ಬಿರಿಯಾನಿ ಮಾರುತ್ತಿದ್ದ ದಲಿತ ವ್ಯಕ್ತಿಗೆ ಥಳಿತ

Update: 2019-12-15 08:16 GMT

ನೊಯ್ಡ, ಡಿ.15: ಉತ್ತರ ಪ್ರದೇಶದ ಗ್ರೇಟರ್ ನೊಯ್ಡದ ರಬುಪರ ಪ್ರದೇಶದಲ್ಲಿ ಬಿರಿಯಾನಿ ಮಾರಾಟ ಮಾಡಿದ್ದಕ್ಕಾಗಿ 43 ವರ್ಷದ ದಲಿತ ವ್ಯಕ್ತಿಯೊಬ್ಬನಿಗೆ ಕೆಲ ದುಷ್ಕರ್ಮಿಗಳು ಥಳಿಸಿದ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂತ್ರಸ್ತನ ಕೆನ್ನೆಗೆ ಯಾರೋ ಬಾರಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಒಬ್ಬ ಆತನಿಗೆ ಕೈ ಕಟ್ಟಿ ನಿಲ್ಲಲು ಹೇಳುತ್ತಿರುವುದು ಕೂಡ ಕೇಳಿಸುತ್ತದೆ. ಘಟನೆ ಕುರಿತಂತೆ ಸಂತ್ರಸ್ತ ನೀಡಿದ ದೂರಿನಂತೆ ಮೂವರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀಡಿಯೋ ನೋಡಿದ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಆರೋಪಿಗಳು ಸಂತ್ರಸ್ತನ ಆಹಾರ ಸ್ಟಾಲ್ ಅನ್ನೂ ಕೆಡವಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News