ಛತ್ತೀಸ್ ಗಢ ಮಾಜಿ ಸಿಎಂ ಅಜಿತ್ ಜೋಗಿ ಕೋಮಾದಲ್ಲಿ
Update: 2020-05-10 11:07 GMT
ಹೊಸದಿಲ್ಲಿ: ಅನಾರೋಗ್ಯಪೀಡಿತರಾಗಿದ್ದ ಛತ್ತೀಸ್ ಗಢ ಮಾಜಿ ಸಿಎಂ ಅಜಿತ್ ಜೋಗಿ ಕೋಮಾದಲ್ಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶನಿವಾರ ಅವರಿಗೆ ಹೃದಯ ಸ್ತಂಬನವಾಗಿದ್ದು, ಇದೀಗ ಅವರ ಮೆದುಳು ಆಮ್ಲಜನಕವನ್ನು ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಕೋಮಾದಲ್ಲಿದ್ದಾರೆ ಎಂದು ಆಸ್ಪತ್ರೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.
74 ವರ್ಷದ ಅಜಿತ್ ಜೋಗಿಯವರನ್ನು ಶ್ರೀ ನಾರಾಯಣ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಇರಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.