'ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿ'ಯಲ್ಲಿ ಮೊದಲ ಸ್ಥಾನ ಕಳೆದುಕೊಂಡ ಜೆಫ್ ಬೆಝೋಸ್

Update: 2019-10-25 10:29 GMT

ಸಿಯಾಟ್ಲ್, ಅ.25:  ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಅಮೆಝಾನ್ ಸ್ಥಾಪಕ ಹಾಗೂ ಸಿಇಒ ಜೆಫ್ ಬೆಝೋಸ್ ಕಳೆದುಕೊಂಡಿದ್ದಾರೆ. ಮೈಕ್ರೋಸಾಫ್ಟ್ ಸಹಸ್ಥಾಪಕ ಬಿಲ್ ಗೇಟ್ಸ್  ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

ಅಮೆಝಾನ್ ಸಂಸ್ಥೆಯ ತೃತೀಯ ತ್ರೈಮಾಸಿಕ ಫಲಿತಾಂಶ ನಿರುತ್ತೇಜಕವಾಗಿರುವುದರ ಜತೆಗೆ  ಬೆಝೋಸ್ ಷೇರು ಮೌಲ್ಯದಲ್ಲಿ 7 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಗುರುವಾರ ಅಮೆಝಾನ್ ಕಂಪೆನಿಯ ಷೇರುಗಳ ಮೌಲ್ಯ ಶೇ.7ರಷ್ಟು ಕುಸಿತ ಕಂಡಿದ್ದು ಬೆಝೋಸ್ ಅವರ ಸಂಪತ್ತಿನ ಒಟ್ಟು ಮೌಲ್ಯ 103.9 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ.

ಬಿಲ್ ಗೇಟ್ಸ್ ಅವರ ಒಟ್ಟು ಸಂಪತ್ತಿನ ಮೌಲ್ಯ 195.7 ಬಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷವಷ್ಟೇ ಬಿಲ್ ಗೇಟ್ಸ್ ಅವರು 28 ವರ್ಷಗಳ ಕಾಲ ತಮ್ಮದಾಗಿಸಿಕೊಂಡಿದ್ದ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ  ಬಿರುದನ್ನು  ಬೆಝೋಸ್  ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದರು. ಆಗ ಅವರ ಒಟ್ಟು ಸಂಪತ್ತಿನ ಮೌಲ್ಯ 160 ಬಿಲಿಯನ್ ಡಾಲರ್ ಆಗಿತ್ತು.

ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೆಝಾನ್ ಸಂಸ್ಥೆಯ ಒಟ್ಟು ಆದಾಯ ಶೇ 26ರಷ್ಟು ಕುಸಿತ ಕಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News