ಪ್ರಾರ್ಥನೆ
Update: 2020-10-19 19:30 GMT
ವೃದ್ಧನೊಬ್ಬ ವಿದೇಶದಲ್ಲಿದ್ದ ತನ್ನ ಮಗನಿಗೆ ‘ಕಷ್ಟದಲ್ಲಿದ್ದೇನೆ, ಒಂದಿಷ್ಟು ಹಣ ಕಳುಹಿಸು’’ ಎಂದು ಬರೆದ.
‘‘ಅಪ್ಪಾ, ಇಲ್ಲಿ ವ್ಯವಹಾರ ಕೆಟ್ಟು ಹೋಗಿದೆ. ಸದ್ಯಕ್ಕೆ ಹಣ ಕಳುಹಿಸಲು ಸಾಧ್ಯವಿಲ್ಲ. ಯಾವುದಕ್ಕೂ ನಿನ್ನ ಮಗನಲ್ಲಿ ಹಣವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸು...ಕೈಯಲ್ಲಿ ಹಣ ಬಂದಾಗ ಕಳುಹಿಸುವೆ’’ ಮಗ ಉತ್ತರಿಸಿದ.
ವೃದ್ಧ ಪ್ರತ್ಯುತ್ತರಿಸಿದ ‘‘ಮಗ, ದೇವರಲ್ಲಿ ‘ನನಗೇ ಹಣವನ್ನು ಕೊಡು’ ಎಂದು ನಾನು ಪ್ರಾರ್ಥಿಸಿದೆ. ದೇವರು ಕೊಟ್ಟರೆ, ನಾನೇ ನಿನಗೆ ದುಡ್ಡು ಕಳುಹಿಸಿ ನಿನ್ನ ಆರ್ಥಿಕ ಸಮಸ್ಯೆಯನ್ನು ಪರಿಹರಿಸುವೆ’’