ಜಪಾನ್ನ ರೆಸ್ಟೋರೆಂಟ್‌ನಲ್ಲಿ ಸ್ಫೋಟ; 41 ಮಂದಿಗೆ ಗಾಯ
Update: 2018-12-17 15:55 GMT
ಟೋಕಿಯೊ, ಡಿ. 17: ಉತ್ತರ ಜಪಾನ್‌ನ ರೆಸ್ಟೋರೆಂಟೊಂದರಲ್ಲಿ ರವಿವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ 41 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಪಾನ್‌ನ ಉತ್ತರದ ಪ್ರಮುಖ ದ್ವೀಪ ಹೊಕ್ಕಾಯಿಡೊದ ರಾಜಧಾನಿ ಸಪ್ಪೋರೊದ ಟೊಯೊಹಿರ ಜಿಲ್ಲೆಯಲ್ಲಿರುವ ಎರಡು ಮಹಡಿಯ ರೆಸ್ಟೋರೆಂಟ್‌ನಲ್ಲಿ ಸ್ಫೋಟ ಸಂಭವಿಸಿದೆ.
ಗಾಯಗೊಂಡವರ ಪೈಕಿ ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.
ಸ್ಫೋಟದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ.