ಅರಬ್ ಜಗತ್ತಿನ ಪ್ರಪ್ರಥಮ ಅಣುಶಕ್ತಿ ಸ್ಥಾವರ ಕಾರ್ಯಾರಂಭ

Update: 2020-08-02 17:38 GMT
ಚಿತ್ರ ಕೃಪೆ: twitter.com/NorbertElekes

ಅಬುದಾಭಿ,ಆ.2: ಆರಬ್ ಜಗತ್ತಿನ ಪ್ರಪ್ರಥಮ ಅಣು ವಿದ್ಯುತ್ ಸ್ಥಾವರವು ಕಾರ್ಯಾರಂಭಿಸಿದೆಯೆಂದು ಯುಎಇ ಶನಿವಾರ ಪ್ರಕಟಿಸಿದೆ.

  ‘‘ ಬರಖಾದ ಅಣುಶಕ್ತಿ ಸ್ಥಾವರದಲ್ಲಿರುವ ಯುಎಇನ ಪ್ರಥಮ ಅಣು ರಿಯಾಕ್ಟರ್ ಯಶಸ್ವಿಯಾಗಿ ಕಾರ್ಯಾರಂಭಗೊಂಡಿದೆ’’ ಎಂದು ಯುಎಇನ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಪ್ರತಿನಿಧಿ ಹಮದ್ ಅಲ್ಕಾಬಿ ಟ್ವೀಟ್ ಮಾಡಿದ್ದಾರೆ.

   ‘‘ ದೇಶಕ್ಕೆ ಹೊಸ ರೂಪದ ಪರಿಶುದ್ಧವಾದ ಇಂಧನವನ್ನು ಒದಗಿಸುವ ದೂರದೃಷ್ಟಿಯೊಂದಿಗೆ, ಇದು ದೇಶದ ಇತಿಹಾಸದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ’’ ಎಂದು ಅವರು ಟ್ವೀಟಿಸಿದ್ದಾರೆ. ಅಣುಶಕಿ ಘಟಕವು ಕಾರ್ಯಾರಂಭಿಸಿರುವ ಸಂಭ್ರಮದಲ್ಲಿ ತಂತ್ರಜ್ಞರು ಕೈಗಳನ್ನು ಎತ್ತಿ ಸಂಭ್ರಮ ವ್ಯಕ್ತಪಡಿಸುತ್ತಿರುವ ಛಾಯಾಚಿತ್ರಗಳನ್ನು ಕೂಡಾ ಅವರು ಪ್ರಕಟಿಸಿದ್ದಾರೆ.

 ಯುಎಇನ ಪ್ರಧಾನಿ ಹಾಗೂ ದುಬೈನ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಕೂಡಾ ಬರಖಾ ಸ್ಥಾವರದ ಕಾರ್ಯಾರಂಭವನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News