ಅಸ್ಸಾಂ: ವಾಮಾಚಾರ ಆರೋಪ, ವ್ಯಕ್ತಿಯ ಥಳಿಸಿ ಹತ್ಯೆ

Update: 2021-05-25 14:52 GMT

ಹೊಸದಿಲ್ಲಿ: ವಾಮಾಚಾರದಲ್ಲಿ ತೊಡಗಿದ್ದಾನೆ  ಎಂಬ ಆರೋಪದ ಮೇಲೆ ಸೋಮವಾರ ಅಸ್ಸಾಂನಲ್ಲಿ 50 ರ ವಯಸ್ಸಿನ  ವ್ಯಕ್ತಿಯೊಬ್ಬನನ್ನುಥಳಿಸಿ  ಹತ್ಯೆ ಗೈಯ್ಯಲಾಗಿದೆ ಎಂದು Indian Express ವರದಿ ಮಾಡಿದೆ.

ರಾಜ್ಯ ರಾಜಧಾನಿ ಗುವಾಹಟಿಯಿಂದ 79 ಕಿ.ಮೀ. ದೂರದಲ್ಲಿರುವ ತಮುಲ್‌ಪುರ ಬಳಿಯ ಕುಮರಿಕಟಾ ಪೊಲೀಸ್ ಹೊರಠಾಣೆ ವ್ಯಾಪ್ತಿಯ ಬೊಗೊರಿಬಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರನ್ನು ಬಂಧಿಸಲಾಗಿದ್ದು, ಹೆಚ್ಚಿನ ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಸಂತ್ರಸ್ತನ ಪತ್ನಿ ನೀಡಿದ ದೂರನ್ನು ಸ್ವೀಕರಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಈವರೆಗೆ ಐದು ಜನರನ್ನು ವಶಕ್ಕೆ ಪಡೆದಿದ್ದೇವೆ. ಇದು ವಾಮಾಚಾರಕ್ಕೆ ಸಂಬಂಧಿಸಿದ  ಘಟನೆ ಎಂದು ನಾವು ಶಂಕಿಸಿದ್ದೇವೆ. ನಮ್ಮ ತನಿಖೆ ನಡೆಯುತ್ತಿದೆ”ಎಂದು ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News