ದಾಂಪತ್ಯ

Update: 2021-12-26 12:23 IST
Editor : ಮಗು
ದಾಂಪತ್ಯ
  • whatsapp icon

ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿದಳು. ಪತಿ ವಿರೋಧಿಸಿದ.

ಇಬ್ಬರು ಕೋರ್ಟು, ಕಚೇರಿ ಅಲೆದಾಡ ತೊಡಗಿದರು.

ಇಬ್ಬರ ವಕೀಲರೂ ಪ್ರಬಲರು. ಒಬ್ಬ ಮಹಿಳಾ ವಕೀಲೆ. ಇನ್ನೊಬ್ಬ ಪುರುಷ ವಕೀಲ. ವಾದ-ಪ್ರತಿವಾದ ಬಿರುಸಿನಿಂದ ನಡೆಯಿತು.
ಕೊನೆಗೂ ದಂಪತಿ ಬೇರೆ ಬೇರೆ ಆದರು.

ಕೋರ್ಟಿನಿಂದ ವಿಚ್ಛೇದಿತರು ಹೊರ ಬಂದಾಗ ಕ್ಯಾಂಟೀನ್‌ನಲ್ಲಿ ವಾದಿಸಿದ ಇಬ್ಬರು ವಕೀಲರು ನಗುತ್ತಾ ಟೀ ಕುಡಿಯುತ್ತಿದ್ದರು. ವಿಚ್ಛೇದಿತ ದಂಪತಿ ಧನ್ಯವಾದ ಹೇಳಲು ಅವರ ಬಳಿ ಹೋದರು.
ಪುರುಷ ವಕೀಲ ಹೇಳಿದ: ‘‘ಈಕೆ ನನ್ನ ಪತ್ನಿ. ನಮ್ಮ ಮದುವೆಗೆ 25 ವರ್ಷ ತುಂಬುತ್ತದೆ. ಸಮಾರಂಭ ಇದೆ. ಬರಬೇಕು. ನಮ್ಮ ಈ ಹಿಂದಿನ ಎಲ್ಲ ವಿಚ್ಛೇದಿತ ಕಕ್ಷಿದಾರರನ್ನು ಕರೆದಿದ್ದೇವೆ. ನಮ್ಮ ದಾಂಪತ್ಯದ ಯಶಸ್ವಿಗೆ ಅವರ ಪಾತ್ರ ದೊಡ್ಡದು.

Writer - ಮಗು

contributor

Editor - ಮಗು

contributor

Similar News

ಬೆಲೆ

ಬೆಲೆ

ಶಾಂತಿ

ಶಾಂತಿ

ಬೆಳಕು

ಬೆಳಕು

ಮಾನ್ಯತೆ!

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಪ್ರಾರ್ಥನೆ

ಗೊಂದಲ!

ಆ ಚಿಂತಕ!