ಹಮಾಸ್ ನಾಯಕ ಯಹ್ಯಾ ಸಿನ್ವರ್ ಮೃತ್ಯು : ದೃಢಪಡಿಸಿದ ಇಸ್ರೇಲ್ ನ ವಿದೇಶಾಂಗ ಸಚಿವ
Update: 2024-10-17 17:25 GMT
ಗಾಝಾ : ಗಾಝಾದಲ್ಲಿ ಇಸ್ರೇಲ್ ಪಡೆಗಳ ದಾಳಿಯಲ್ಲಿ ಹಮಾಸ್ ನ ಉನ್ನತ ನಾಯಕ ಯಹ್ಯಾ ಸಿನ್ವರ್ ಅವರು ಕೊಲ್ಲಲ್ಪಟಿದ್ದಾರೆ ಎಂದು ಇಸ್ರೇಲ್ನ ವಿದೇಶಾಂಗ ಸಚಿವ ಕಾಟ್ಜ್ ಅವರು ದೃಢಪಡಿಸಿದ್ದಾರೆ.
ಯಹ್ಯಾ ಸಿನ್ವರ್ ಅವರು ಕಳೆದ ವರ್ಷ ಇಸ್ರೇಲ್ ಮೇಲೆ ಯುದ್ಧಕ್ಕೆ ಕಾರಣವಾದ ದಾಳಿಯ ಮುಖ್ಯ ರೂವಾರಿಯಾಗಿದ್ದರು.
ಒಂದು ವರ್ಷದ ಹಿಂದೆ ಇಸ್ರೇಲ್-ಹಮಾಸ್ ಯುದ್ಧದ ಆರಂಭದಿಂದಲೂ ಸಿನ್ವರ್ ಇಸ್ರೇಲ್ ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಅವರ ಸಾವಿನ ಬಗ್ಗೆ ಹಮಾಸ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಢಪಡಿಸಿಯೂ ಇಲ್ಲ.
ಇಸ್ರೇಲ್ ವಿದೇಶಾಂಗ ಸಚಿವ ಕಾಟ್ಜ್ ಅವರು, “ಸಿನ್ವರ್ ಅವರ ಹತ್ಯೆಯು ಇದು ಇಸ್ರೇಲಿ ಸೇನೆಗೆ ನೈತಿಕ ಬಲ ನೀಡಿದೆ. ಈ ಬೆಳವಣಿಗೆಯು ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡುವ ಸಾಧ್ಯತೆಯನ್ನು ಹೆಚ್ಚಿಸಲಿದೆ. ಹಮಾಸ್ ಮತ್ತು ಇರಾನ್ ನಿಯಂತ್ರಣವಿಲ್ಲದೆ ಗಾಝಾದಲ್ಲಿ ಹೊಸ ಬದಲಾವಣೆ ತರಲಿದೆ", ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.