ವಾರಂಟ್ ನೀಡಲು ಹೋದ ಪೊಲೀಸ್ ಅಧಿಕಾರಿಗಳಿಗೆ ಗುಂಡಿಕ್ಕಿದರು!
Update: 2019-01-29 16:43 GMT
ಹ್ಯೂಸ್ಟನ್, ಜ. 29: ಮಾದಕ ದ್ರವ್ಯ ಪ್ರಕರಣವೊಂದರ ತನಿಖೆಗೆ ಸಂಬಂಧಿಸಿ ವಾರಂಟ್ ನೀಡಲು ಹೋದ ಅಮೆರಿಕದ ಹ್ಯೂಸ್ಟನ್ ನಗರದ ನಾಲ್ವರು ಪೊಲೀಸ್ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಪೊಲೀಸರು ಪ್ರತಿಯಾಗಿ ಹಾರಿಸಿದ ಗುಂಡಿಗೆ ಇಬ್ಬರು ಶಂಕಿತರು ಬಲಿಯಾಗಿದ್ದಾರೆ ಎಂದು ನಗರ ಪೊಲೀಸ್ ಮುಖ್ಯಸ್ಥರು ತಿಳಿಸಿದರು.
ಇಬ್ಬರು ಪೊಲೀಸರ ಕುತ್ತಿಗೆಗೆ ಗುಂಡು ಹಾರಿಸಲಾಗಿದೆ ಹಾಗೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹ್ಯೂಸ್ಟನ್ ಪೊಲೀಸ್ ಮುಖ್ಯಸ್ಥ ಆರ್ಟ್ ಅಸೆವೊಡೊ ಸುದ್ದಿಗಾರರಿಗೆ ತಿಳಿಸಿದರು. ಇತರ ಇಬ್ಬರು ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ ಎಂದರು.
ಅದೇ ವೇಳೆ ಪೊಲೀಸರು ಪ್ರತಿಯಾಗಿ ಹಾರಿಸಿದ ಗುಂಡಿನಲ್ಲಿ ಇಬ್ಬರು ದುಷ್ಕರ್ಮಿಗಳು ಮೃತಪಟ್ಟಿದ್ದಾರೆ.