ದ. ಆಫ್ರಿಕ ಪ್ರಾಸಿಕ್ಯೂಶನ್ ಮುಖ್ಯಸ್ಥೆಯಾಗಿ ಭಾರತ ಮೂಲದ ಮಹಿಳೆ
Update: 2018-12-05 15:00 GMT
ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಡಿ. 5: ಭಾರತ ಮೂಲದ ವಕೀಲೆ ಶಾಮಿಲಾ ಬಟೋಹಿಯನ್ನು ದಕ್ಷಿಣ ಆಫ್ರಿಕದ ಪ್ರಾಸಿಕ್ಯೂಶನ್ ಮುಖ್ಯಸ್ಥೆಯಾಗಿ ನೇಮಿಸಲಾಗಿದೆ. ಅವರು ಪ್ರಾಸಿಕ್ಯೂಶನ್‌ನ ಮೊದಲ ಮಹಿಳಾ ಮುಖ್ಯಸ್ಥೆಯಾಗಿದ್ದಾರೆ.
ಪಬ್ಲಿಕ್ ಪ್ರಾಸಿಕ್ಯೂಶನ್‌ನ ರಾಷ್ಟ್ರೀಯ ನಿರ್ದೇಶಕಿಯಾಗಿ 2019 ಫೆಬ್ರವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕದ ಅಧ್ಯಕ್ಷ ಸಿರಿಲ್ ರಾಮಫೋಸ ಸರಕಾರದ ಪ್ರಧಾನ ಕಚೇರಿ ‘ಯೂನಿಯನ್ ಬಿಲ್ಡಿಂಗ್ಸ್’ನಲ್ಲಿ ಮಂಗಳವಾರ ಈ ಘೋಷಣೆಯನ್ನು ಮಾಡಿದರು.
ಮಾಜಿ ಅಧ್ಯಕ್ಷ ಜಾಕೋಬ್ ಝುಮ ವಿರುದ್ಧದ ಭ್ರಷ್ಟಾಚಾರ ತನಿಖೆಯನ್ನು ನಿಭಾಯಿಸುತ್ತಿರುವ ವಿಚಾರದಲ್ಲಿ ಪಬ್ಲಿಕ್ ಪ್ರಾಸಿಕ್ಯೂಶನ್ ಭಾರೀ ಟೀಕೆಗೆ ಒಳಗಾಗಿರುವುದನ್ನು ಸ್ಮರಿಸಬಹುದಾಗಿದೆ.