ಕೋವಿಡ್ ಲಸಿಕೆಯ 1.65 ಕೋಟಿ ಡೋಸ್ ಗಳು ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಲ್ಲಿ ಲಭ್ಯ: ಕೇಂದ್ರ
ಹೊಸದಿಲ್ಲಿ, ಜೂ. 4: ಪ್ರಸಕ್ತ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಲಸಿಕೆಯ 1.65 ಕೋಟಿಗೂ ಅಧಿಕ ಡೋಸ್ ಗಳು ಲಭ್ಯವಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ. ಇದುವರೆಗೆ, 24 ಕೋಟಿಗೂ ಅಧಿಕ ಡೋಸ್ ಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಪೋಲಾಗಿರುವುದು ಸೇರಿದಂತೆ ಲಸಿಕೆಗಳ ಒಟ್ಟು 226,508,508 ಡೋಸ್ ಗಳು ಬಳಕೆಯಾಗಿದೆ ಎಂದು ಶನಿವಾರ ಬೆಳಗ್ಗೆ 8 ಗಂಟೆಗೆ ಲಭ್ಯವಿದ್ದ ಸಚಿವಾಲಯದ ದತ್ತಾಂಶ ಹೇಳಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸಕ್ತ ಕೋವಿಡ್ ಲಸಿಕೆಯ 1.65 (1,65,00,572) ಕೋಟಿಗೂ ಅಧಿಕ ಡೋಸ್ ಗಳು ಲಭ್ಯವಿವೆ ಎಂದು ಹೇಳಿಕೆ ತಿಳಿಸಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ನೇರ ಖರೀದಿ ವರ್ಗದ ಮೂಲಕ ಇದುವರೆಗೆ ಲಸಿಕೆಯ 243,009,080 ಡೋಸ್ ಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.