ಝಲಕ್
Update: 2021-03-27 19:30 GMT
ಅಭಿವೃದ್ಧಿ
ಅಧಿಕಾರಿ ಬಂದು ಹೇಳಿದ ‘‘ದೇಶದ ಅಭಿವೃದ್ಧಿಗಾಗಿ ನೀನು ನಿನ್ನ ಭೂಮಿಯನ್ನು ಬಿಟ್ಟುಕೊಡಬೇಕು?’’
ರೈತನ ಕುಟುಂಬ ಬೀದಿಗೆ ಬಿತ್ತು. ಜೋಪಡಾ ಪಟ್ಟಿಯಲ್ಲಿ ವಾಸಿಸ ತೊಡಗಿದ. ಒಂದು ದಿನ ಅಧಿಕಾರಿಯ ಬಳಿ ಹೋಗಿ ಕೇಳಿದ ‘‘ಅದ್ಯಾವುದೋ ದೇಶದ ಅಭಿವೃದ್ಧಿಗಾಗಿ ನನ್ನ ಭೂಮಿ ಕಿತ್ತುಕೊಂಡಿರಿ. ಹೇಳಿ...ಆ ದೇಶ ಅಭಿವೃದ್ಧಿಯಾಯಿತೇ?’’
ಗೊತ್ತಿಲ್ಲ
‘‘ಎಲ್ಲಿಗೆ ಹೊರಟಿದ್ದೀಯ?’’
‘‘ಒಂದಿಷ್ಟು ಖರೀದಿ ಮಾಡುವುದಕ್ಕಿತ್ತು. ಶಾಪಿಂಗ್‌ಗೆಂದು ಮಾಲ್ ಕಡೆ ಹೊರಟಿದ್ದೇನೆ’’
‘‘ಏನು ಖರೀದಿಸುವುದಕ್ಕೆ ಹೊರಟಿದ್ದೀಯ?’’
‘‘ಗೊತ್ತಿಲ್ಲ, ಶಾಪಿಂಗ್ ಮಾಲ್‌ನಲ್ಲಿ ಏನೇನಿದೆ ಎಂದು ನೋಡಿ ಖರೀದಿಸಲಿದ್ದೇನೆ’’