ಸಚಿನ್ ಪೈಲಟ್ ಬಣದ ಕಾಂಗ್ರೆಸ್ ಶಾಸಕ ಹೇಮರಾಮ್ ಚೌಧರಿ ರಾಜೀನಾಮೆ

Update: 2021-05-18 16:20 GMT

ಜೈಪುರ: ರಾಜಸ್ಥಾನದ ರಾಜಕೀಯಕ್ಕೆ ಹೊಸ ತಿರುವು ಲಭಿಸಿದ್ದು, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಬಣದೊಂದಿಗೆ ಗುರುತಿಸಿಕೊಂಡಿರುವ  ಹಿರಿಯ ಕಾಂಗ್ರೆಸ್ ಶಾಸಕ ಹೇಮರಾಮ್ ಚೌಧರಿ, ತಮ್ಮ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಸಿ.ಪಿ. ಜೋಶಿ ಅವರಿಗೆ ಮಂಗಳವಾರ ಕಳುಹಿಸಿದ್ದಾರೆ. ಇದು ರಾಜ್ಯಗಳ ರಾಜಕೀಯ ವಲಯಗಳಲ್ಲಿ ಏರಿಳಿತಗಳನ್ನು ಸೃಷ್ಟಿಸಿದೆ.

ಕಳೆದ ವರ್ಷ ಜುಲೈನಲ್ಲಿ, ಪೈಲಟ್ ಬಣವು ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್ ಅವರ ನಾಯಕತ್ವದ ವಿರುದ್ಧ ಬಂಡಾಯ ಎದ್ದಿತ್ತು.ಆದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ  ದಿವಂಗತ ಅಹ್ಮದ್ ಪಟೇಲ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಈ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾದ ನಂತರ 19 ಬಂಡಾಯ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.

ಬಂಡಾಯ ನಾಯಕರು ಪಕ್ಷಕ್ಕೆ ಮರಳಿದ ನಂತರವೂ ಅವರಿಗೆ ಯಾವುದೇ ಸಚಿವ ಸ್ಥಾನ ನೀಡಲಾಗಿಲ್ಲ, ಅವರ ಕುಂದುಕೊರತೆಗಳನ್ನು ಬಗೆಹರಿಸಲಾಗಿಲ್ಲ ಎನ್ನಲಾಗಿದ್ದು, ಸಮಸ್ಯೆಗಳ ಬಗ್ಗೆ ಚೌಧರಿ ಧ್ವನಿ ಎತ್ತಿದ್ದಾರೆ.

ಪೈಲಟ್ ಬಣದ ಕೆಲವು ಶಾಸಕರು ವಿಧಾನಸಭೆಯೊಳಗೆ ರಾಜ್ಯ ಸರಕಾರದ ಕಾರ್ಯವೈಖರಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News