ಅಬುಧಾಬಿ: ಗಿನ್ನೆಸ್ ದಾಖಲೆ ಬರೆದ ಭಾರತೀಯ ದತ್ತಿಸಂಸ್ಥೆಯ ಇಫ್ತಾರ್
Update: 2019-05-20 18:29 GMT
ದುಬೈ, ಮೇ 20: ಅತಿ ಉದ್ದದ ಇಫ್ತಾರ್ ಆಹಾರದ ಸಾಲಿಗಾಗಿ, ಯುಎಇಯಲ್ಲಿ ನೆಲೆಸಿರುವ ಭಾರತೀಯರೊಬ್ಬರು ನಡೆಸುತ್ತಿರುವ ದತ್ತಿ ಸಂಸ್ಥೆಯೊಂದು ಗಿನ್ನೆಸ್ ಜಾಗತಿಕ ದಾಖಲೆಗಳ ಪುಸ್ತಕಕ್ಕೆ ಸೇರ್ಪಡೆಯಾಗಿದೆ.
ಅಬುಧಾಬಿಯಲ್ಲಿ ಶನಿವಾರ ನಡೆದ ಇಫ್ತಾರ್ ವೇಳೆ, ‘ಪಿಸಿಟಿ ಹ್ಯುಮ್ಯಾನಿಟಿ’ ಪೂರೈಸಿದ ಏಳು ಆಹಾರ ಪದಾರ್ಥಗಳನ್ನು ಒಳಗೊಂಡ ಪೊಟ್ಟಣಗಳನ್ನು ಒಂದರ ನಂತರ ಒಂದರಂತೆ ಸಾಲಿನಲ್ಲಿ ಇಟ್ಟಾಗ, ಸಾಲು ಒಂದು ಕಿಲೋ ಮೀಟರ್ ಉದ್ದ ಬೆಳೆಯಿತು ಹಾಗೂ ಅದು ಗಿನ್ನೆಸ್ ಜಾಗತಿಕ ದಾಖಲೆಯಾಯಿತು.
ಪಿಸಿಟಿ ಹ್ಯುಮ್ಯಾನಿಟಿ ಸಸ್ಯಾಹಾರಿ ಇಫ್ತಾರ್ ನೀಡುತ್ತಿದೆ.
ದುಬೈ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ‘ಪೆಹಲ್ ಇಂಟರ್‌ನ್ಯಾಶನಲ್’ ಎಂಬ ತನ್ನ ಕಂಪೆನಿಯ ಆವರಣದಲ್ಲಿ ಪಿಸಿಟಿ ಹ್ಯುಮೇನಿಟಿಯ ಸ್ಥಾಪಕ ಜೋಗಿಂದರ್ ಸಿಂಗ್ ಸಲಾರಿಯ ಪ್ರತಿ ದಿನ ಸಸ್ಯಾಹಾರಿ ಇಫ್ತಾರ್ ಏರ್ಪಡಿಸುತ್ತಿದ್ದಾರೆ.