ಬಳಕೆದಾರರ ಖಾಸಗಿ ದತ್ತಾಂಶ ಖರೀದಿಸುವ ಯೋಜನೆಗೆ ಫೇಸ್‌ ಬುಕ್ ಕೊಕ್

Update: 2019-01-30 17:20 GMT

ಲಾಸ್ ಏಂಜಲಿಸ್, ಜ. 30: ತಮ್ಮ ವೈಯಕ್ತಿಕ ದತ್ತಾಂಶವನ್ನು ಪೂರೈಸುವ ಐಫೋನ್ ಬಳಕೆದಾರರಿಗೆ ಹಣ ಪಾವತಿಸುವ ಯೋಜನೆಯೊಂದನ್ನು ಫೇಸ್‌ಬುಕ್ ಕೈಬಿಡಲಿದೆ. ಈ ಯೋಜನೆಯ ಕೆಲವು ವಿವಾದಾತ್ಮಕ ಅಂಶಗಳನ್ನು ವರದಿಯೊಂದು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್ ಈ ಕ್ರಮ ತೆಗೆದುಕೊಂಡಿದೆ.

ಫೇಸ್‌ಬುಕ್ ರಿಸರ್ಚ್ ಆ್ಯಪನ್ನು ಅಳವಡಿಸಲು ಹಾಗೂ ಫೋನ್ ಮತ್ತು ಇಂಟರ್‌ನೆಟ್ ಬಳಕೆ ಹವ್ಯಾಸದ ಮೇಲೆ ನಿಗಾ ಇಡಲು ಅವಕಾಶ ಮಾಡಿಕೊಡಲು 13ರಿಂದ 35 ವರ್ಷದವರೆಗಿನ ಬಳಕೆದಾರರಿಗೆ ಫೇಸ್‌ಬುಕ್ ತಿಂಗಳಿಗೆ 20 ಡಾಲರ್ (ಸುಮಾರು 1420 ರೂಪಾಯಿ) ನೀಡುತ್ತಿತ್ತು ಎಂದು ‘ಟೆಕ್‌ಕ್ರಂಚ್’ನ ವರದಿಯೊಂದು ತಿಳಿಸಿದೆ.

ಆ್ಯಪಲ್‌ನ ಐಒಎಸ್‌ನಿಂದ ಈ ಆ್ಯಪನ್ನು ತೆಗೆದುಹಾಕಲಾಗುವುದಾದರೂ, ಆ್ಯಂಡ್ರಾಯಿಡ್ ಸಾಧನಗಳಲ್ಲಿ ಅದು ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News