ವಾಯು ಮಾಲಿನ್ಯ: ಯುರೋಪ್‌ನಲ್ಲಿ 2016ರಲ್ಲಿ 4 ಲಕ್ಷ ಮಂದಿಯ ಅಕಾಲಿಕ ಸಾವು

Update: 2019-10-16 16:51 GMT

ಬ್ರಸೆಲ್ಸ್ (ಬೆಲ್ಜಿಯಂ), ಅ. 16: ಕಳಪೆ ಗುಣಮಟ್ಟದ ವಾಯುವಿನಿಂದಾಗಿ ಯುರೋಪ್‌ನಲ್ಲಿ 2016ರಲ್ಲಿ 4 ಲಕ್ಷ ಜನರು ಅಕಾಲಿಕ ಸಾವಿಗೀಡಾಗಿದ್ದಾರೆ ಹಾಗೂ ನಗರದಲ್ಲಿ ವಾಸಿಸುವ ಬಹುತೇಕ ಎಲ್ಲರೂ ಆರೋಗ್ಯಕರ ಮಟ್ಟವನ್ನು ಮೀರಿದ ವಾಯು ಮಾಲಿನ್ಯಕ್ಕೆ ಈಡಾಗಿದ್ದಾರೆ ಎಂದು ಬುಧವಾರ ವರದಿಯೊಂದು ತಿಳಿಸಿದೆ.

‘‘ವಾಯು ಮಾಲಿನ್ಯವು ಪ್ರಸ್ತುತ ಮಾನವ ಆರೋಗ್ಯಕ್ಕೆ ಎದುರಾಗಿರುವ ಅತ್ಯಂತ ಪ್ರಮುಖ ಪರಿಸರ ಅಪಯಾವಾಗಿದೆ’’ ಎಂದು ಯುರೋಪಿಯನ್ ಪರಿಸರ ಸಂಸ್ಥೆ (ಇಇಎ) ತನ್ನ ವರದಿಯಲ್ಲಿ ಹೇಳಿದೆ.

ಯುರೋಪ್‌ನ ನಗರಗಳ ಪರಿಸರದಲ್ಲಿರುವ ಅಪಾಯಕಾರಿ ಕಣಗಳ ಮಟ್ಟ ಇಳಿಯುತ್ತಿದೆಯಾದರೂ, ಅದು ಬೇಕಾದಷ್ಟು ವೇಗದಲ್ಲಿ ಇಳಿಯುತ್ತಿಲ್ಲ’’ ಎಂದು ವರದಿಯ ಲೇಖಕರಾಗಿರುವ ಇಇಎ ವಾಯು ಗುಣಮಟ್ಟ ಪರಿಣತ ಆಲ್ಬರ್ಟ್ ಗೊನ್ಸಾಲಿಸ್ ಓರ್ಟಿಝ್ ಹೇಳಿದ್ದಾರೆ.

‘‘ನಾವು ಇನ್ನೂ ಐರೋಪ್ಯ ಒಕ್ಕೂಟ ಮಾನದಂಡಗಳನ್ನು ತಲುಪಿಲ್ಲ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ತಲುಪುವುದು ಇನ್ನೂ ದೂರವಿದೆ’’ ಎಂದು ಓರ್ಟಿಝ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News