ಹಾಂಕಾಂಗ್ ಪ್ರಜಾಪ್ರಭುತ್ವ ಪರ ಕಾರ್ಯಕರ್ತನಿಗೆ ಇರಿತ

Update: 2019-10-20 17:13 GMT

ಹಾಂಕಾಂಗ್, ಅ.20: ಮೊದಲು ಪ್ರಜಾಪ್ರಭುತ್ವಪರವಾದ ಸಂದೇಶಗಳನ್ನೊಳಗೊಂಡ ಕರಪತ್ರಗಳನ್ನು ವಿತರಿಸುತ್ತಿದ್ದ ವ್ಯಕ್ತಿಯೊಬ್ಬನ ಆಗಂತುಕರು ಇರಿದು ಗಾಯಗೊಳಿಸಿದ್ದಾರೆ. 19 ವರ್ಷ ವಯಸ್ಸಿನ ಯುವಕನನ್ನು ಇರಿದುಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಚೀನಾದ ಅರೆಸ್ವಾಯತ್ತ ಪ್ರಾಂತವಾದ ಹಾಂಕಾಂಗ್‌ನಲ್ಲಿ ಭುಗಿಲೆದ್ದಿರುವ ಪ್ರಜಾತಾಂತ್ರಿಕ ಆಂದೋಲನವು ಹಿಂಸಾ ರೂಪವನ್ನು ಪಡೆದುಕೊಳ್ಳುತ್ತಿದ್ದು, ಬುಧವಾರದಂದು ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಆಂದೋಲನದ ನಾಯಕನಾದ ಜಿಮ್ಮಿ ಶಾಮ್ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಸುತ್ತಿಗೆಗಳು ಹಾಗೂ ಚೂರಿಗಳಿಂದ ದಾಳಿ ನಡೆಸಿತ್ತು.

ಶನಿವಾರದಂದು ಪ್ರಜಾಪ್ರಭುತ್ವ ಬೆಂಬಲಿಗರ ಗುಂಪೊಂದು ಅಮೆರಿಕ ಹಾಗೂ ಬ್ರಿಟಿಶ್ ಧ್ವಜಗಳನ್ನು ಹಿಡಿದು, ತಮ್ಮ ಹೋರಾಟಕ್ಕೆ ಬಾಹ್ಯ ದೇಶಗಳ ನೆರವನ್ನು ಕೋರಿ ಪ್ರಾರ್ಥನಾ ರ್ಯಾಲಿಯನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News