ಕಾಮನ್ ವೆಲ್ತ್ ಗೇಮ್ಸ್ ವಿಲೇಜ್, ಕೆಲವು ಶಾಲೆಗಳನ್ನು ಕೋವಿಡ್ ಸೌಲಭ್ಯಗಳಾಗಿ ಪರಿವರ್ತನೆ: ಕೇಜ್ರಿವಾಲ್
Update: 2021-04-18 07:01 GMT
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ವೈರಸ್ ಪ್ರಕರಣಗಳ ಏರಿಕೆಯನ್ನು ನಿಭಾಯಿಸಲು ಕಷ್ಟವಾಗುತ್ತಿರುವ ಕಾರಣ ಕಾಮನ್ ವೆಲ್ತ್ ಗೇಮ್ಸ್ ವಿಲೇಜ್ ಹಾಗೂ ಕೆಲವು ಶಾಲೆಗಳನ್ನು ಕೋವಿಡ್ ರೋಗಿಗಳಿಗೆ ಸೌಲಭ್ಯಗಳನ್ನಾಗಿ ಮಾಡಲಾಗುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಶನಿವಾರ ಸಂಜೆ 24 ಗಂಟೆಗಳ ಅವಧಿಯಲ್ಲಿ ದಿಲ್ಲಿಯಲ್ಲಿ 24,000 ಹೊಸ ಪ್ರಕರಣಗಳು ಪತ್ತೆಯಾಗಿದ್ದರಿಂದ ಹಾಸಿಗೆಗಳು, ಆಮ್ಲಜನಕ ಮತ್ತು ಅಗತ್ಯ ಔಷಧಗಳ ಕೊರತೆಯಾಗಿವೆ.
ಮುಖ್ಯಮಂತ್ರಿ ಕೇಜ್ರಿವಾಲ್ ರವಿವಾರ ಬೆಳಿಗ್ಗೆ ಸಂಪುಟ ಸಭೆ ನಡೆಸಿದರು, ಇದರಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಕೂಡ ಭಾಗವಹಿಸಿದ್ದರು.
ದಿಲ್ಲಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಐಸಿಯು ಹಾಸಿಗೆಗಳು ವೆಂಟಿಲೇಟರ್‌ಗಳನ್ನು ಆಕ್ರಮಿಸಿಕೊಂಡಿರುವುದರಿಂದ ಜನರು ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗಾಗಿ ಹೆಣಗಾಡುತ್ತಿದ್ದಾರೆ.