"ಬಿಜೆಪಿ ಇದುವರೆಗೂ ವಾರ್ಷಿಕ ದೇಣಿಗೆಯ ವರದಿ ಸಲ್ಲಿಸಿಲ್ಲ, ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲವೇಕೆ?"

Update: 2021-06-08 07:47 GMT

ಹೊಸದಿಲ್ಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ. ಸಿಪಿಎಂ. ಎನ್ಸಿಪಿ ಹಾಗೂ ಬಿಎಸ್ಪಿ ಪಕ್ಷಗಳು ತಮ್ಮ ವಾರ್ಷಿಕ ದೇಣಿಗೆಗಳ ಕುರಿತಾದಂತೆ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಆದರೆ 2021 ಜೂನ್‌ ತಿಂಗಳಾದರೂ ಬಿಜೆಪಿ ಇದುವರೆಗೆ ತಮ್ಮ 2019-20ರ ತಮ್ಮ ವರದಿಯನ್ನು ಏಕೆ ಸಲ್ಲಿಸಿಲ್ಲ ಎಂದು ಆರ್ಟಿಐ ಕಾರ್ಯಕರ್ತ ಸಾಖೇತ್‌ ಗೋಖಲೆ ಪ್ರಶ್ನಿಸಿದ್ದಾರೆ. 

ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಕುರಿತು ಟ್ವೀಟ್‌ ಮಾಡಿದ ಅವರು, " ಜೂನ್‌ 2021 ಆಯ್ತು. ಇದುವರೆಗೂ ಚುನಾವಣಾ ಆಯೋಗಕ್ಕೆ ಬಿಜೆಪಿಯು ತಮ್ಮ ವಾರ್ಷಿಕ ದೇಣಿಗೆಗಳ ವರದಿಯನ್ನು ಸಲ್ಲಿಸಿಲ್ಲ. ಕಾಂಗ್ರೆಸ್.‌ ಸಿಪಿಎಂ, ಎನ್ಸಿಪಿ ಹಾಗೂ ಬಿಎಸ್ಪಿ ಈಗಾಗಲೇ ವರದಿ ಸಲ್ಲಿಸಿವೆ. ಆದರೆ ಇದುವರೆಗೆ ತನ್ನ ಹಣದ ಕುರಿತು ವರದಿ ಸಲ್ಲಿಸದ ಬಿಜೆಪಿ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

"ನಾನು ಈಗಾಗಲೇ ಭಾರತೀಯ ಚುನಾವಣಾ ಆಯೋಗಕ್ಕೆ ಆರ್ಟಿಐ ಅರ್ಜಿ ಸಲ್ಲಿಸಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದೇನೆ. 

ಬಿಜೆಪಿ ಪಕ್ಷವು ತನ್ನ ವರದಿಯನ್ನು ಸಲ್ಲಿಸಿದೆಯೇ? ಒಂದು ವೇಳೆ ಸಲ್ಲಿಸಿಲ್ಲ ಎಂದಾದರೆ ನೀವು ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಒಂದು ಕ್ರಮ ಕೈಗೊಂಡಿದ್ದರೆ ಅದರ ಕುರಿತು ದೃಢೀಕೃತ ಪತ್ರದ ಮೂಲಕ ಮಾಹಿತಿ ಸಲ್ಲಿಸಬೇಕು ಎಂದಿದ್ದಾರೆ. ಅಲ್ಲದೇ, "ಚುನಾವಣಾ ಆಯೋಗವು ಬಿಜೆಪಿಯ ಸ್ನೇಹಿತನಂತೆ ಕಾರ್ಯನಿರ್ವಹಿಸುತ್ತಿದ್ದರೆ ಅದು ಖಂಡಿತಾ ನಮಗೆ ಉತ್ತರ ನೀಡಬೇಕು" ಎಂದು ಅವರು ಟ್ವೀಟ್‌ ಮೂಲಕ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News