ಪಳನಿಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಚುನಾವಣಾ ಪ್ರಚಾರಕ್ಕೆ ರಾಜಾಗೆ ನಿರ್ಬಂಧ
Update: 2021-04-01 11:38 GMT
ಹೊಸದಿಲ್ಲಿ: ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ವಿರುದ್ಧ ಹಾಗೂ ಮಹಿಳೆಯರ ಮಾತೃತ್ವದ ಘನತೆ ವಿರುದ್ಧ ಹೇಳಿಕೆಗಳನ್ನು ನೀಡಿರುವ ಡಿಎಂಕೆ ನಾಯಕ ರಾಜಾಗೆ ಚುನಾವಣಾ ಆಯೋಗವು 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿಬಂಧಿಸಿದೆ.
ಪಳನಿಸ್ವಾಮಿ ವಿರುದ್ದ ವಿವಾದಾತ್ಮಕ ಹೇಳಿಕೆಗಳನ್ನು ವಿವರಿಸುವಂತೆ ರಾಜಾಗೆ ಈ ಹಿಂದೆ ಕೇಳಲಾಗಿತ್ತು.
ರಾಜಾ ಅವರ ಭಾಷಣವು ಅವಹೇಳನಕಾರಿ ಮಾತ್ರವಲ್ಲ, ಮಹಿಳೆಯರ ಮಾತೃತ್ವದ ಘನತೆಯನ್ನು ಕುಗ್ಗಿಸುತ್ತದೆ. ಇದು ಚುನಾವಣಾ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ತಮ್ಮ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರನ್ನು ಮುಖ್ಯಮಂತ್ರಿ ಪಳನಿಸ್ವಾಮಿಗೆ ಹೋಲಿಸಿದ್ದ ರಾಜಾ, ಸರಿಯಾದ ಮದುವೆ ಹಾಗೂ ಆಚರಣೆಗಳ ನಂತರ ಒಂಭತ್ತು ತಿಂಗಳ ಬಳಿಕ ಸ್ಟಾಲಿನ್ ಸರಿಯಾದ ರೀತಿಯಲ್ಲಿ ಜನಿಸಿದ್ದರು ಎಂದು ಹೇಳಬಹುದು. ಪಳನಿಸ್ವಾಮಿ ಸಮಯಕ್ಕಿಂತ ಮೊದಲೇ ಜನಿಸುವ ಮಗುವಿನಂತೆ ಜನಿಸಿದ್ದರು. ಅವರು ಇದಕ್ಕಿದ್ದಂತೆ ಜನಿಸಿದ್ದರು ಎಂದು ಹೇಳಿದ್ದರು.