ಸೇತುವೆಯಲ್ಲಿ ಹಳಿ ತಪ್ಪಿದ ರೈಲು: ಕನಿಷ್ಠ 5 ಸಾವು
Update: 2019-06-24 16:37 GMT
ಢಾಕಾ, ಜೂ. 24: ಬಾಂಗ್ಲಾದೇಶದಲ್ಲಿ ಸೇತುವೆಯೊಂದನ್ನು ದಾಟುತ್ತಿದ್ದ ಪ್ರಯಾಣಿಕ ರೈಲೊಂದು ಸೋಮವಾರ ಹಳಿ ತಪ್ಪಿದ್ದು, ಕನಿಷ್ಠ ಐವರು ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಎರಡು ಬೋಗಿಗಳು ಕಾಲುವೆಗೆ ಬಿದ್ದಿದ್ದು, ಸಂಪೂರ್ಣವಾಗಿ ಜಲಾವೃತವಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ರೈಲು ಪೂರ್ವದ ನಗರ ಸಿಲ್ಹೆಟ್‌ನಿಂದ ರಾಜಧಾನಿ ಢಾಕಾಗೆ ತೆರಳುತ್ತಿತ್ತು.
ಢಾಕಾದಿಂದ ಪೂರ್ವಕ್ಕೆ 210 ಕಿ.ಮೀ. ದೂರದಲ್ಲಿರುವ ವೌಲವಿ ಬಝಾರ್ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ.