಿರೀಕ್ಷಿಸಬಹುದೇ? ಈ ವರ್ಷದ ಉತ್ತರಾರ್ಧದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಈ ರಾಜ್ಯದಲ್ಲಿ ಸಿಂಧಿಯಾ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗುತ್ತದೆ ಎಂಬ ಮಾತು ಈಗಾಗಲೇ ಕೇಳಿಬರುತ್ತಿದೆ. ಆದರೆ ಕೆಲವರು ಹೇಳುವಂತೆ ಸಿಂಧಿಯಾ ಅವರ ವರ್ತನೆಯಲ್ಲಿ ಕೆಲ ಸಮಸ್ಯೆಗಳಿದ್ದು, ಇದನ್ನು ನಿಯಂತ್ರಿಸಿಕೊಳ್ಳದಿದ್ದರೆ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ಕಷ್ಟಸಾಧ್ಯ. ಆದರೆ ಬಹುಶಃ ಸಿಂಧಿಯಾ ಕಲಿಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News