ಮಹಾರಾಷ್ಟ್ರ, ದಿಲ್ಲಿ ಸೇರಿದಂತೆ 5 ರಾಜ್ಯಗಳಿಗೆ ಕೋವಿಡ್-19 ಔಷಧದ ಮೊದಲ ಬ್ಯಾಚ್ ರವಾನೆ

Update: 2020-06-25 08:58 GMT

ಹೊಸದಿಲ್ಲಿ, ಜೂ.25: ಪ್ರಾಯೋಗಿಕ ಕೋವಿಡ್-19 ಔಷಧಿ ರೆಮ್‌ಡೆಸಿವಿರ್‌ನ ಜೆನೆರಿಕ್ ಆವೃತ್ತಿಯನ್ನು ತಯಾರಿಸಲು ಹಾಗೂ ಮಾರಾಟ ಮಾಡಲು ಅನುಮತಿ ಪಡೆದಿರುವ ಹೈದರಾಬಾದ್ ಮೂಲದ ಔಷಧ ತಯಾರಕ ಹೆಟೆರೊ ಮಹಾರಾಷ್ಟ್ರ ಹಾಗೂ ದಿಲ್ಲಿ ಸೇರಿದಂತೆ ಐದು ರಾಜ್ಯಗಳಿಗೆ 20,000 ಬಾಟಲ್‌ಗಳನ್ನು ಕಳುಹಿಸಿದೆ. ಈ ಎರಡು ರಾಜ್ಯಗಳು ಅತ್ಯಂತ ಹೆಚ್ಚು ಕೊರೋನ ಸೋಂಕಿತ ರಾಜ್ಯಗಳಾಗಿವೆ.

ಗುಜರಾತ್,ಹೈದರಾಬಾದ್ ಹಾಗೂ ತಮಿಳುನಾಡು ಭಾರತದಲ್ಲಿ 'ಕೋವಿಫೋರ್' ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿರುವ ಔಷಧದ ಮೊದಲ ಬ್ಯಾಚ್‌ನ್ನು ಸ್ವೀಕರಿಸಲಿರುವ ಇತರ ಮೂರು ರಾಜ್ಯಗಳಾಗಿವೆ. 100 ಮಿಲಿ ಗ್ರಾಂ ಬಾಟಲಿಗೆ 5,400 ರೂ. ಮೂರು-ನಾಲ್ಕು ವಾರಗಳಲ್ಲಿ ಒಂದ ಲಕ್ಷ ಬಾಟಲುಗಳನ್ನು ಉತ್ಪಾದಿಸುವ ಗುರಿಯನ್ನು ಕಂಪೆನಿ ನಿಗದಿಪಡಿಸಿದೆ.

ಮುಂಬರುವ ದಿನಗಳಲ್ಲಿ ಕೋಲ್ಕತಾ,ಇಂದೋರ್,ಭೋಪಾಲ್,ಲಕ್ನೊ, ಪಾಟ್ನಾ,ಭುವನೇಶ್ವರ, ರಾಂಚಿ, ವಿಜಯವಾಡ,ಕೊಚ್ಚಿ, ತಿರುವನಂತಪುರ ಹಾಗೂ ಗೋವಾಕ್ಕೆ ರವಾನಿಸಲಾಗುತ್ತದೆ.

ಪ್ರಸ್ತುತ ಔಷಧಿಯನ್ನು ಹೈದರಾಬಾದ್‌ನಲ್ಲಿರುವ ಕಂಪೆನಿಯ ಸೂತ್ರೀಕರಣ ಕೇಂದ್ರದಲ್ಲಿ ತಯಾರಿಸಲಾಗುತ್ತಿದೆ. ಸಂಸ್ಥೆಯ ವಿಶಾಖಪಟ್ಟಣ ಘಟಕದಲ್ಲಿ ಸಕ್ರಿಯ ಔಷಧಿಯ ಘಟಕಾಂಶವನ್ನು ತಯಾರಿಸಲಾಗುತ್ತಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಈ ಔಷಧಿ ಆಸ್ಪತ್ರೆಗಳು ಹಾಗೂ ಸರಕಾರದ ಮೂಲಕ ಮಾತ್ರ ಲಭ್ಯವಿರುತ್ತದೆ. ಚಿಲ್ಲರೆ ಮೂಲಕ ಲಭ್ಯವಿರುವುದಿಲ್ಲ ಎಂದು ಹೆಟೆರೊ ಗ್ರೂಪ್ ಆಫ್ ಕಂಪೆನಿಗಳ ಎಂಸಿ ವಂಶಿ ಕೃಷ್ಣ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News