ಈ ಗೋಡೆಯನ್ನು ಕೆಡವಿಬಿಡಿ!

Update: 2020-04-21 17:32 GMT

ಒಂದು ರಾಷ್ಟ್ರ ಮತ್ತು ಇನ್ನೊಂದು ರಾಷ್ಟ್ರದ ನಡುವೆ ಯಾವುದೇ ರೀತಿಯ ತಾರತಮ್ಯ ಮಾಡದ ಕೊರೋನದಂತಹ ಒಂದು ಸಾಂಕ್ರಾಮಿಕ ರೋಗ ವಿಶ್ವದ ರಾಷ್ಟ್ರಗಳನ್ನು ಪರಸ್ಪರ ಹತ್ತಿರ ತರುತ್ತ್ತದೆ ಹಾಗೂ ಅವುಗಳನ್ನು ಒಂದಾಗಿಸುತ್ತದೆ ಎಂದು ನೀವು ತಿಳಿದಿರಬಹುದು. ಆದರೆ ನಿಮ್ಮ ತಿಳುವಳಿಕೆ ತಪ್ಪು. ವಿಶ್ವ ಹಸಿವು ಆಟಗಳಿಗೆ (ಹಂಗರ್‌ಗೇಮ್ಸ್) ಜಾಗತಿಕ ಸಹಕಾರ ಕಳೆದು ಹೋಗಿ ಈಗ ಜಗತ್ತು ಜಾಗತಿಕ ಸ್ಪರ್ಧೆಯಲ್ಲಿದೆ. ತಮ್ಮದೇ ಆದ ದೇಶದ ಜನರನ್ನು ಉಳಿಸುವ ಹತಾಶ ಪ್ರಯತ್ನದಲ್ಲಿ ಸರಕಾರಗಳು ಗೋಡೆಗಳನ್ನು, ತಡೆಗೋಡೆಗಳನ್ನು, ಬೇಲಿಗಳನ್ನು ನಿರ್ಮಿಸುತ್ತಿವೆ.

ಇದೆಲ್ಲ ವಾಶಿಂಗ್ಟನ್‌ನಿಂದ ಆರಂಭವಾಯಿತು. ಅಧ್ಯಕ್ಷ ಟ್ರಂಪ್ ಸಾಕಷ್ಟು ಮುಂಚಿತವಾಗಿಯೇ ಕೊರೋನ ವೈರಸನ್ನು ಗಂಭೀರವಾಗಿ ಪರಿಗಣಿಸದೇ ಶಿಕ್ಷಕನೊಬ್ಬ ತುಂಟ ಹುಡುಗನೊಂದಿಗೆ ವ್ಯವಹರಿಸುವಂತೆ ಅದು (ವೈರಸ್) ಬೇಸಿಗೆ ಕಳೆಯುವಷ್ಟರಲ್ಲಿ ತಾನಾಗಿಯೇ ತೊಲಗಿ ಹೋಗುತ್ತದೆ ಎಂದು ವಾದಿಸಿದರು. ಆದರೆ ಅವರ ವಾದ, ಅದನ್ನಾಧರಿಸಿದ ಯೋಜನೆಯ ಗತಿ ಎನಾಯಿತೆಂದು ನಿಮಗೆ ಗೊತ್ತಿದೆ. ಈಗ ಟ್ರಂಪ್ ತಾನು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಪರದಾಡುತ್ತಿದ್ದಾರೆ. ವಾರಗಳ ಹಿಂದೆ ಚೀನಾದಿಂದ ತಮಗೆ ಬರಬೇಕಾಗಿದ್ದ ಔಷಧಿಗಳನ್ನು ಅಮೆರಿಕ ಕದ್ದುಕೊಂಡಿತೆಂದು ಜರ್ಮನಿ, ಫ್ರಾನ್ಸ್, ಬ್ರೆಝಿಲ್ ಮತ್ತಿತರ ದೇಶಗಳು ಹೇಳಿದವು. ಅದಾದ ಬಳಿಕ ಗದೆ ಬೀಸಿದ ಅಮೆರಿಕ ತನ್ನ ದೇಶಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕಳುಹಿಸದೆ ಇದ್ದಲ್ಲಿ ತಕ್ಕ ಶಾಸ್ತಿ ಮಾಡುವುದಾಗಿ ಭಾರತಕ್ಕೆ ಬೆದರಿಕೆ ಹಾಕಲಾಯಿತು.
 ವಿಶ್ವಾದ್ಯಂತ ಈಗ ಕಾಣಿಸಿಕೊಂಡಿರುವ ವೈದ್ಯಕೀಯ ಸಾಮಗ್ರಿಗಳ ಪೂರೈಕೆಯ ಕೊರತೆಯೇ ಸ್ವತಃ ಟ್ರಂಪ್ ಕಟ್ಟಿದ ಗೋಡೆಗಳ ಮತ್ತು ಬೇಲಿಗಳ ಪರಿಣಾಮ ಟ್ರಂಪ್ ಹೂಡಿದ ವಾಣಿಜ್ಯ ಸಮರಗಳು ವಿಶ್ವಾದ್ಯಂತ ಪೂರೈಕೆ ಸರಪಳಿಗಳನು,್ನ ಸರಣಿಯನ್ನು ಅಸ್ತವ್ಯಸ್ತಗೊಳಿಸಿದವು. ಪರಿಣಾಮವಾಗಿ, ಅಮೆರಿಕದ ಪ್ರಯೋಗಾಲಯಗಳಲ್ಲಿ ಕಂಡುಹಿಡಿಯಲಾಗದ ಹೊಸ ವಿಚಾರಗಳು, ಆವಿಷ್ಕಾರಗಳು ಚೀನಾದ ಫ್ಯಾಕ್ಟರಿಗಳಲ್ಲಿ ಸಿದ್ಧ ಉತ್ಪನ್ನಗಳಾಗಲು ಅವಕಾಶವಿಲ್ಲವಾಯಿತು. ಹೀಗಾಗಿ ಚೀನಾ, ಉತ್ಪಾದಿಸುವ ಭರದಲ್ಲಿ ನಿರೀಕ್ಷಿತ ಗುಣಮಟ್ಟವಿಲ್ಲದ ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡಿತ್ತು.

ಅದರಲ್ಲಿ ಬಹಳಷ್ಟನ್ನು ಯುರೋಪ್, ಆಸ್ಟ್ರೇಲಿಯ ಮತ್ತಿತರ ದೇಶಗಳ ಕ್ರುದ್ಧ ವೈದ್ಯರು ಹಿಂದೆ ಕಳುಹಿಸುತ್ತಿದ್ದಾರೆ. ಇನ್ನೊಂದೆಡೆ ಚೀನಾ ಒಟ್ಟು ಪರಿಸ್ಥಿತಿಯನ್ನು ತನ್ನ ಪ್ರತಿಷ್ಠೆಯ ಮೇಲೆ ತಾನೇ ನಡೆಸಿದ ಒಂದು ದಾಳಿಯಾಗಿ ಪರಿವರ್ತಿಸಿಕೊಂಡಿದೆ. ಸೋಂಕಿನ ಮೊದಲಿನ ಪ್ರಕರಣಗಳನ್ನು ಮುಚ್ಚಿಟ್ಟ ವಿಷಯವನ್ನು ಬಹಿರಂಗಗೊಳಿಸಿ ತನ್ನ ಪ್ರತಿಷ್ಠೆಗೆ ಧಕ್ಕೆ ತಂದರು ಎಂದು ತಿಳಿದು ಹಾಗೆ ಬಯಲುಗೊಳಿಸಿದ ಪತ್ರಕರ್ತರನ್ನು ಸದೆ ಬಡಿಯಲು ಅದು ಪ್ರಯತ್ನಿಸಿದೆ (ತನ್ನ ಕುರಿತಾದ ರಹಸ್ಯಗಳನ್ನು ಬಹಿರಂಗಪಡಿಸುವ ವಿಸಲ್ ಬ್ಲೋವರ್‌ಗಳನ್ನು ಚೀನಾ ನಡೆಸಿಕೊಳ್ಳುವ ರೀತಿ ಯಾವುದೆಂದರೆ, ಅವರು ರಹಸ್ಯವಾಗಿ ನಾಪತ್ತೆಯಾಗುವಂತೆ ಮಾಡುವುದು). ಓರ್ವ ಅಮೆರಿಕನ್ ನ್ಯಾಯವಾದಿಯಂತೂ ಇಂತಹ ಘಟನೆಗಳಿಗೆ ಸಂಬಂಧಿಸಿ ಚೀನೀಯರ ವಿರುದ್ಧ 20 ಟ್ರಿಲಿಯನ್ ಡಾಲರ್ ಪರಿಹಾರ ಕೋರಿ ಒಂದು ಮೊಕದ್ದಮೆಯನ್ನು ಕೂಡಾ ಹೂಡಿದ್ದಾರೆ.

ಅದೇ ವೇಳೆ, ಭಾರತದಲ್ಲಿ ಗೋಡೆಗಳು, ತಡೆಬೇಲಿಗಳು ಎದ್ದು ನಿಲ್ಲಲಾರಂಭಿಸಿವೆ. ಅನಿವಾರ್ಯವಾದ ಲಾಕ್‌ಡೌನ್ ವರ್ಗ ಅಸಮಾನತೆಗಳ, ತಾರತಮ್ಯಗಳ ಬಗ್ಗೆ ಕೆಲವು ಆಘಾತಕಾರಿ ಘಟನೆಗಳಿಗೆ ಕಾರಣವಾಗಿದೆ: ಮಧ್ಯಮ ವರ್ಗದ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಾಯಿತಾದರೂ, ದೇಶದ ಬೃಹತ್ ನಗರಗಳಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರು ಕೆಲಸ ಇಲ್ಲದೆ ಆಹಾರ ಇಲ್ಲದೆ ಪಡಬಾರದ ಪಾಡು ಪಡುವಂತಾಯಿತು. ಪ್ರಾದೇಶಿಕ ವಿಭಜನೆಗಳು, ತಡೆಗೋಡೆಗಳು ಢಾಳಾಗಿ ಕಾಣಿಸಿಕೊಂಡವು; ಹಲವು ದಿನಗಳವರೆಗೆ ಕರ್ನಾಟಕವು ಕೇರಳದ ಗಡಿಗಳನ್ನು ಮುಚ್ಚಿದ್ದರಿಂದಾಗಿ ವೈದ್ಯಕೀಯ ಚಿಕಿತ್ಸೆಗಾಗಿ ಕರ್ನಾಟಕದೊಳಕ್ಕೆ ಬರಲಾಗದೆ ಹಲವು ರೋಗಿಗಳು ಸಾಯುವಂತಾಯಿತು.

ಗೋಡೆಗಳ ಹಾಗೂ ತಡೆಗೋಡೆಗಳ ಕಾಲದಲ್ಲಿ ಧಾರ್ಮಿಕ ಗೋಡೆಗಳು ಎದ್ದುನಿಲ್ಲದೆ ಇರುತ್ತವೆಯೇ? ಅಕ್ಷಮ್ಯವಾದ ತಬ್ಲೀಗಿ ಜಮಾಅತ್ ಧಾರ್ಮಿಕ ಸಮಾವೇಶ ಕೊರೋನ ಸೋಂಕು ಏರಿಕೆಗೆ ಕಾರಣವಾಗಿ, ಕೋಮುವಾದಿ ಆವೇಶದ ಆಪಾದನೆಗಳಿಗೆ ಹಾದಿ ಮಾಡಿಕೊಟ್ಟಿತು; ಕೆಲವರು ಅದನ್ನು ‘ಕೊರೋನ ಜಿಹಾದ್’ ಎಂದು ಕರೆದರು. ಮುಸ್ಲಿಮರು ಪೂರ್ವಯೋಜಿತವಾಗಿ ನಡೆಸಿದ ಒಂದು ಒಳಸಂಚು ಎನ್ನುವ ಮಟ್ಟಕ್ಕೂ ಹೋದರು.

ಭಾರತ ಕೂಡ ಮುಂದಿನ ತಿಂಗಳುಗಳಲ್ಲಿ ವ್ಯಾಪಾರ ಕ್ಷೇತ್ರದ ರಕ್ಷಣೆಯತ್ತ (ಟ್ರೇಡ್ ಪ್ರೊಟೆಕ್ಷನಿಸಂ) ಹೊರಳುವಂತೆ ಕಾಣಿಸುತ್ತಿದೆ. ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯೊಂದರಲ್ಲಿ ಭಾರತ ಇತರ ದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಬೇಕಾಗಿರುವುದರಿಂದ ಸಚಿವರು ‘‘ಮೇಕ್ ಇನ್ ಇಂಡಿಯಾ’’ದ ಸಾಧ್ಯತೆಗಳನ್ನು ಚರ್ಚಿಸಿದರು. ದೇಶದಲ್ಲೇ ಉತ್ಪಾದಿಸುವುದು ಬಹಳ ಒಳ್ಳೆಯ ವಿಚಾರ, ಆದರೆ ಅದಕ್ಕಾಗಿ ವ್ಯಾಪಾರವನ್ನು ನಿರ್ಬಂಧಿಸುವುದು ಲಾಕ್‌ಡೌನ್ ಮಾಡುವುದಲ್ಲ.

 ಯಾವುದೇ ಸಾಂಕ್ರಾಮಿಕದಿಂದ ನಾವು ಕಲಿಯಬೇಕಾದ ಪಾಠ ತಮ್ಮ ನೆರೆಹೊರೆಯವರು ಆರೋಗ್ಯವಾಗಿರದೆ ಇದ್ದಲ್ಲಿ ಯಾರೂ ಸುರಕ್ಷಿತರಲ್ಲ. ಶ್ರೀಮಂತರಿಗೆ ಮಾತ್ರ ಆರೋಗ್ಯ ಸೇವೆ ದೊರಕಿದರೆ ಸಾಲದು, ಅವರ ನಡುವೆ ಇರುವ ಬಡವರಿಗೂ ಅದು ದೊರಕಬೇಕು. ಅಂದರೆ, ನಮಗೆ ಬೇಕಾಗಿರುವುದು ಸಹಕಾರ; ದೇಶಗಳ, ರಾಜ್ಯಗಳ ಹಾಗೂ ಸಮುದಾಯಗಳ ನಡುವೆ ಸಹಕಾರ. ಇನ್ನೋರ್ವ ಅಮೆರಿಕದ ಅಧ್ಯಕ್ಷರು ಇನ್ನೊಂದು ಸಂದರ್ಭದಲ್ಲಿ, ಯುಗದಲ್ಲಿ ಹೇಳಿದಂತೆ, ‘‘ಮಿಸ್ಟರ್ ಗೊರ್ಬಚೆವ್ ಈ ಗೋಡೆಯನ್ನು ಕೆಡವಿ ಉರುಳಿಸದಿರಿ’’

ಕೃಪೆ: deccan herald

Writer - ಮುಹಮ್ಮದ್ ಝೀಶಾನ್

contributor

Editor - ಮುಹಮ್ಮದ್ ಝೀಶಾನ್

contributor

Similar News