ಲಂಡನ್: ಸ್ವಾಮಿ ನಾರಾಯಣ ಮಂದಿರದಿಂದ ಕೃಷ್ಣ ವಿಗ್ರಹಗಳ ಕಳವು
Update: 2018-11-12 17:02 GMT
ಲಂಡನ್, ನ. 12: ಉತ್ತರ ಲಂಡನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದಿಂದ ಕಳ್ಳರು 1970ರ ದಶಕದ ಮೂರು ಅಮೂಲ್ಯ ಕೃಷ್ಣ ವಿಗ್ರಹಗಳನ್ನು ಕಳವುಗೈದಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಬ್ರೆಂಟ್‌ನ ವಿಲ್ಸ್‌ಡೆನ್ ಲೇನ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಶುಕ್ರವಾರ ಮುಂಜಾನೆ ಸ್ಕಾಟ್‌ಲ್ಯಾಂಡ್ ಯಾರ್ಡ್ ಅಧಿಕಾರಿಗಳನ್ನು ಕರೆಸಲಾಯಿತು.
ಕಳವಾದ ಹರಿಕೃಷ್ಣ ಮೂರ್ತಿಗಳು 1975ರಲ್ಲಿ ದೇವಸ್ಥಾನ ಆರಂಭಗೊಂಡಂದಿನಿಂದಲೂ ದೇವಸ್ಥಾನದ ಭಾಗವಾಗಿದ್ದವು ಎಂದು ದೇವಸ್ಥಾನದ ಅಧ್ಯಕ್ಷ ಕುರ್ಜಿಭಾಯ್ ಕೆರೈ ಹೇಳಿದರು.
‘‘ಆ ಮೂರ್ತಿಗಳು ನಮ್ಮ ಧಾರ್ಮಿಕ ಸಮುದಾಯಕ್ಕೆ ಅಗಾಧ ಧಾರ್ಮಿಕ ಮಹತ್ವದ್ದಾಗಿತ್ತು.
ಶುಕ್ರವಾರ ದೇವಸ್ಥಾನದಲ್ಲಿ ದೀಪಾವಳಿ ಆಚರಣೆ ಮುಗಿದ ಗಂಟೆಗಳ ಬಳಿಕ ಕಳವು ನಡೆದಿದೆ.