ಲಾಕ್‌ಡೌನ್‌: ದಿನಗೂಲಿ ಕಾರ್ಮಿಕರ ನೆರವಿಗೆ ಧಾವಿಸಿದ ಕತ್ರೀನಾ ಕೈಫ್

Update: 2020-04-22 15:26 GMT

ಮುಂಬೈ, ಎ.22: ಲಾಕ್‌ಡೌನ್‌ನಿಂದಾಗಿ ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ದಿನಗೂಲಿ ಕಾರ್ಮಿಕರ ನೆರವಿಗೆ ಬಾಲಿವುಡ್ ನಟಿ ಕತ್ರೀನಾ ಕೈಫ್‌ ಧಾವಿಸಿದ್ದಾರೆ. ದಿನಗೂಲಿ ಕಾರ್ಮಿಕರ ಆಹಾರ ಹಾಗೂ ನೈರ್ಮಲ್ಯದ ಅವಶ್ಯಕತೆಗಳಿಗೆ ತನ್ನ ದೇಣಿಗೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ಕತ್ರೀನಾ ಕೈಫ್ ಒಡೆತನದ ಆನ್‌ಲೈನ್ ಪ್ರಸಾದನ ಉತ್ಪನ್ನಗಳ ಮಾರಾಟ ಸಂಸ್ಥೆ ‘ಕೇಬ್ಯೂಟಿ’ಯು, ಸಮಾಜಸೇವಾಸಂಸ್ಥೆಯಾದ ‘ದೇ ಹಾತ್ ಫೌಂಡೇಶನ್’ ಜೊತೆ ಕೈಜೋಡಿಸಿದ್ದು, ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಬಾಧಿತರಾದ ದಿನಗೂಲಿ ಕಾರ್ಮಿಕರಿಗೆ ನೆರವಾಗಲಿದೆ.

ನಮಗೆಲ್ಲರಿಗೂ ಈ ತಿಂಗಳು ಅತ್ಯಂತ ಕಠಿಣವಾದ ತಿಂಗಳಾಗಿದ್ದು, ಈ ಭೀಕರ ಸಾಂಕ್ರಾಮಿಕ ರೋಗವನ್ನು ಸೋಲಿಸಲು ಜನರು ಶ್ರಮಿಸುತ್ತಿರುವುದನ್ನು ನೋಡುವಾಗ ಅದ್ಭುತವೆನಿಸುತ್ತದೆ ಎಂದು ಕತ್ರೀನಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

‘‘ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ದಿನಗೂಲಿ ಕಾರ್ಮಿಕರಿಗೆ ನೆರವಾಗಲು, ದೇ ಹಾತ್ ಪ್ರತಿಷ್ಠಾನದ ಜೊತೆ ಮತ್ತೊಮ್ಮೆ ಕೈಜೋಡಿಸಲು ನಮಗೆ ತುಂಬಾ ಹೆಮ್ಮೆಯೆನಿಸುತ್ತದೆ. ಜಿಲ್ಲೆಯ ದಿನಗೂಲಿ ಕಾರ್ಮಿಕರರ ಆಹಾರ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ದೇಣಿಗೆ ನೀಡಲಿದ್ದೇವೆ’’ ಎಂದು ಕತ್ರಿನಾ ಕೈಫ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News