ಜೂನ್‌ನಲ್ಲಿ ಮಧ್ಯಂತರ ಚುನಾವಣೆ: ಗ್ರೀಸ್ ಪ್ರಧಾನಿ ಘೋಷಣೆ

Update: 2019-05-27 18:00 GMT

ಅಥೆನ್ಸ್ (ಗ್ರೀಸ್), ಮೇ 27: ಮುಂದಿನ ತಿಂಗಳು ದೇಶದಲ್ಲಿ ಮಧ್ಯಂತರ ಚುನಾವಣೆಯನ್ನು ನಡೆಸುವುದಾಗಿ ಗ್ರೀಸ್ ದೇಶದ ಪ್ರಧಾನಿ ಅಲೆಕ್ಸಿಸ್ ಟ್ಸಿಪ್ರಾಸ್ ರವಿವಾರ ಹೇಳಿದ್ದಾರೆ. ಐರೋಪ್ಯ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಅವರ ಎಡಪಂಥೀಯ ಸೈರಿಝ ಪಕ್ಷವು ಹಿನ್ನಡೆ ಅನುಭವಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಜೂನ್ 2ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯ ಎರಡನೇ ಸುತ್ತಿನ ಬಳಿಕ, ತುರ್ತಾಗಿ ರಾಷ್ಟ್ರೀಯ ಚುನಾವಣೆಯನ್ನು ನಡೆಸುವಂತೆ ಅಧ್ಯಕ್ಷರನ್ನು ನಾನು ಕೋರುತ್ತೇನೆ’’ ಎಂದು ಟೆಲಿವಿಶನ್‌ನಲ್ಲಿ ಜನರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

ಜೂನ್ 30ರಂದು ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

ಐರೋಪ್ಯ ಚುನಾವಣೆಯ ಮೂರನೇ ಒಂದರಷ್ಟು ಮತ ಎಣಿಕೆ ಆಗಿದ್ದು, ಆಡಳಿತಾರೂಢ ಸೈರಿಝ ಪಕ್ಷವು 24 ಶೇಕಡಕ್ಕಿಂತಲೂ ಕಡಿಮೆ ಮತಗಳನ್ನು ಪಡೆದಿದೆ. ಪ್ರಧಾನ ಪ್ರತಿಪಕ್ಷ ‘ನ್ಯೂ ಡೆಮಾಕ್ರಸಿ’ 33 ಶೇಕಡಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News