ಫೇಸ್‌ಬುಕ್ ಮುಖ್ಯಸ್ಥ ಝುಕರ್‌ಬರ್ಗ್ ರಾಜೀನಾಮೆಗೆ ಹೆಚ್ಚಿದ ಒತ್ತಡ
Update: 2018-11-17 15:21 GMT
ಸಾನ್ ಫ್ರಾನ್ಸಿಸ್ಕೊ, ನ. 17: ಫೇಸ್‌ಬುಕ್ ಅಧ್ಯಕ್ಷ ಮತ್ತು ಸಿಇಒ ಮಾರ್ಕ್ ಝುಕರ್‌ಬರ್ಗ್ ರಾಜೀನಾಮೆ ನೀಡಬೇಕೆಂದು ಅದರ ಹೂಡಿಕೆದಾರರು ಒತ್ತಾಯಿಸಿದ್ದಾರೆ.
ತನ್ನ ಪ್ರತಿಸ್ಪರ್ಧಿಗಳ ಮೇಲೆ ಕೆಸರೆರಚಲು ಫೇಸ್‌ಬುಕ್ ರಿಪಬ್ಲಿಕನ್ ಪಕ್ಷಕ್ಕೆ ಸೇರಿದ ವ್ಯಕ್ತಿಯ ಒಡೆತನದ ರಾಜಕೀಯ ಸಲಹಾ ಮತ್ತು ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದನ್ನು ನೇಮಿಸಿದೆ ಎಂಬುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
‘‘ಫೇಸ್‌ಬುಕ್ ಏಕವ್ಯಕ್ತಿ ಸಂಸ್ಥೆಯಲ್ಲ. ಅದೊಂದು ಕಂಪೆನಿ. ಕಂಪೆನಿಗಳಲ್ಲಿ ಅಧ್ಯಕ್ಷರು ಮತ್ತು ಸಿಇಒ ಬೇರೆ ಬೇರೆಯವರಾಗಿರಬೇಕು’’ ಎಂದು ಫೇಸ್‌ಬುಕ್‌ನಲ್ಲಿ ಬಂಡವಾಳ ಹೂಡಿರುವ ಜೊನಾಸ್ ಕ್ರಾನ್ ಎಂಬವರು ಹೇಳಿದ್ದಾರೆ.