11 ಮಕ್ಕಳು ಸೇರಿ 21 ಮಂದಿ ರೆಫ್ರಿಜರೇಟೆಡ್ ಲಾರಿಯಲ್ಲಿ ಪತ್ತೆ
Update: 2018-11-07 15:46 GMT
ನ್ಯೂಹವೆನ್, ನ.7: 11 ಮಕ್ಕಳು ಸೇರಿದಂತೆ 21 ಮಂದಿ ರೆಫ್ರಿಜರೇಟೆಡ್ ಲಾರಿಯೊಂದರಲ್ಲಿ ಪತ್ತೆಯಾಗಿರುವ ಘಟನೆ ಬ್ರಿಟನ್ ನ ನ್ಯೂಹವೆನ್ ನಲ್ಲಿ ನಡೆದಿದ್ದು, ಈ ಲಾರಿ ಬ್ರಿಟನ್ ಗೆ ಪ್ರವೇಶಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ.
ಈ ಗುಂಪು ವಿಯೆಟ್ನಾಂನಿಂದ ಬಂದಿದೆ ಎಂದು ಶಂಕಿಸಲಾಗಿದ್ದು, ನೀರಿನ ಲೋಡ್ ನಡುವೆ ಈ 21 ಮಂದಿ ಪತ್ತೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭವಾಗಿದೆ. 15 ಮಕ್ಕಳು ಲಾರಿಯೊಳಗೆ ಪತ್ತೆಯಾಗಿದ್ದಾರೆ ಎಂದು ಮೊದಲು ವರದಿಯಾಗಿತ್ತು.
12ರಿಂದ 17 ವರ್ಷದೊಳಗಿನ 17 ಜನರಿದ್ದು ಅವರು ತಮ್ಮ ‘ವಿಯೆಟ್ನಾಂ’ನವರು ಎಂದು ಪರಿಚಯಿಸಿದ್ದಾರೆ. 11 ಮಂದಿ ಅಪ್ರಾಪ್ತರಾಗಿದ್ದು, ಅವರನ್ನು ಸಾಮಾಜಿಕ ಸೇವೆಯ ಸಂಸ್ಥೆಯೊಂದಕ್ಕೆ ಹಸ್ತಾಂತರಿಸಲಾಗಿದೆ.