ರಾಹುಲ್ ಭಾಷಣವನ್ನು ಭಾಷಾಂತರಿಸಿ, ನಿರರ್ಗಳವಾಗಿ ಮಾತನಾಡಿದ 16 ವರ್ಷದ ಬಾಲಕಿ

Update: 2019-12-05 15:24 GMT

ಕೊಚ್ಚಿ: ತನ್ನ ಇಂಗ್ಲಿಷ್ ಭಾಷಣವನ್ನು ಮಲಯಾಳಂ ಭಾಷಾಂತರಿಸಿ ನಿರರ್ಗಳವಾಗಿ ಮಾತನಾಡಿದ 11ನೆ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶಂಸಿಸಿದ್ದಾರೆ. ಈ ಭಾಷಣದ ವಿಡಿಯೋ ವೈರಲ್ ಆಗಿದ್ದು, ಬಾಲಕಿಯ ಪ್ರತಿಭೆಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸಭಿಕರಲ್ಲಿ ಯಾರಾದರೂ ತನ್ನ ಭಾಷಣವನ್ನು ಭಾಷಾಂತರಿಸಬಹುದೇ ಎಂದು ರಾಹುಲ್ ಪ್ರಶ್ನಿಸಿದಾಗ ವಡೂರ್ ನ ಕರುವರ್ಕುಂಡು ಸರಕಾರಿ ಶಾಲೆಯ ವಿದ್ಯಾರ್ಥಿನಿ, 16 ವರ್ಷದ ಫಾತಿಮಾ ಸಫಾ ಮುಂದೆ ಬಂದರು.

ಇದಕ್ಕೂ ಮೊದಲು ರಾಹುಲ್ ಕೇರಳಕ್ಕೆ ಬಂದಾಗ ಅವರ ಭಾಷಣವನ್ನು ಭಾಷಾಂತರಿಸಲು ಹಲವರು ತಡವರಿಸಿದ್ದರು. ಇಂತಹ ಘಟನೆಗಳಿಂದ ರಾಜಕೀಯ ನಾಯಕರು ಈ ಹಿಂದೆ ಹಲವು ಬಾರಿ  ಮುಜುಗರಕ್ಕೊಳಗಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಇಂತಹ ಮುಜುಗರಕ್ಕೊಳಗಾಗಿದ್ದರು.

ಆದರೆ ಈ ಬಾರಿ ಫಾತಿಮಾ ನಿರರ್ಗಳವಾಗಿ ಮಾತನಾಡಿದರು. ಫಾತಿಮಾ ಸಫಾ ಭಾಷಣ ನಿಲ್ಲಿಸುತ್ತಿದ್ದಂತೆ ಸಹಪಾಠಿಗಳು ಚಪ್ಪಾಳೆ ತಟ್ಟಿ ಆಕೆಯನ್ನು ಅಭಿನಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News