ನ್ಯಾಯಾಲಯದಲ್ಲಿ ಕುಸಿದುಬಿದ್ದು ಈಜಿಪ್ಟ್ ನ ಪದಚ್ಯುತ ಅಧ್ಯಕ್ಷ ಮುಹಮ್ಮದ್ ಮುರ್ಸಿ ನಿಧನ

Update: 2019-06-17 18:02 GMT

ಹೊಸದಿಲ್ಲಿ, ಜೂ.17: ಈಜಿಪ್ಟ್ ನ ಪದಚ್ಯುತ ಅಧ್ಯಕ್ಷ ಮುಹಮ್ಮದ್ ಮುರ್ಸಿ ನ್ಯಾಯಾಲಯದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

“ಅವರು ನ್ಯಾಯಾಧೀಶರ ಮುಂದೆ 20 ನಿಮಿಷಗಳ ಕಾಲ ಮಾತನಾಡಿದರು. ನಂತರ ಅವರು ಪ್ರಜ್ಞೆ ತಪ್ಪಿ ಕುಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟರು” ಎಂದು ಮಾಧ್ಯಮಗಳು ವರದಿ ಮಾಡಿವೆ.

ಹುಸ್ನಿ ಮುಬಾರಕ್ ರ 30 ವರ್ಷಗಳ ಆಳ್ವಿಕೆಯ ನಂತರ ಮುರ್ಸಿ 2012ರಲ್ಲಿ ಈಜಿಪ್ಟ್ ನ ಪ್ರಥಮ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಅಧ್ಯಕ್ಷರಾದರು. 2013ರಲ್ಲಿ ಭಾರೀ ಪ್ರತಿಭಟನೆಗಳು ಮತ್ತು ಸೇನಾ ದಂಗೆಯ ನಂತರ ಅವರನ್ನು ಪದಚ್ಯುತಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News