ಸೂಕ್ತ ಸಮಯಕ್ಕಾಗಿ ನಾನು ಕಾಯುತ್ತಿದ್ದೇನೆ -ರೋಹಿಣಿ ಸಾಲ್ಯಾನ್

Update: 2018-04-30 18:52 GMT

ಭಾಗ-1

ಎಪ್ರಿಲ್ ತಿಂಗಳ ಮೊದಲ ಭಾಗದಲ್ಲಿ, ಹೈದರಾಬಾದ್‌ನಲ್ಲಿ 2007ರ ಮೇ 18 ರಂದು ಮಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣದ ಎಲ್ಲ ಆಪಾದಿತರು ನಿರ್ದೋಷಿ ಗಳೆಂದು ಎನ್‌ಐಎ ನ್ಯಾಯಾಲಯವೊಂದು ಘೋಷಿಸಿದಾಗ ಮುಂಬೈಯ ನ್ಯಾಯವಾದಿ ರೋಹಿಣಿ ಸಾಲ್ಯಾನ್‌ರವರಿಗೆ ಆಶ್ಚರ್ಯವಾಗಲಿಲ್ಲ. ಪ್ರಾಸಿಕ್ಯೂಶನ್ ತನ್ನದೇ ಆದ ಒಂದು ಮೊಕದ್ದಮೆಯನ್ನು ಹೇಗೆ ಬುಡಮೇಲು ಗೊಳಿಸರಬಹು ದೆಂಬುದಕ್ಕೆ ಇದೊಂದು ಪಕ್ಕಾ ಉದಾಹರಣೆ. ಆ ಬಾಂಬ್ ಸ್ಫೋಟದಲ್ಲಿ ಒಂಬತ್ತು ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಸ್ವಲ್ಪವೇ ಸಮಯ ದಲ್ಲಿ, ನ್ಯಾಶನಲ್ ಇನ್ವೆಷ್ಟಿಗೇಶನ್ ಏಜೆನ್ಸಿ (ಎನ್‌ಐಎ) ಅಥವಾ ರಾಷ್ಟ್ರೀಯ ತನಿಖಾದಳ, 2014ರಲ್ಲಿ ಸಾಲ್ಯಾನ್‌ರನ್ನೂ ತನಿಖಾ ತಂಡದಿಂದ ಹೊರ ಕಳುಹಿಸಿತು. ಓರ್ವ ಅನುಭವಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಸಾಲ್ಯಾನ್‌ರನ್ನು ಎರಡು ಉನ್ನತ ಮಟ್ಟದ ತನಿಖೆಗಳಿಂದ, ಅಂದರೆ 2006ಮತ್ತು 2008ರಲ್ಲಿ ನಡೆದ ಮಾಲೆಗಾಂವ್ ಬಾಂಬ್ ಸ್ಫೋಟಗಳ ತನಿಖೆಯಿಂದ, ಅವರನ್ನು ಹೊರಹಾಕಲಾಗಿತ್ತು.

2016ರಲ್ಲಿ ತನ್ನ ವೌನಮುರಿದ ಸಾಲ್ಯಾನ್ ಒಂದು ಆಸ್ಫೋಟಕಾರಿ ವಿಷಯವನ್ನು ಬಹಿರಂಗಪ ಡಿಸಿದರು. ಆಪಾದಿತರ ಬಗ್ಗೆ ತುಸು ಮೃದು ಧೋರಣಿ ತಾಳುವಂತೆ ಎನ್‌ಐಎ ನಿರಾಕರಿಸಿದಾಗ ವಿವರಣೆ ನೀಡದೆ ಅವರನ್ನು ಹೊರ ಕಳುಹಿಸಲಾಯಿತು.

 ರಾತ್ರಿ ಬೆಳಗಾಗುವುದರೊಳಗಾಗಿ ಇರ್ನ್ನೋವ ಪ್ರಾಸಿಕ್ಯೂಟರನ್ನು ನೇಮಿಸಿಕೊಳ್ಳಲಾಯಿತು. ಮತ್ತು ಇದರಿಂದಾಗಿ ಆತಂಕಕಾರಿ ಪರಿಣಮಗಳಾದವು. ಮಹಾರಾಷ್ಟ್ರ ರಾಜ್ಯದ ಆ್ಯಂಟಿ-ಟೆರರಿಸಮ್ ಸ್ಕ್ವಾಡ್ (ಎಟಿಎಸ್) ಹನ್ನೆರಡು ಮಂದಿ ಆಪಾದಿತರ ವಿರುದ್ಧ ಹೂಡಿದ್ದ ಗಟ್ಟಿಯಾದ್ದ ಮೊಕದ್ದ ಮೆಯು, ಎನ್‌ಐಎ ನ್ಯಾಯಾಲಯದ ನಿರ್ಧಾರದಿಂದಾಗಿ ದುರ್ಬಲಗೊಂಡಿತು. ಎನ್‌ಐಎ ನ್ಯಾಯಾಲಯವು ಸಂಘಟಿತ ಅಪರಾಧಗಳ ವಿರುದ್ಧ ಮಹಾರಾಷ್ಟ್ರ ನಿಯಂತ್ರಣ ಕಾಯ್ದೆ (ಎಂಸಿಒಸಿಎ)ಯನ್ನು ಕೈಬಿಡಲು ನಿರ್ಧರಿಸಿತು. ಪ್ರತಿಯೊಬ್ಬ ಆಪಾದಿತನಿಗೂ ಇದರಿಂದಾಗಿ ಕ್ಲೀನ್ ಚಿಟ್ ದೊರೆತಂತಾಯಿತು. ಎಂಸಿಒಸಿಎ ಅನ್ವಯಿಸಲು ಕನಿಷ್ಠ ಒಬ್ಬ ಆಪಾದಿತನ ವಿರುದ್ಧ ಈ ಹಿಂದೆ ಎರಡು ಚಾರ್ಜ್ ಶೀಟ್‌ಗಳು ದಾಖಲಾಗಿರಲೇಬೇಕು. ಈ ಪ್ರಕರಣದಲ್ಲಿ ಆಪಾದಿತರಲ್ಲೊಬ್ಬನಾದ ರಾಕೇಶ್ ಧಾವಡೆ ವಿರುದ್ಧ ಎರಡು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿತ್ತು. 2003ರಲ್ಲಿ ಮಹಾರಾಷ್ಟ್ರದ ಜಲ್ನಾ ಮತ್ತು ಪರ್ಭನಿ ಜಿಲ್ಲೆಯಲ್ಲಿ ಧಾವಡೆ ವಿರುದ್ಧ ಎರಡು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಆದರೆ ಎನ್‌ಐಎಯ ವಿಶೇಷ ನ್ಯಾಯಾಧೀಶ ಎಸ್‌ಡಿ ಟೀಕಲೆ ಈ ಕೆಳಗಿನಂತೆ ತೀರ್ಪು ನೀಡಿದರು. ‘‘2002-03ರಲ್ಲಿ, ಜಲ್ನಾ ಮತ್ತು ಪರ್ಭನಿಯಲ್ಲಿ ಆ ಘಟನೆಗಳು ನಡೆದಾಗ, ಅಭಿನವ್ ಭಾರತ್ ಅಸ್ತಿತ್ವದಲ್ಲಿತ್ತು ಎಂದು ಸಾಬೀತುಪಡಿಸಲು ಯಾವ ಪುರಾವೆಗಳೂ ಇಲ್ಲ. ಮಾಲೆಗಾಂವ್ ಸ್ಫೋಟದ ಎಲ್ಲ ಆಪಾದಿತರೂ ಈ ಸಂಘಟನೆಗೆ ಸೇರಿದವರು ಎನ್ನಲಾಗಿದೆ. ಅಲ್ಲದೆ ಆ ಅವಧಿಯಲ್ಲಿ ಆ ಮೊಕದ್ದಮೆಗಳಲ್ಲಿ ಆಪಾದಿತರಾದ ಧಾವಡೆ ಅಥವಾ ಇನ್ಯಾವುದೇ ಆಪಾದಿತನಿಗೂ ಮಾಲೆಗಾಂವ್ ಸ್ಫೋಟದ ಆಪಾದಿತರೆನ್ನಲಾದ ವ್ಯಕ್ತಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಾಬೀತುಪಡಿಸಲು ಕೂಡಾ ಯಾವುದೇ ದಾಖಲೆಗಳಿಲ್ಲ’’.

ಈಗ, ಇತ್ತೀಚಿನ ತೀರ್ಪಿನ ಬಳಿಕ ಸಾಲ್ಯಾನ್ ಈ ಎಲ್ಲ ಪ್ರಕರಣ ಗಳಲ್ಲಿ ಒಂದು ಮಾದರಿ ಇರುವುದನ್ನು ಕಂಡುಕೊಂಡಿದ್ದಾರೆ.(ಓರ್ವ ವಕೀಲೆಯಾಗಿ 36 ವರ್ಷಗಳ ದೀರ್ಘ ಅನುಭವ ಮತ್ತು ಈ 36 ವರ್ಷಗಳಲ್ಲಿ 25 ವರ್ಷ ಒಬ್ಬರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದವರು ಸಾಲ್ಯಾನ್) ಅವರು ಹೇಳುವಂತೆ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಹಿಂದೂ ತೀರ್ವಗಾಮಿಗಳು ಒಳಗೊಂಡಿದ್ದ ಎಲ್ಲ ಪ್ರಕರಣಗಳ ವಿಚಾರಣೆಗಳಲ್ಲಿ ಹಸ್ತಕ್ಷೇಪ ನಡೆದಿದೆ. 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣಗಳು ಮತ್ತು ಮಕ್ಕಾ ಮಸೀದಿಬಾಂಬ್ ಸ್ಫೋಟ ಪ್ರಕರಣ ಇಂತಹ ಎರಡು ಪ್ರಕರಣ. ತಾನು ವಿಚಾರಣೆ ನಡೆಸುತ್ತಿದ್ದ ಪ್ರಕರಣವಷ್ಟೇ ಅಲ್ಲ, ಇತರ ಅನೇಕ ಪ್ರಕರಣಗಳಲ್ಲೂ ಅಧಿಕಾರಿಗಳು ಹೇಗೆ ಪ್ರಾಸಿಕ್ಯೂಶನ್‌ನ ಪುರಾವೆಗಳನ್ನು ದುರ್ಬಲಗೊಳಿಸುತ್ತ ಬಂದಿದ್ದಾರೆ ಎಂಬುದನ್ನು ಸಾಲ್ಯಾನ್ ವಿಶ್ಲೇಷಿಸಿದ್ದಾರೆ.

2018ರ ಎಪ್ರಿಲ್ 16ರಂದು ಹೈದರಾಬಾದ್‌ನಲ್ಲಿ ವಿಶೇಷ ಎನ್‌ಇಎ ನ್ಯಾಯಾಲಯ ಎಲ್ಲ 5 ಮಂದಿ ಆಪಾದಿತರನ್ನು ನಿರ್ದೋಷಿಗಳೆಂದು ಬಿಡುಗಡೆಗೊಳಿಸಿತು. ಆಗ ಅದು, ವಿಚಾರಣಾ ಏಜೆನ್ಸಿ ಆಪಾದಿತರ ವಿರುದ್ಧ ಸೂಕ್ತ ಪುರಾವೆಗಳನ್ನೊ ದಗಿಸಲು ವಿಫಲವಾಗಿದೆ ಎಂದು ಹೇಳಿತು. ಮೊಕದ್ದಮೆಯಲ್ಲಿ ಸವಾಲಿಗೊಳಪಡಿಸಲಾದ 226 ಸಾಕ್ಷಿಗಳಲ್ಲಿ 65 ಸಾಕ್ಷಿಗಳು ತಿರುಗಿ ಬಿದ್ದಿದ್ದರು.

 ಆದರೆ, ಸಾಲ್ಯಾನ್ ಹೇಳುವಂತೆ, ನಿಜವಾಗಿಯೂ ವಿಚಿತ್ರ ಏನೆಂದರೆ, ಮಾಲೆಗಾಂವ್ ಸ್ಫೋಟದಲ್ಲಿ ಮುಖ್ಯ ಆಪಾದಿತ ರಾದವರನ್ನು ಮಕ್ಕಾ ಮಸೀದಿ ಪ್ರಕರಣದಲ್ಲಿ ತನ್ನ ವಾದವನ್ನು ಸಾಬೀತುಪಡಿಸಲು ಸಾಕ್ಷಿಗಳಾಗಿ ಬಳಸಿಕೊಂಡಿರುವುದು. ವಿಶೇಷವಾಗಿ, ಎರಡೂ ಸ್ಫೋಟಗಳಲ್ಲಿ ಆಪಾದಿತರಾದವರ ನಡುವೆ ಒಂದು ಸಾಮಾನ್ಯ ಕೊಂಡಿ ಕಂಡುಬಂದಿರುವಾಗ ಇದು ಇನ್ನಷ್ಟು ವಿಚಿತ್ರ ಅನಿಸುವುದಿಲ್ಲವೇ? ಅವರೆಲ್ಲರೂ ಹಿಂದೂ ಮಿಲಿಟೆಂಟ್ ಸಂಘಟನೆಯಾಗಿರುವ ಅಭಿನವ್ ಭಾರತ್‌ನ ಒಂದು ಭಾಗವಾಗಿದ್ದರು ಎಂದು ಆಪಾದಿಸಲಾಗಿದೆ.

ಹೆಚ್ಚು ಕಡಿಮೆ ಏಕರೂಪದ ಭಯೋತ್ಪಾದನಾ ಪ್ರಕರಣದಲ್ಲಿ ಆಪಾದಿತರಾದ ಒಂದಷ್ಟು ಮಂದಿಯನ್ನು ಇನ್ನೊಂದು ಭಯೋತ್ಪಾದಕ ಪ್ರಕರಣದಲ್ಲಿ ಸಾಕ್ಷಿಗಳಾಗಲು ನೀಡಬಹು ದೆಂದು ಪ್ರಾಸಿಕ್ಯೂಶನ್ ತಿಳಿದಿದ್ದು ತೀರಾ ವಿಚಿತ್ರ ಅನಿಸುವುದಿಲ್ಲವೇ? ಇದರ ಪರಿಣಾಮ ಊಹಿಸಬಹುದಾದ್ದೆ. ಅವರು ತಿರುಗಿಬಿದ್ದ ಸಾಕ್ಷಿಗಳಾಗಲೇಬೇಕಾಗುತ್ತದೆ. ಈ ತರಹ ಸಾಕ್ಷಿಗಳನ್ನು ಬಳಸಿಕೊಳ್ಳುವುದರ ಹಿಂದೆ ಯಾವ ರೀತಿಯ ತರ್ಕವಿತ್ತು ಎನ್ನುವುದನ್ನು ಎನ್‌ಐಎ ವಿವರಿಸಬೇಕಾಗಿದೆ.

2008ರ ಮಾಲೇಗಾಂವ್ ಪ್ರಕರಣದಲ್ಲಿ ಕೂಡ ಆಪಾದಿತರ ವಿಚಾರಣೆಗಳನ್ನು ‘‘ಸಡಿಲಗೊಳಿಸಲು’’ಕ್ರಮ ತೆಗೆದು ಕೊಳ್ಳ ಲಾಗಿದೆ ಎನ್ನುತ್ತಾರೆ ಸಾಲ್ಯಾನ್. ಎಟಿಎಸ್, ಆಪಾದಿ ತರ ವಿರುದ್ಧ ಪ್ರಬಲ ಪುರಾವೆಯನ್ನು ಸಂಗ್ರಹಿಸಿತ್ತು. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ವಿಚಾರಣೆಗಳ ಮುಖ್ಯಸ್ಥ ರಾಗಿದ್ದಾಗ ವಿಚಾರಣೆಯ ಆರಂಭದಲ್ಲೇ ಸಾಲ್ಯಾನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. 2008ರ ನವೆಂಬರ್ 27ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಕರ್ಕರೆ ಮೃತಪಟ್ಟರು. ಬಳಿಕ ವಿಚಾರಣೆಗಳಲ್ಲಿ ಹಲವು ಬದಲಾ ವಣೆಗಳಾದವು. ಎಟಿಎಸ್ ಬಳಿಕ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತು. ಮತ್ತು ಅಂತಿಮವಾಗಿ 2011ರಲ್ಲಿ ಅದು ಎನ್‌ಐಎಯ ಕೈಗೆ ಹೋಯಿತು.

ಕೃಪೆ: ದಿ ವೈರ್

Writer - ಸುಕನ್ಯಾ ಶಾಂತಾ

contributor

Editor - ಸುಕನ್ಯಾ ಶಾಂತಾ

contributor

Similar News

ಸಂವಿಧಾನ -75