ಡಿಆರ್‌ಡಿಒ ಅಧ್ಯಕ್ಷರಿಗೆ ‘ಕ್ಷಿಪಣಿ ವ್ಯವಸ್ಥೆ ಪ್ರಶಸ್ತಿ’

Update: 2019-03-02 16:59 GMT

ವಾಶಿಂಗ್ಟನ್, ಮಾ. 2: ಕ್ಷಿಪಣಿ ವ್ಯವಸ್ಥೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧ್ಯಕ್ಷ ಜಿ. ಸತೀಶ್ ರೆಡ್ಡಿಗೆ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೊನಾಟಿಕ್ಸ್ ಆ್ಯಂಡ್ ಆ್ಯಸ್ಟ್ರೊನಾಟಿಕ್ಸ್ (ಎಐಎಎ) ಪ್ರತಿಷ್ಠಿತ ‘ಕ್ಷಿಪಣಿ ವ್ಯವಸ್ಥೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

‘ಕ್ಷಿಪಣಿ ವ್ಯವಸ್ಥೆ ಪ್ರಶಸ್ತಿ 2019’ನ್ನು ರೆಡ್ಡಿ ಅರಿರೆನದ ರೇತಿಯಾನ್ ಕ್ಷಿಪಣಿ ವ್ಯವಸ್ಥೆಯ ರೊಂಡೆಲ್ ಜೆ. ವಿಲ್ಸನ್ ಜೊತೆ ಹಂಚಿಕೊಳ್ಳಲಿದ್ದಾರೆ ಎಂದು ವರ್ಜೀನಿಯದ ಪ್ರೊಫೆಶನಲ್ ಸೊಸೈಟಿ ಆಫ್ ಏರೋಸ್ಪೇಸ್ ಇಂಜಿನಿಯರಿಂಗ್ ಹೇಳಿಕೆಯೊಂದರಲ್ಲಿ ಪ್ರಕಟಿಸಿದೆ.

55 ವರ್ಷದ ಖ್ಯಾತ ವಿಜ್ಞಾನಿಯನ್ನು ಕಳೆದ ವರ್ಷದ ಡಿಆರ್‌ಡಿಒ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಪ್ರಶಸ್ತಿಯನ್ನು ಎರಡು ವರ್ಷಗಳಿಗೊಮ್ಮೆ ಬೆಸ ಸಂಖ್ಯೆಯ ವರ್ಷಗಳಲ್ಲಿ ಕ್ಷಿಪಣಿ ವ್ಯವಸ್ಥೆ ತಂತ್ರಜ್ಞಾನ ಅಭಿವೃದ್ಧಿ ಅಥವಾ ಜಾರಿಯಲ್ಲಿ ಅಮೋಘ ಸಾಧನೆ ಮಾಡಿದವರಿಗೆ ಕೊಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News