ಸಂಸ್ಕೃತದಲ್ಲಿ ಮಾತನಾಡುವುದರಿಂದ ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತವೆ: ಬಿಜೆಪಿ ಸಂಸದ

Update: 2019-12-12 18:23 GMT
Twitter/@GaneshSingh_in

ಹೊಸದಿಲ್ಲಿ,ಡಿ.12: ನಿಯಮಿತವಾಗಿ ಸಂಸ್ಕೃತದಲ್ಲಿ ಮಾತನಾಡುವುದು ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಮಧುಮೇಹ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತವೆ ಎಂದು ಬಿಜೆಪಿ ಸಂಸದ ಗಣೇಶ ಸಿಂಗ್ ಅವರು ಗುರುವಾರ ಲೋಕಸಭೆಯಲ್ಲಿ ಹೇಳಿದರು.

ಸಂಸ್ಕೃತ ಕೇಂದ್ರೀಯ ವಿವಿಗಳ ಮಸೂದೆ,2019ರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಮೆರಿಕದ ಶೈಕ್ಷಣಿಕ ಸಂಸ್ಥೆಯೊಂದು ನಡೆಸಿರುವ ಸಂಶೋಧನೆಯಂತೆ ಸಂಸ್ಕೃತದಲ್ಲಿ ಮಾತನಾಡುವುದು ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ ಎಂದರು. ಸಂಸ್ಕೃತವನ್ನು ಆಧರಿಸಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡಿದರೆ ಅದು ದೋಷರಹಿತವಾಗಿರುತ್ತದೆ ಎಂದೂ ಅವರು ಅಮೆರಿಕದ ನಾಸಾ ನಡೆಸಿದೆ ಎನ್ನಲಾದ ಸಂಶೋಧನೆಯ ವರದಿಯನ್ನು ಉಲ್ಲೇಖಿಸಿ ತಿಳಿಸಿದರು.

ಕೆಲವು ಇಸ್ಲಾಮಿಕ್ ಭಾಷೆಗಳೂ ಸೇರಿದಂತೆ ವಿಶ್ವದಲ್ಲಿಯ ಶೇ.97ಕ್ಕೂ ಹೆಚ್ಚಿನ ಭಾಷೆಗಳು ಸಂಸ್ಕೃತವನ್ನು ಆಧರಿಸಿವೆ ಎಂದೂ ಸಿಂಗ್ ಪ್ರತಿಪಾದಿಸಿದರು. ದೇಶದಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಮೂರು ಡೀಮ್ಡ್ ಸಂಸ್ಕೃತ ವಿವಿಗಳನ್ನು ಸಂಸ್ಕೃತ ಕೇಂದ್ರೀಯ ವಿವಿಗಳನ್ನಾಗಿ ಪರಿವರ್ತಿಸಲು ಮಸೂದೆಯು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News