ವ್ಯಾಪಾರ

Update: 2021-04-29 19:30 GMT
Editor : -ಮಗು

ಆವರೆಗೆ ಕೃಷಿಯಲ್ಲೇ ಆಸಕ್ತಿ ಹೊಂದಿದ್ದ ಸಂತನಿಗೆ ಒಂದಿಷ್ಟು ಸಮಯ ವ್ಯಾಪಾರ ಮಾಡಿದರೆ ಹೇಗೆ ಅನ್ನಿಸಿತು.
ಸರಿ, ಸಂತ ಊರ ಮಧ್ಯೆ ಅಂಗಡಿಯಿಟ್ಟ.
ಪ್ರಾಮಾಣಿಕವಾಗಿ ವ್ಯಾಪಾರ ಮಾಡುತ್ತಿದ್ದುದರಿಂದಲೋ ಏನೋ, ವ್ಯಾಪಾರದಲ್ಲಿ ನಷ್ಟ.
ಬೇರೆ ಬೇರೆ ಬಗೆಯ ವ್ಯಾಪಾರಕ್ಕಿಳಿದ. ಆದರೆ ಲಾಭವಿಲ್ಲ.
ಕಟ್ಟ ಕಡೆಗೆ ಆತ, ಗುಜರಿ ಅಂಗಡಿಯನ್ನು ಇಟ್ಟ.
ಯಾರೋ ತಮಾಷೆಯ ಧ್ವನಿಯಲ್ಲಿ ಸಂತನ ಬಳಿ ಕೇಳಿದರು ‘‘ಹೋಗಿ ಹೋಗಿ ಗುಜರಿ ಅಂಗಡಿ ಇಟ್ಟಿದ್ದೀರಲ್ಲ ಗುರುಗಳೇ...ಏನಾಯಿತು?’’
‘‘ಸತ್ಯ, ನ್ಯಾಯಗಳೆಲ್ಲ ಗುಜರಿ ಸೇರುತ್ತಿರುವ ದಿನಗಳು ಇವು. ಅದಕ್ಕೆ ಗುಜರಿ ಅಂಗಡಿಯನ್ನು ಇಟ್ಟೆ’’ ಸಂತ ವಿಷಾದದಿಂದ ಉತ್ತರಿಸಿದ.

Writer - -ಮಗು

contributor

Editor - -ಮಗು

contributor

Similar News

ಬೆಲೆ
ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ಆಕ್ಸಿಜನ್
ಝಲಕ್
ಸ್ವರ್ಗ
ಪ್ರಾರ್ಥನೆ
ಗೊಂದಲ!
ಆ ಚಿಂತಕ!