ಸಿರಿಯದಲ್ಲಿ ಅಮೆರಿಕದ 200 ಸೈನಿಕರ ಮುಂದುವರಿಕೆ
Update: 2019-02-22 17:47 GMT
ವಾಶಿಂಗ್ಟನ್, ಫೆ. 22: ಸಿರಿಯದಿಂದ ಅಮೆರಿಕವು ತನ್ನ ಸೈನಿಕರನ್ನು ವಾಪಸ್ ಕರೆಸಿಕೊಂಡ ಬಳಿಕ, 200 ಸೈನಿಕರ ‘ಸಣ್ಣ ಶಾಂತಿ ಸ್ಥಾಪನಾ ಗುಂಪ’ನ್ನು ಸ್ವಲ್ಪ ಅವಧಿಗೆ ಆ ದೇಶದಲ್ಲೇ ಬಿಡುವುದು ಎಂದು ಶ್ವೇತಭವನ ಗುರುವಾರ ಹೇಳಿದೆ.
ಐಸಿಸ್ ಭಯೋತ್ಪಾದಕ ಸಂಘಟನೆಯನ್ನು ಸೋಲಿಸಿರುವ ಹಿನ್ನೆಲೆಯಲ್ಲಿ, ಸಿರಿಯದಲ್ಲಿರುವ 2,000 ಅಮೆರಿಕನ್ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡಿಸೆಂಬರ್‌ನಲ್ಲಿ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.
ಐಸಿಸ್ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಿರುವ ಕುರ್ದಿಶ್ ಪಡೆಗಳನ್ನು ಟರ್ಕಿ ಸೇನೆಯಿಂದ ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಿತ್ರಪಡೆಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ, 200 ಸೈನಿಕರನ್ನು ಸಿರಿಯದಲ್ಲೇ ಬಿಡಲು ಅಮೆರಿಕ ಈಗ ನಿರ್ಧರಿಸಿದೆ.