ಆಂಧ್ರಪ್ರದೇಶದಲ್ಲಿ 34 ಕೋವಿಡ್ -19 ಹೊಸ ಪ್ರಕರಣಗಳು, ವೈದ್ಯರೊಬ್ಬರು ಬಲಿ

Update: 2020-04-14 09:47 GMT

ಹೈದರಾಬಾದ್, ಎ.14: ಕಳೆದ 12 ಗಂಟೆಗಳಲ್ಲಿ ಆಂಧ್ರಪ್ರದೇಶದಲ್ಲಿ ಕೋವಿಡ್ -9 ಮೂವತ್ತನಾಲ್ಕು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಒಟ್ಟು ಸೋಂಕಿತರ ಸಂಖ್ಯೆಯನ್ನು 473 ತಲುಪಿದೆ.  ವೈದ್ಯರೊಬ್ಬರು  ಸೇರಿದಂತೆ ಈವರೆಗೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ವೈದ್ಯರು  ತಬ್ಲಿಘಿ ಜಮಾಅತ್  ಸದಸ್ಯರಿಗೆ ಚಿಕಿತ್ಸೆ ನೀಡಿದವರು ಎಂದು ತಿಳಿದು ಬಂದಿದೆ.

ಮಂಗಳವಾರ ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಇತ್ತೀಚಿನ ಬುಲೆಟಿನ್ ಪ್ರಕಾರ, ನೆಲ್ಲೂರಿನ 56 ವರ್ಷದ ವೈದ್ಯರು ಎಪ್ರಿಲ್ 3 ರಂದು ಜ್ವರ ಮತ್ತು ವಾಂತಿ ರೋಗಲಕ್ಷಣಗಳೊಂದಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.ಅವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ತಗಲಿರುವುದು ಬೆಳಕಿಗೆ ಬಂದಿತ್ತು.

ವೈದ್ಯರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅವರ ಕುಟುಂಬ ಸದಸ್ಯರ ಕೋರಿಕೆಯ ಮೇರೆಗೆ ಅವರನ್ನು ಎಪ್ರಿಲ್ 6 ರಂದು ಚೆನ್ನೈನ ವನಗರಂನ ಅಪೊಲೊ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು. ಅವರು ಸೋಮವಾರ ಕೊನೆಯುಸಿರೆಳೆದರು  ”ಎಂದು ಬುಲೆಟಿನ್ ಹೇಳಿದೆ,

ಮಾರ್ಚ್ ಎರಡನೇ ವಾರದಲ್ಲಿ ದಿಲ್ಲಿ  ನಿಝಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಜಮಾಅತ್ ಸಭೆಯಿಂದ ಮರಳಿದ ರೋಗಿಗೆ ಮೂಳೆ ಶಸ್ತ್ರಚಿಕಿತ್ಸಕ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ನೆಲ್ಲೂರಿನ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ., ಅವರು ಇತ್ತೀಚೆಗೆ ಕ್ಲಿನಿಕ್ ಅನ್ನು ತೆರೆದಿದ್ದ ಅವರು  ಅಲ್ಲಿ  ತಬ್ಲಿಘಿ ಜಮಾಅತ್ ಸಮಾವೇಶಕ್ಕೆ ಭಾಗವಹಿಸಿ  ಹಿಂದಿರುಗಿದವರಿಗೆ ಚಿಕಿತ್ಸೆ ನೀಡಿದ್ದರು  ಎಂದು ಅಧಿಕಾರಿ ಹೇಳಿದರು.

ವಿಜಯವಾಡ ಮೂಲದ 55 ವರ್ಷದ ಇನ್ನೊಬ್ಬ ವ್ಯಕ್ತಿ ಕಳೆದ 12 ಗಂಟೆಗಳಲ್ಲಿ ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಪಂಜಾಬ್‌ನ ಜಲಂಧರ್ ಗೆ  ಪ್ರಯಾಣದ ಇತಿಹಾಸ ಹೊಂದಿರುವ ಇನ್ನೊಬ್ಬ ಕೋವಿಡ್ -19 ರೋಗಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರು.  ಅವರು ಎಪ್ರಿಲ್ 5 ರಂದು ವಿಜಯವಾಡ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಎ. 9 ರಿಂದ 12 ರವರೆಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ  ನೀಡಲಾಗಿತ್ತು. ಅವರು ಮಧುಮೇಹ ಮತ್ತು ಆಸ್ತಮಾದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ  ಎಪ್ರಿಲ್ 12 ರಂದು ಸಾವನ್ನಪ್ಪಿದರು" ಎಂದು ಬುಲೆಟಿನ್ ಹೇಳಿದೆ.

ಕಳೆದ 12 ಗಂಟೆಗಳಲ್ಲಿ ವರದಿಯಾದ ಹೊಸ ಕೋವಿಡ್ -19 ಸಕಾರಾತ್ಮಕ ಪ್ರಕರಣಗಳಲ್ಲಿ 16 ಗುಂಟೂರಿನಿಂದ, ಕೃಷ್ಣದಲ್ಲಿ ಎಂಟು, ಕರ್ನೂಲ್‌ನಲ್ಲಿ ಏಳು, ಅನಂತಪುರದಲ್ಲಿ ಎರಡು ಮತ್ತು ನೆಲ್ಲೂರಿನಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಗುಂಟೂರಿನಿಂದ 109, ನಂತರ ಕರ್ನೂಲ್‌ನಲ್ಲಿ 91, ನೆಲ್ಲೂರಿನಲ್ಲಿ 56, ಕೃಷ್ಣದಲ್ಲಿ 44 ಮತ್ತು ಪ್ರಕಾಶದಲ್ಲಿ 42 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News