ಕಳೆದ 5 ವರ್ಷಗಳ ಭೂತಾಪಮಾನ ನೂರು ವರ್ಷಗಳಲ್ಲೇ ಅತ್ಯಧಿಕ!

Update: 2019-02-09 18:16 GMT

  ನ್ಯೂಯಾರ್ಕ್,ಫೆ.8: ಆಧುನಿಕ ಯುಗದಲ್ಲಿ ಈ ಜಗತ್ತು ಕಳೆದ ಐದು ವರ್ಷಗಳಲ್ಲಿ ಅತ್ಯಧಿಕ ತಾಪಮಾನವನ್ನು ಅನುಭವಿಸಿರುವುದಾಗಿ ಅಧ್ಯಯನ ವರದಿಯೊಂದು ತಿಳಿಸಿದೆ. 1880ರಿಂದ ಮೊದಲ್ಗೊಂಡು ಕಳೆದ ವರ್ಷದವರೆಗೆ ಸುಮಾರು 138 ವರ್ಷಗಳ ಭೌಗೋಳಿಕ ತಾಪಮಾನದ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ನಾಸಾದ ವಿಜ್ಞಾನಿಗಳ ತಂಡವೊಂದು ಅಧ್ಯಯನ ನಡೆಸಿ, ಈ ಅಂಶವನ್ನು ಕಂಡುಕೊಂಡಿದೆ.

ಆ ಪ್ರಕಾರ ಕಳೆದ 20ನೇ ಶತಮಾನದಲ್ಲಿನ ಭೂಮಿಯ ತಾಪಮಾನಕ್ಕಿಂತ ಕಳೆದ ವರ್ಷ ಸರಾಸರಿ 0.83 ಶೇಕಡ ಹೆಚ್ಚಳವಾಗಿರುವುದು ಅನುಭವಕ್ಕೆ ಬಂದಿದೆಯೆಂದು ಅದು ಹೇಳಿದೆ. ಆದರೆ ಅತ್ಯಧಿಕ ತಾಪಮಾನವು 2015-17ರ ಸಾಲಿನಲ್ಲಿ ದಾಖಲಾಗಿರುವುದಾಗಿ ವರದಿಯು ತಿಳಿಸಿದೆ.

1880ರ ಬಳಿಕ ಭೂಮಿಯ ತಾಪಮಾನದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಿದೆ. ಭೂಮಿಯ ಮೇಲ್ಮೈ ಹಾಗೂ ಅದರ ಮೇಲಿನ ಗಾಳಿಯ ತಾಪಮಾನದಲ್ಲಿ ಏರಿಕೆಗೆ ಕಾರಣವಾದಂತಹ ಮಾನವಚಟುವಟಿಕೆ (ಗ್ರೀನ್‌ಹೌಸ್ ಎಫೆಕ್ಟ್)ಗಳಿಂದಾಗಿ ಭೂತಾಪಮಾನದಲ್ಲಿ ಹೆಚ್ಚಳವಾಗಿದೆಯೆಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಕಳೆದ ಆರ್ಕ್‌ಟಿಕ್ ಪ್ರದೇಶದಲ್ಲಿ ತಾಪಮಾನದಲ್ಲಿ ಏರಿಕೆಯಾದ ಕಾರಣ, ಅಲ್ಲಿನ ಹಿಮದ ಪರ್ವತಗಳು ಕರಗತೊಡಗಿವೆಯೆಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News