ಸುಳ್ಳು ಸುದ್ದಿಯನ್ನು ರಿಟ್ವೀಟ್ ಮಾಡಿದ ಟ್ರಂಪ್‍ಗೆ ಟಿವಿ ನಿರೂಪಕಿಯ ತರಾಟೆ

Update: 2020-10-16 10:08 GMT

ಹೊಸದಿಲ್ಲಿ: ಡೆಮಾಕ್ರೆಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು 9/11 ದಾಳಿಯ ರೂವಾರಿ ಒಸಾಮ ಬಿನ್ ಲಾಡೆನ್ ಸತ್ತಿದ್ದಾನೆಂಬ ಸುಳ್ಳನ್ನು ಮುಚ್ಚಿ ಹಾಕಲು ನೌಕಾ ಸೀಲ್‍ಗಳನ್ನು ಕೊಂದಿರಬಹುದೆಂಬ ಆಧಾರರಹಿತ ಸುದ್ದಿಯನ್ನು ರಿಟ್ವೀಟ್ ಮಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ರಾತ್ರಿ ನಡೆದ ಟೌನ್ ಹಾಲ್‍ನಲ್ಲಿ ಎನ್‍ಬಿಸಿ ನ್ಯೂಸ್ ನಿರೂಪಕಿ ಸವಾನ್ನಾಹ್ ಗುತ್ರೀ ಅವರು  ಬಹಿರಂಗವಾಗಿ ಪ್ರಶ್ನಿಸಿದ ಘಟನೆ ನಡೆದಿದೆ. ಬಿನ್ ಲಾಡೆನ್ ಸತ್ತಿದ್ದು ಸುಳ್ಳು ಆತ ಇನ್ನೂ ಜೀವಂತವಾಗಿದ್ದಾನೆಂಬ ಸುಳ್ಳು ಸುದ್ದಿಯ ಎರಡು ಸಂದೇಶಗಳನ್ನು ಟ್ರಂಪ್ ರಿಟ್ವೀಟ್ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸವಾನ್ನಾಹ್ ಅವರು ``ಇಂತಹ ಒಂದು ಸುಳ್ಳನ್ನು ನಿಮ್ಮ ಫಾಲೋವರ್ಸ್‍ಗೆ ಏಕೆ ಕಳುಹಿಸಿದ್ದೀರಿ?,'' ಎಂದು ಪ್ರಶ್ನಿಸಿದ್ದಾರೆ.

"ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ... ಅದೊಂದು ರಿಟ್ವೀಟ್..... ಅದು ಯಾರದ್ದೋ ಅಭಿಪ್ರಾಯ,'' ಎಂದು ಹೇಳಿದ ಟ್ರಂಪ್ ``ನಾನು ಅದನ್ನು ಅಲ್ಲಿ ಹಾಕಿದ್ದೇನೆ, ಜನರು ತಾವಾಗಿಯೇ ನಿರ್ಧರಿಸಬಹುದು, ನಾನು ಯಾವುದೇ ನಿಲುವು ತಾಳುವುದಿಲ್ಲ,'' ಎಂದಾಗ ಸವಾನ್ನಾಹ್ ಅವರು ಇನ್ನಷ್ಟು ಆಕ್ರೋಶಿತರಾದರಲ್ಲದೆ "ನನಗೆ ಅರ್ಥವಾಗುತ್ತಿಲ್ಲ, ನೀವು  ಏನನ್ನು ಬೇಕಾದರೂ ಹಾಗೆಯೇ ರಿಟ್ವೀಟ್ ಮಾಡಲು ಯಾರದ್ದೋ  'ಕ್ರೇಝಿ ಅಂಕಲ್' ಅಲ್ಲ,'' ಎಂದು ಅಂದು ಬಿಟ್ಟರು.

ಇದಕ್ಕೆ ಉತ್ತರಿಸಿದ ಟ್ರಂಪ್, "ನಿಜ ಹೇಳಬೇಕೆಂದರೆ, ಮಾಧ್ಯಮ ಅದೆಷ್ಟು ನಕಲಿ ಹಾಗೂ ಭ್ರಷ್ಟವಿದೆಯೆಂದರೆ, ನನಗೆ ಸೋಶಿಯಲ್ ಮೀಡಿಯಾ ಇಲ್ಲದೇ ಇದ್ದರೆ.. ಆ ಮಾತುಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ,'' ಎಂದರು.

"ಆ ಮಾತುಗಳು ಸುಳ್ಳು,'' ಎಂದು ಆಗ ಸವಾನ್ನಾಹ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News